ಕಾರ್ಕಳ ಘನ ತ್ಯಾಜ್ಯ ಘಟಕದಲ್ಲಿ ಬೆಂಕಿ: ವಿಷಕಾರಿ ಹೊಗೆ-ಪುರಸಭೆ ಮೌನ

0

ಕಾರ್ಕಳ : ಪುರಸಭೆ ವ್ಯಾಪ್ತಿಯ ಕರಿಯಕಲ್ಲು ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನ. 29ರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, 6 ದಿನಗಳಿಂದ ಹೊಗೆಯಾಡುತ್ತಿದೆ. ಪುರಸಭೆಯ 13ನೇ ವಾರ್ಡ್ನ ಲ್ಲಿರುವ ಕರಿಯಕಲ್ಲು ಘನ ತ್ಯಾಜ್ಯ ನಿರ್ಹಹಣಾ ಘಟಕದಲ್ಲಿ (ಎಸ್‌ಎಲ್‌ಆರ್‌ಎಂ) ವರ್ಷದಲ್ಲಿ ಒಂದೆರಡು ಬಾರಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಇದೇ ವರ್ಷದಲ್ಲಿ ಅಂದರೆ ಮಾರ್ಚ್‌ 20 ಮತ್ತು 24ರಂದು ಎರಡು ಬಾರಿ ಬೆಂಕಿ ಅವಘಡ ಸಂಭವಿಸಿತ್ತು. ಸೆಕ್ಯೂರಿಟಿ ಗಾರ್ಡ್‌ ಇದ್ದರೂ ಬೆಂಕಿ ಅವಘಡ ನಡೆಯುವುದಾದರೂ ಹೇಗೆ ? ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಪರಿಸರ ಮಾಲಿನ್ಯ-ಆರೋಗ್ಯ ಸಮಸ್ಯೆ
ಕರಿಯಕಲ್ಲು ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೃಹತ್‌ಪ್ರಮಾಣದಲ್ಲಿ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ಶೇಖರಣೆಯಾಗುವ ಕಾರಣ ಬೆಂಕಿ ಹಚ್ಚಿಕೊಂಡಾಗ ಭಾರಿ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡು ಪರಿಸರ ಮಾಲಿನ್ಯವಾಗುತ್ತಿದೆ. ಈ ಭಾಗದಲ್ಲಿ ಹಲವಾರು ಮನೆಗಳಿರುವುದರಿಂದ ಅಲ್ಲಿನ ನಿವಾಸಿಗಳಿಗೆ ವಿಷಕಾರಿ ಹೊಗೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತಿದೆ. ಆದರೂ ಪುರಸಭಾ ಅಧಿಕಾರಿಗಳು ಮೌನವಹಿಸುತ್ತಾರೆ.

ಅಸಮರ್ಪಕ ಕಸ ವಿಲೇವಾರಿ
ಕಳೆದ 15 ದಿನಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯೂ ಸಮರ್ಪಕವಾಗುತ್ತಿಲ್ಲ. ವಿಲೇವಾರಿಯಾಗದೇ ಅಲ್ಲಲ್ಲಿ ರಸ್ತೆ ಬದಿ ಕಸದ ರಾಶಿ ಕಾಣಸಿಗುತ್ತಿದೆ. ದನಕರುಗಳು, ನಾಯಿ ಕಸದ ರಾಶಿಯನ್ನು ಚೆಲ್ಲುತ್ತಿವೆ. ಇದು ಕಾರ್ಕಳ ಪುರಸಭೆಯ ಬೇಜವಾಬ್ದಾರಿಗೆ ಹಿಡಿದ ಕನ್ನಡಿ. ಪುರಸಭಾ ಪರಿಸರ ಅಭಿಯಂತರರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಕಸದ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.---
Previous article50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಮನವಿ
Next articleಬಜರಂಗ ದಳದ ಮುಖಂಡನ ಮೇಲೆ ಹಲ್ಲೆ ಬಳಿಕ ಶಿವಮೊಗ್ಗ ಉದ್ವಿಗ್ನ : ನಿಷೇಧಾಜ್ಞೆ ಜಾರಿ

LEAVE A REPLY

Please enter your comment!
Please enter your name here