50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಮನವಿ

ಬೆಂಗಳೂರು, ಡಿ. 4 : ಸರಕಾರಿ ಮತ್ತು ಅನುದಾನಿತ ಶಾಲೆಗಳ 50 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರಿಗೆ ಪಂಚಾಯತ್‌ ಚುನಾವಣಾ ಕರ್ತವ್ಯ ಹೊರಿಸಬಾರದು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗುವ ಸಿಬಂದಿಗಳ ಪೈಕಿ ಶೇ. 50 ಶಿಕ್ಷಕರೇ ಇರುತ್ತಾರೆ ಮತ್ತು ಹೆಚ್ಚಿನವರು 50 ವರ್ಷ ಮೇಲ್ಪಟ್ಟವರಾಗಿರುತ್ತಾರೆ. ಆದರೆ ಕೊರೊನ ಕಾಲದಲ್ಲಿ 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು ಅಪಾಯಕಾರಿ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಾಯಕ ಶಿಕ್ಷಕರ ಸಂಘ ಹೇಳಿದೆ.























































































































error: Content is protected !!
Scroll to Top