ಓರ್ಗಾನಿಕ್‌ ಕಾರ್ಕಳಕ್ಕೆ ಗುರುಕಿರಣ್‌, ಕಾಪಿಕಾಡ್‌, ಪಡೀಲ್‌ ಭೇಟಿ

ಕಾರ್ಕಳ, ನ. 27 : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌, ತುಳು ಸಿನೇಮಾ ಮತ್ತು ನಾಟಕ ನಿರ್ದೇಶಕ ಹಾಗೂ ನಟ ದೇವದಾಸ್‌ ಕಾಪಿಕಾಡ್‌, ತುಳು ಸಿನೇಮಾ ಮತ್ತು ನಾಟಕಗಳ ಜನಪ್ರಿಯ ನಟ ನವೀನ್‌ ಡಿ. ಪಡೀಲ್‌ ನಿನ್ನೆ ಕಾರ್ಕಳದ ಸಾವಯವ ಉತ್ಪನ್ನಗಳ ಮಳಿಗೆ ಓರ್ಗಾನಿಕ್‌ ಕಾರ್ಕಳಕ್ಕೆ ಭೇಟಿ ನೀಡಿ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುಕಿರಣ್‌ ಕೊರೊನ ಕಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾವಯವ ಉತ್ಪನ್ನಗಳು ಹೆಚ್ಚು ಸಹಕಾರಿ. ಕಾರ್ಕಳದಲ್ಲಿ ಇಂಥ ಒಂದು ಮಳಿಗೆ ಪ್ರಾರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಓರ್ಗಾನಿಕ್‌ ಕಾರ್ಕಳದ ಮಾಲಕರಾದ ವರ್ಷಾಪೂರ್ಣಾ ಮತ್ತು ರಕ್ಷಿತ್‌ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಜಾ ಟಾಕೀಸ್‌ ಮೋಹನ್‌ ಮತ್ತು ಭಕ್ತಿವರ್ಧನ್‌ ಉಪಸ್ಥಿತರಿದ್ದರು.



































































































error: Content is protected !!
Scroll to Top