ಕರುಣಾಳು ಬಾ ಬೆಳಕೆ ಕಾರ್ಯಕ್ರಮದಡಿ ಸೋಲಾರ್‌ ಘಟಕ ಹಸ್ತಾಂತರ

ಕಾರ್ಕಳ, ನ.16: ಕರುಣಾಳು ಬಾ ಬೆಳಕೆ ಕಾರ್ಯಕ್ರಮದ ಅಡಿಯಲ್ಲಿ 11ನೇ ಮನೆಗೆ ಬೆಳಕು ನೀಡುವ ಕಾರ್ಯಕ್ರಮ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯಿತು. ವಿನಾಯಕ್ ಫ್ರೆಂಡ್ಸ್ ಕಾರ್ಕಳ ಇವರು ದೀಪಾವಳಿ ಉಡುಗೊರೆಯಾಗಿ ಸದ್ಭಾವನ ನಗರದ ವೆಂಕಟೇಶ್ ದಂಪತಿ ಮನೆಗೆ ಸೋಲಾರ್ ಘಟಕವನ್ನು ನೀಡಿ ನೀಡಿದರು. ಈ ಕಾರ್ಯಕ್ರಮವನ್ನು ಯುವವಾಹಿನಿ ಘಟಕ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ರಮೇಶ್ ಕಾರ್ಣಿಕ್ , ಪುರಸಭಾ ಸದಸ್ಯೆ ಭಾರತಿ ಅಮೀನ್, ನೀತಾ ಪೂಜಾರಿ ಹಾಗೂ ವಿನಾಯಕ್ ಫ್ರೆಂಡ್ಸ್ ಬಳಗದವರು, ಯುವ ವಾಹಿನಿ ಘಟಕ ಅಧ್ಯಕ್ಷ ಗಣೇಶ್ ಸಾಲಿಯಾನ್, ಪ್ರಕಾಶ್ ಕೊರಿಯನ್, ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ರೋಟರಾಕ್ಟ್ ಕಾರ್ಯದಶಿ ಸಮೀರ್ ಹೆಗ್ಡೆ ಉಪಸ್ಥಿರಿದ್ದರು.



































































































error: Content is protected !!
Scroll to Top