ಉದ್ಯಮಿಯ ಮೇಲೆ ತಲವಾರಿನಿಂದ ಹಲ್ಲೆ

ಮಂಗಳೂರು,ನ.16 : ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರದಲ್ಲಿ ನಿನ್ನೆ ರಾತ್ರಿ ಉದ್ಯಮಿಯೊಬ್ಬರನ್ನು ತಲ್ವಾರ್ ನಿಂದ ಕಡಿದು ಸಾಯಿಸುವ ಪ್ರಯತ್ನ ನಡೆದಿದೆ. ಕಂದಾವರ ಕೈಕಂಬ ನಿವಾಸಿ ಅಬ್ದುಲ್ ಅಜೀಜ್ (58) ಅವರು ಹಲ್ಲೆಗೊಳಗಾಗಿರುವ ಉದ್ಯಮಿ.ಹಲ್ಲೆಯ ಇಡೀ ದೃಶ್ಯ ಪಕ್ಕದಲ್ಲಿರುವ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ನಿನ್ನೆ ರಾತ್ರಿ 10.30ರ ಸುಮಾರಿಗೆ ಅಬ್ದುಲ್ ಅಜೀಜ್ ನಮಾಜ್ ಮುಗಿಸಿದ ನಂತರ ಮಸೀದಿಯಿಂದ ತನ್ನ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಯುವಕರು ಇದ್ದಕ್ಕಿದ್ದಂತೆ ತಲ್ವಾರ್ ನಿಂದ ಹಲ್ಲೆ ನಡೆಸಿದರು. ಹಲ್ಲೆಯಿಂದ ಅಬ್ದುಲ್ ಅವರ ತಲೆ, ಕೈ ಮತ್ತು ಕಾಲಿಗೆ ಗಾಯಗಳಾಗಿದೆ.
ಇದು ವೈಯುಕ್ತಿಕ ದ್ವೇಷದ ಕಾರಣಕ್ಕೆ ನಡೆದ ದಾಳಿ ಎಂದು ಶಂಕಿಸಲಾಗಿದ್ದು ಗಾಯಗೊಂಡ ಅಜೀಜ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಾವರ ಮಸೀದಿಯ ವ್ಯವಸ್ಥಾಪನಾ ಸಮಿತಿಯ ಸಕ್ರಿಯ ಸದಸ್ಯರಾದ ಅಜೀಜ್ ಟೆಕ್ಸ್ ಟೈಲ್ಸ್ ನಡೆಸುತ್ತಿದ್ದಾರೆ.



































































































error: Content is protected !!
Scroll to Top