Wednesday, October 27, 2021
spot_img
Homeದೇಶಏಳು ತಿಂಗಳ ಬಳಿಕ ಶಿರಡಿ ಸಾಯಿಬಾಬಾ ದರ್ಶನ ಅವಕಾಶ

ಏಳು ತಿಂಗಳ ಬಳಿಕ ಶಿರಡಿ ಸಾಯಿಬಾಬಾ ದರ್ಶನ ಅವಕಾಶ


ಶಿರಡಿ,ನ.16: ಏಳು ತಿಂಗಳಿನಿಂದ ಭಕ್ತರಿಗೆ ಮುಚ್ಚಿದ್ದ ಶಿರಡಿ ಸಾಯಿಬಾಬಾ ಮಂದಿರವನ್ನು ಕೊರೊನಾ ನಿಯಮಗಳನ್ನು ಪಾಲಿಸಿ ಇಂದಿನಿಂದ ತೆರೆಯಲಾಗಿದೆ.
ನಿರ್ದಿಷ್ಟ ಸಮಯದ ಸ್ಲಾಟ್‌ಗಾಗಿ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ನಂತರವೇ ಭಕ್ತರು ದರ್ಶನಕ್ಕೆ ಆಗಮಿಸಬಹುದಾಗಿದೆ. ಇದರ ಜೊತೆಗೆ ಕೊರೊನ ನೆಗೆಟಿವ್ ಆರ್‌ಟಿ-ಪಿಸಿಆರ್ ರಿಸಲ್ಟ್ ಇರುವ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ. 65 ವರ್ಷ ಮೇಲ್ಪಟ್ಟವರಿಗೆ, ಎಂಟರಿಂದ ಹತ್ತು ವರ್ಷದ ಮಕ್ಕಳಿಗೆ ದೇಗುಲ ಪ್ರವೇಶ ಅವಕಾಶ ಇಲ್ಲ.
ಸೋಮವಾರ ಕಾಕಡ ಆರತಿ ನಂತರ ಭಕ್ತರಿಗೆ ಸಾಯಿಬಾಬಾ ದರ್ಶನ ಅವಕಾಶ ನೀಡಲಾಗಿದೆ. ಒಂದು ತಾಸಿನಲ್ಲಿ 900 ಭಕ್ತರಂತೆ ದಿನಕ್ಕೆ 6,000 ಮಂದಿಗೆ ಮಾತ್ರ ದರ್ಶನ ಅವಕಾಶ ನೀಡಲಾಗುವುದು.
ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮುಖ್ಯ ದೇವಾಲಯ ಪ್ರವೇಶಕ್ಕೆ ಮುನ್ನ ಭಕ್ತರು ತಮ್ಮ ಕಾಲುಗಳನ್ನು ತೊಳೆದುಕೊಳ್ಳುವುದು ಸಹ ಕಡ್ದಾಯವಾಗಿದೆ.
ನವೆಂಬರ್ 16 ರ ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ಪೂಜಾ ಸ್ಥಳಗಳನ್ನುತೆರೆಯಲು ಅಲ್ಲಿನ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದಾಗಿನಿಂದ ರಾಜ್ಯದ ಧಾರ್ಮಿಕ ಸ್ಥಳಗಳು ಮುಚ್ಚಿದ್ದವು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!