Homeಇತರ ಸುದ್ದಿಇನ್ನು ವಾಟ್ಸಪ್‌ ಮೂಲಕ ಪೇಮೆಂಟ್‌ ಮಾಡಬಹುದು : ಭಾರತದಲ್ಲಿ ವಾಟ್ಸಪ್‌ ಪೇ ಚಾಲನೆ

Related Posts

ಇನ್ನು ವಾಟ್ಸಪ್‌ ಮೂಲಕ ಪೇಮೆಂಟ್‌ ಮಾಡಬಹುದು : ಭಾರತದಲ್ಲಿ ವಾಟ್ಸಪ್‌ ಪೇ ಚಾಲನೆ

ದಿಲ್ಲಿ, ನ.6 : ಇನ್ನು ನೀವು ವಾಟ್ಸಪ್‌ ಮೂಲಕವೂ ಹಣದ ವ್ಯವಹಾರವನ್ನು ಮಾಡಬಹುದು. ನ.6ರಿಂದ ವಾಟ್ಸಪ್‌ ಪೇ ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರವೇಶ ಪಡೆದುಕೊಂಡಿದೆ. ಸದ್ಯ ಎರಡು ಕೋಟಿ ಬಳಕೆದಾರರಿಗೆ ಸೇವೆ ಒದಗಿಸಲು ಅನುಮತಿಯನ್ನು ನೀಡಲಾಗಿದೆ.
ಎರಡು ವರ್ಷದ ಹಿಂದೆಯೇ ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆರಂಭದಲ್ಲಿ 10 ಲಕ್ಷ ವಾಟ್ಸಪ್‌ ನಂಬರ್‌ ಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಸುರಕ್ಷಿತ ಎಂದು ಖಾತರಿಯಾದ ಬಳಿಕ ಭಾರತದಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ)ನಲ್ಲಿ ವಾಟ್ಸಪ್ ಕಾರ್ಯ ನಿರ್ವಹಿಸುತ್ತದೆ. ಗೂಗಲ್ ಪೇ, ಫೋನ್ ಪೇ ಮತ್ತಿತರ ಅಪ್ಲಿಕೇಷನ್ ಗಳು ಕೆಲಸ ಮಾಡುವಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತವೆ. ನೀವು ವಾಟ್ಸಪ್ ‘ವ್ಯಾಲೆಟ್’ನಲ್ಲಿ ಹಣ ಇಟ್ಟುಕೊಂಡಿರಬೇಕು ಎಂದೇನಿಲ್ಲ.
ಬ್ಯಾಂಕ್ ಖಾತೆಯಲ್ಲಿ ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಇರುವ ಹಣವನ್ನು ವರ್ಗಾವಣೆ ಮಾಡಬಹುದು ಹಾಗೂ ಅದೇ ರೀತಿ ಸ್ವೀಕರಿಸಬಹುದು. ಪಾವತಿಗಾಗಿ ನೋಂದಣಿ ಮಾಡುತ್ತಿದ್ದಂತೆ ವಾಟ್ಸಪ್ ನಿಂದ ಹೊಸದಾಗಿ ಯುಪಿಐ ಐಡಿ ಸೃಷ್ಟಿ ಮಾಡುತ್ತದೆ. ಅಪ್ಲಿಕೇಷನ್ ನಲ್ಲಿ ‘ಪೇಮೆಂಟ್ಸ್’ ವಿಭಾಗಕ್ಕೆ ತೆರಳಿ ಈ ಐಡಿಯನ್ನು ಗುರುತಿಸಬಹುದು.
ನಿಮ್ಮಲ್ಲಿ ಬ್ಯಾಂಕ್ ಖಾತೆ ಮತ್ತು ಡೆಬಿಟ್‌ ಕಾರ್ಟ್‌ ಇರಬೇಕು ಮತ್ತು ಅಕೌಂಟ್ ಗೆ ಫೋನ್ ನಂಬರ್ ಅನ್ನು ಲಿಂಕ್ ಮಾಡಿ, ವಾಟ್ಸಾಪ್ ನಲ್ಲಿ ಪಾವತಿ ಸಕ್ರಿಯಗೊಳಿಸಬಹುದು. ‘ಅಟ್ಯಾಚ್ ಮೆಂಟ್ಸ್’ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಸಾಮಾನ್ಯವಾಗಿ ಫೋಟೋ, ವಿಡಿಯೋಗಳು ಮುಂತಾದವು ಕಳುಹಿಸುವುದಕ್ಕೆ ಬಳಸುವುದು ಇದನ್ನೇ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನ ಫೋನ್ ಕಾಲ್ ಮಾಡಲು ಹಾಗೂ ಸಂದೇಶ ಓದಲು ಅನುಮತಿ ಕೇಳುತ್ತದೆ. ಜತೆಗೆ ಪಾವತಿ ಮಾಡುವ ಸಲುವಾಗಿ ಯುಪಿಐ ಪಾಸ್ ಕೋಡ್ ಅನ್ನು ನಿಗದಿ ಮಾಡಬೇಕು. ಒಂದು ವೇಳೆ ಈಗಾಗಲೇ ಯುಪಿಐ ಅಪ್ಲಿಕೇಷನ್ ಅನ್ನು ಬಳಸುತ್ತಿದ್ದಲ್ಲಿ ಅದೇ ಪಾಸ್ ಕೋಡ್ ಬಳಬಹುದು.
ಯುಪಿಐ ಎನೇಬಲ್ಡ್ ಆಗಿರುವ ಬೇರೆ ಯಾವುದೇ ಅಪ್ಲಿಕೇಷನ್ ಬಳಸುತ್ತಿರುವವರಿಗೆ ವಾಟ್ಸಪ್ ಪೇಮೆಂಟ್ ಬಳಸಿ, ಹಣ ಕಳುಹಿಸಬಹುದು. ಒಂದು ವೇಳೆ ಹಣ ಸ್ವೀಕರಿಸಬೇಕಾದ ವ್ಯಕ್ತಿಯ ಬಳಿ ವಾಟ್ಸಪ್ ಪೇಮೆಂಟ್ಸ್ ಖಾತೆ ಇರದಿದ್ದಲ್ಲಿ ಯುಪಿಐ ಐಡಿ ನಮೂದು ಮಾಡುವ ಆಯ್ಕೆ ಬರುತ್ತದೆ. ಆ ನಂತರ ಗೂಗಲ್ ಪೇ, ಫೋನ್ ಪೇ ಅಥವಾ ಮತ್ಯಾವುದೇ ಐಡಿ ನಮೂದಿಸಿ ಪಾವತಿ ಮಾಡಬಹುದು. ಅದಕ್ಕೆ ಪರ್ಯಾಯವಾಗಿ, ವ್ಯವಹಾರ ಆರಂಭಿಸಲು ವಾಟ್ಸಪ್ ನೋಂದಣಿ ಪ್ರಕ್ರಿಯೆ ಮಾಡಬಹುದು. ಬ್ಯಾಂಕ್ ಖಾತೆ ಹಾಗೂ ಫೋನ್ ನಂಬರ್ ಎರಡೂ ವೆರಿಫಿಕೇಷನ್ ಆಗಬೇಕಾಗುತ್ತದೆ. ಎರಡೂ ಕಡೆಯವರು ಈ ಪ್ರಕ್ರಿಯೆ ಪೂರ್ಣಗೊಳಿಸಿದ ಮೇಲೆ ನಿಮ್ಮ ಫೋನ್ ನಲ್ಲಿನ ಕಾಂಟ್ಯಾಕ್ಟ್ ಗಳ ಮೇಲೆ ಕ್ಲಿಕ್ ಮಾಡಿ, ಹಣ ಸ್ವೀಕಾರ ಹಾಗೂ ಪಾವತಿ ಮಾಡಬಹುದು. ಮೊದಲೇ ಹೇಳಿದಂತೆ ಅಟ್ಯಾಚ್ ಮೆಂಟ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಆಯಿತು.
ವಾಟ್ಸಪ್ ಪೇ ಅನ್ನು ಭಾರತೀಯ ನಂಬರ್ ಗಳಿಗೆ ಹಾಗೂ ಭಾರತೀಯ ಬ್ಯಾಕ್ ಖಾತೆಗಳಿಗೆ ಜೋಡಣೆ ಆಗಿದ್ದಲ್ಲಿ ಮಾತ್ರ ಬಳಸುವುದಕ್ಕೆ ಸಾಧ್ಯ. ಯಾರು ಅಂತಾರಾಷ್ಟ್ರೀಯ ಸಂಖ್ಯೆಯ ವಾಟ್ಸಪ್ ಹೊಂದಿರುತ್ತಾರೋ ಅವರು ಬಳಸುವುದು ಸಾಧ್ಯವಿಲ್ಲ.
1 ಲ.ರೂ. ಮಿತಿ
ವಾಟ್ಸಾಪ್ ಪೇ ನಲ್ಲಿ ಕೂಡ ಯುಪಿಐನಲ್ಲಿ ಇರುವಂತೆ ಒಂದು ಲಕ್ಷ ರೂಪಾಯಿ ವ್ಯವಹಾರದ ಮಿತಿ ಅನ್ವಯ ಆಗುತ್ತದೆ. ಯುಪಿಐ ಎಂಬುದು ಉಚಿತ ಸೇವೆ. ಅದರ ಮೂಲಕ ಮಾಡುವ ವ್ಯವಹಾರಗಳಿಗೆ ಶುಲ್ಕ ಹಾಕುವುದಿಲ್ಲ. ಕೆಲವು ಯುಪಿಐ ಅಪ್ಲಿಕೇಷನ್ ಗಳಲ್ಲಿ ಯಾರಿಗೆ ಹಣ ಕಳುಹಿಸಬೇಕೋ ಅವರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ನಮೂದಿಸಿದರೂ ಸಾಕು, ಹಣ ಕಳುಹಿಸಬಹುದು. ಈ ಫೀಚರ್ ವಾಟ್ಸಪ್ ನಲ್ಲಿ ಇನ್ನೂ ತಂದಿಲ್ಲ.
ಐಸಿಐಸಿಐ, ಎಚ್‌ ಡಿ ಎಫ್‌ ಸಿ, ಆಕ್ಸಿಸ್‌, ಎಸ್‌ ಬಿ ಐ, ಜಿಯೊ ಪೇಮೆಂಟ್ಸ್‌ ಬ್ಯಾಂಕ್‌ ಜೊತೆ ವಾಟ್ಸಪ್‌ ಪೇ ಗಾಗಿ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.
ಹೀಗೆ ಮಾಡಿ
-play storeಗೆ ಹೋಗಿ ವಾಟ್ಸಪ್‌ ಅಪ್‌ ಡೇಟ್‌ ಮಾಡಿಕೊಂಡು ಪೇಮೆಂಟ್ಸ್‌ ಫೀಚರ್‌ ಪಡೆದುಕೊಳ್ಳಿ.
-ಚಾಟ್‌ ವಿಂಡೊದಲ್ಲಿ ಮೇಲೆ ಬಲಬದಿಯಲ್ಲಿ ಕಾಣಿಸುವ ಮೂರು ಚುಕ್ಕಿಗಳನ್ನು tap ಮಾಡಿ.
-ಈಗ ಪೇಮೆಂಟ್ಸ್‌ ಓಪ್ಶನ್‌ ಕಾಣಿಸುತ್ತದೆ. ಅದನ್ನು tap ಮಾಡಿ. ಆಗ ಪೇಮೆಮಟ್ಸ್‌ ವಿಂಡೊ ಓಪನ್‌ ಆಗುತ್ತದೆ. ಇದನ್ನು tap ಮಾಡಿದಾಗ ಹೊಸ ಪೇಮೆಂಟ್‌ ಮಾಡುವ ಆಯ್ಕೆ ಕಾಣಿಸಿಕೊಳ್ಳುತ್ತದೆ.
-accept tap ಮಾಡಿದಾಗ ಹೊಸ ವಿಂಡೊ ತೆರೆದುಕೊಂಡು ಬ್ಯಾಂಕುಗಳ ಹೆಸರು ಕಾಣಿಸುತ್ತದೆ.
-ಬ್ಯಾಂಕ್‌ ಆಯ್ಕೆ ಮಾಡಿಕೊಂಡು ಖಾತೆ ಸಂಖಯೆಯನ್ನು ಖಾತರಿಪಡಿಸಿಕೊಳ್ಳಬೇಕು. ಬ್ಯಾಂಕ್‌ ನಲ್ಲಿ ರಿಜಿಸ್ಟ್ರರ್‌ ಆಗಿರುವ ನಂಬರ್‌ ನಿಂದ ಮಾತ್ರ ವಾಟ್ಸಪ್‌ ಪೇ ಆಪರೇಟ್‌ ಮಾಡಲು ಸಾಧ್ಯ.

 • ವಾಟ್ಸಪ್ ಗೆ ಖಾತೆ ಖಾತರಿಪಡಿಸಿಕೊಳ್ಳಲು ಅನುಮತಿ ಕೊಡಿ.
  -ನಂಬರ್‌ ನಮೂದಿಸಿದ ಕೂಡಲೇ ವಾಟ್ಸಪ್‌ ಬ್ಯಾಂಕ್‌ ಖಾತೆಯಲ್ಲಿ ಪೇಮೆಂಟ್‌ ಸೆಟ್‌ ಅಪ್‌ ಅನ್ನು ಪರಿಶೀಲಿಸುತ್ತದೆ.
  -done ಒತ್ತಿದರೆ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ.
  ಹಣ ಕಳುಹಿಸುವುದು
  -ಯಾರಿಗೆ ಹಣ ಕಳುಹಿಸಬೇಕೊ ಅವರ contact number ಆಯ್ಕೆ ಮಾಡಿಕೊಳ್ಳಿ.
  -caqf ವಿಂಡೊದಲ್ಲಿ clip icon ಒತ್ತಿ
  -ರೂಪಾಯಿ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಿ.
  -ಕಳುಹಿಸುವ ಮೊತ್ತವನ್ನು ನಮೂದಿಸಿ.
  -upi pin ನಮೂದಿಸಿ
  -confirmation message ಬರುವ ತನಕ ಕಾಯಿರಿ, ಬಳಿಕ send ಮಾಡಿ.

LEAVE A REPLY

Please enter your comment!
Please enter your name here

Latest Posts

error: Content is protected !!