
ಕಾರ್ಕಳ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್‌ಫರ್‌ಮೇಷನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಬೋಳ ಸುನಿಲ್ ಕಾಮತ್ ಅವರು ‘ಡಿವೈಸಿಂಗ್ ಸರ್ವೀಸ್ ನೆಗೋಸಿಯೇಶನ್ ಬೇಸ್ಡ್ ಆನ್ ಕ್ಯೂಒಎಸ್ ಪ್ಯಾರಾಮೀಟರ್ಸ್ ಫಾರ್ ಕ್ಲೌಡ್ ಕಂಪ್ಯೂಟಿಂಗ್ ಎನ್ವಯರ್‍ಮೆಂಟ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಘೋಷಿಸಿದೆ. ಸುನಿಲ್ ಕಾಮತ್ ಅವರು ಮಂಗಳೂರು ವಾಮಂಜೂರಿನಲ್ಲಿರುವ ಸಂತ ಜೋಸೆಫ್ ತಾಂತ್ರಿಕ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಅಲ್ಲಿನ ಪ್ರಾಂಶುಪಾಲ ಹಾಗೂ ಕಂಪ್ಯೂಟರ್‍ಸೈನ್ಸ್ ವಿಭಾಗದ ಪ್ರೊಫೆಸರ್ ಡಾ| ರಿಯೋ ಡಿʼ ಸೋಜಾರವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧ ಮಂಡಿಸಿದ್ದರು.