ವಿಜಯದಶಮಿ ವಿಶೇಷ – ವಿಜಯಕ್ಕೆ 20 ಮೆಟ್ಟಿಲು


1) ನಗುವನ್ನು ಧರಿಸಿ – ಅದು ಅತ್ಯಂತ ಹಗುರ ಮತ್ತು ಅಗ್ಗ.
2) ಸಂಬಂಧಗಳನ್ನು ಗೌರವಿಸಿ – ಆದರೆ ಯಾರಿಗೂ ಸಸಾರ ಆಗಬೇಡಿ!
3) ಸರಳವಾದ ಜೀವನ ಶೈಲಿ ನಿಮ್ಮದಾಗಲಿ – ಆದರೆ ಚಿಂತನೆ ಶ್ರೀಮಂತವಾರಲಿ.
4)ಮನಸ್ಸನ್ನು ಕಸದ ಬುಟ್ಟಿ ಮಾಡಬೇಡಿ – ಅದು ಬಹಳ ಸುಂದರವಾದ ನೆನಪುಗಳ ಬುಟ್ಟಿ ಆಗಿರಲಿ.
5) ಕನಸುಗಳು ನಿಮ್ಮ ಯಶಸ್ಸಿನ ಬೀಜ – ಅದನ್ನು ಒಳ್ಳೆ ಜಾಗದಲ್ಲಿ ಬಿತ್ತಿ!
6) ಸತ್ಯ ಹೇಳಲು ತುಂಬಾ ಧೈರ್ಯ ಬೇಕು. ಸುಳ್ಳು ಹೇಳಲು ಮೆಮೊರಿ ಬೇಕು!
7)ಎಲ್ಲರನ್ನೂ ಮೆಚ್ಚಿಸಲು ಹೋಗಬೇಡಿ. ನಿಮ್ಮನ್ನು ನಿಜವಾಗಿ ಪ್ರೀತಿಸುವವರು ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ!
8) ದಿನದ ಕೆಲ ಹೊತ್ತನ್ನಾದರೂ ಚಿಕ್ಕ ಮಕ್ಕಳ ಜೊತೆ, ಪ್ರಾಯದ ಹಿರಿಯರ ಜೊತೆ ಕಳೆಯಿರಿ. ನಿಮ್ಮ ಅಹಂ ಅದರಷ್ಟಕ್ಕೆ ನಾಶ ಆಗುತ್ತದೆ!
9) ಆತ್ಮವಿಶ್ವಾಸವು ಬಹಳ ಶಕ್ತಿಶಾಲಿಯಾದ ಆಯುಧ. ಅದನ್ನು ಬಳಸಿದರೆ ಮಾತ್ರ ಹರಿತ ಆಗುತ್ತದೆ.
10) ಬೆಳೆಯುತ್ತ ಹೋದಂತೆ ಬೇರೆಯವರ ಮೇಲೆ ಅವಲಂಬನೆ ಕಡಿಮೆ ಮಾಡಿ. ಆದರೆ ಯಾರನ್ನು ಕೂಡ ದೂರ ಮಾಡಬೇಡಿ.
11) ಜೀವನದ ಪ್ರತೀ ಸೋಲು ನಿಮಗೆ ಅನುಭವ ನೀಡುತ್ತದೆ, ನೀವು ಅವಲೋಕನ ಮಾಡಿದರೆ ಮಾತ್ರ!
12) ಅತಿಯಾದ ನಿರೀಕ್ಷೆ ಬಹಳ ಸಲ ನಿಮ್ಮನ್ನು ಸೋಲಿಸುತ್ತದೆ. ಹಾಗೆಂದು ಭರವಸೆಯನ್ನು ಕಳೆದುಕೊಳ್ಳಬೇಡಿ.
13) ನೀವು ಜಗತ್ತಿನಲ್ಲಿ ಅನನ್ಯವಾದ ವ್ಯಕ್ತಿ. ಆದ್ದರಿಂದ ನಿಮ್ಮ ಹಾಗೆ ಎಲ್ಲರೂ ಇರಬೇಕೆಂದು ಬಯಸುವುದು ಬೇಡ.
14) ಪ್ರತಿಯೊಬ್ಬರ ಆಂತರಿಕ ಸೌಂದರ್ಯವನ್ನು ಗೌರವಿಸಿ. ಅದು ಮಾತ್ರ ಶಾಶ್ವತ.
14) ನಿಮ್ಮ ಆಂತರಿಕ ಶಕ್ತಿಯನ್ನು ವೃದ್ದಿಸಿಕೊಳ್ಳಿ. ನಿಮಗೆ ಎಲ್ಲಾ ಕಡೆ ಜಾಂಬವಂತರು ಸಿಗುವುದಿಲ್ಲ!
15)ನಿಮ್ಮ ಸಾಮರ್ಥ್ಯಗಳು ನಿಮಗೆ ಅರಿವಾದರೆ ಉತ್ತಮ ನಾಯಕನಾಗಿ ಅರಳುತ್ತೀರಿ. ಮಿತಿಗಳು ಅರಿವಾದರೆ ಐಕಾನ್ ಆಗುತ್ತೀರಿ!
16) ಜಗತ್ತಿನ ಯಾವ ಟೀಮ್ ಕೂಡ ದುರ್ಬಲ ಆಗಿರುವುದಿಲ್ಲ. ಪ್ರೇರಣೆ ನೀಡುವ ನಾಯಕ ಎಲ್ಲವನ್ನೂ ಬದಲಾವಣೆ ಮಾಡಬಲ್ಲ.
17) ಬೇರೆಯವರ ಕಮಾಂಡ್ ಕಾಯುವವನು ಸೈನಿಕ ಆಗುತ್ತಾನೆ. ಸ್ವಂತ ವಿವೇಚನೆ ಮಾಡುವವನು ಯೋಧ ಆಗುತ್ತಾನೆ!18)ಬುದ್ಧಿವಂತರು ಖಂಡಿತ ಗೆಲ್ಲುತ್ತಾರೆ. ಆದರೆ ಹೃದಯವಂತರು ಹೆಚ್ಚು ಗೆಲ್ಲುತ್ತಾರೆ!
19) ಆಯ್ಕೆ ಮಾಡುವ ಸಂದರ್ಭ ಬಂದಾಗ ನಿಮ್ಮ ಮೊದಲ ಆಯ್ಕೆಯೇ ಉತ್ತಮ ಆಗಿರುತ್ತದೆ.
20) ಸೋಲು ಬಂದಾಗ ಪ್ರಯತ್ನ ವನ್ನು ಕೈ ಬಿಡಬೇಡಿ. ಆದರೆ ಪ್ಲಾನ್ ಬದಲಾಯಿಸಿ!

ರಾಜೇಂದ್ರ ಭಟ್‌ ಕೆ.
ಜೇಸಿ ರಾಷ್ಟ್ರೀಯ ತರಬೇತುದಾರ

ರಾಜೇಂದ್ರ ಭಟ್‌ ಕೆ


































































































error: Content is protected !!
Scroll to Top