ಹಿರಿಯಡ್ಕದಲ್ಲಿ ಕೊರೊನಾ ಶುಶ್ರೂಷಾ ಸಿಬಂದಿಗಳ ಮೇಲೆ ಹಲ್ಲೆ ಯತ್ನ

ಉಡುಪಿ, ಸೆ. 16: ಹಿರಿಯಡ್ಕ ಸಮೀಪದ ಬೆಳ್ಳಂಪಳ್ಳಿಯಲ್ಲಿ ಗಂಟಲ ದ್ರವ ಸಂಗ್ರಹಿಸಲು ಹೋದ ಕೊರೊನಾ ಶೂಶ್ರೂಷಾ ಸಿಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಹಾಗೂ ಅವಾಚ್ಯವಾಗಿ ನಿಂದಿಸಿದ ಕುರಿತು ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳ್ಳಂಪಳ್ಳಿ ಆರೋಗ್ಯ ಉಪಕೇಂದ್ರದ ಆರೋಗ್ಯ ಸಹಾಯಕಿಯರಾದ ವಸಂತಿ ಎಸ್‌. ಮತ್ತು ಕಲಾವತಿ ಹಾಗೂ ಸಿಬಂದಿಗಳಾದ  ಜ್ಯೋತಿ ಕಿರಣ್‌,ಪ್ರತಿಮಾ, ಸಂತೋಷ್‌ ಮತ್ತು ಆಶಾ ಕಾರ್ಯಕರ್ತೆ ವಿಜಯಾ ಅವರು ಸೋಮವಾರ ಬೆಳ್ಳಂಪಳ್ಳಿಯ ಕಂಬ್ಲಮಜಲುವಿನಲ್ಲಿ ಕೊರೊನಾ ಸೋಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಸುರೇಂದ್ರ ಎಂಬವರ ಗಂಟಲ ದ್ರವ ಸಂಗ್ರಹಿಸಲು ಹೋದಾಗ ಈ ಘಟನೆ ಸಂಭವಿಸಿದೆ.

ಸುರೇಂದ್ರ ಕೊರೊನಾ ಸಿಬಂದಿಗಳನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಚಪ್ಪಲಿ ಹಾರ ಹಾಕಲು ಮುಂದಾಗಿದ್ದಾರೆ.ನಂತರ ರಾಡ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಸಂತಿ ಅವರ ಸ್ಕೂಟಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





























































































error: Content is protected !!
Scroll to Top