ದಿಲ್ಲಿ, ಸೆ.13: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನಗಳ ಕಲಾಪಗಳಲ್ಲಿ ಪಾಲ್ಗೊಳ್ಳುವುದಿಲ್ಲ.
ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಿದ್ದಾರೆ. ರಾಹುಲ್ ಗಾಂಧಿಯೂ ತಾಯಿ ಜೊತೆ ಹೋಗಿರುವುದರಿಂದ ಕೆಲವು ದಿನಗಳ ಮಟ್ಟಿಗೆ ಇಬ್ಬರೂ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ.
ಸೋನಿಯಾ ಕನಿಷ್ಠ ಎರಡು ವಾರವಾದರೂ ವಿದೇಶದಲ್ಲಿರುತ್ತಾರೆ. ರಾಹುಲ್ ಗಾಂಧಿ ಕೆಲವು ದಿನಗಳಲ್ಲಿ ವಾಪಾಸಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಿದೇಶಕ್ಕೆ ತೆರಳುವ ಮೊದಲು ಸೋನಿಯಾ ಗಾಂಧಿ ತನ್ನ ಸಂಸದೀಯ ಕಾರ್ಯತಂತ್ರ ತಂಡದ ಜೊತೆಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ.



















