ಯುವ ಸಂಶೋಧಕರಿಗೆ ಹೆಚ್ಚಿನ ಮಾರ್ಗದರ್ಶನ-ಪ್ರೋತ್ಸಾಹ ಅಗತ್ಯ: ವಿನಯ ಹೆಗ್ಡೆ


ಕಾರ್ಕಳ : ಪ್ರತಿ ಕ್ಷೇತ್ರದ ಅಗತ್ಯತೆಯನ್ನು ಅರಿತು ಅದಕ್ಕೆ ತಕ್ಕುದಾದ ಪರಿಹಾರವನ್ನು ಕಂಡುಕೊಳ್ಳುವುದು ಸಂಶೋಧನೆಯ ಅತಿಮುಖ್ಯವಾದ ಹಂತ. ಇದರಿಂದಲೇ ಸಂಶೋಧಕನ ಸಫಲತೆ ನಿರ್ಧಾರವಾಗುವುದು ಎಂದು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಸೆ. 5 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದರು. ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ಸಾಲಿನಲ್ಲಿ ಪಿಎಚ್.ಡಿ ಪದವಿ ಗಳಿಸಿದ ಶಿಕ್ಷಕರ ಮಾರ್ಗದರ್ಶನ ಮುಂದಿನ ಪೀಳಿಗೆಗೆ ಅತ್ಯಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ಕೊವಿಡ್‍ನಂತಹ ಕಠಿಣ ಸಂದರ್ಭದಲ್ಲಿ ಕ್ಲಾಸ್‍ರೂಮ್ ಶಿಕ್ಷಣದಿಂದ ಆನ್ಲೈನ್ ಶಿಕ್ಷಣದತ್ತ ಚಿತ್ತಹರಿಸುವುದು ಅನಿವಾರ್ಯವಾಯಿತು. ಪರಿಸ್ಥಿತಿಗೆ ತಕ್ಕಂತೆ ಮಾನವನು ವಿವಿಧ ವಿಚಾರಗಳನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ರೀತಿ ಮುನ್ನಡೆದರಷ್ಟೇ ಸಫಲತೆ ಸಾಧ್ಯ. ಪದವಿ ಪಡೆಯುವುದು ನಮ್ಮ ಜೀವನದ ಪರಮೋದ್ದೇಶವಾಗಬಾರದು. ಪದವಿಯ ಅನಂತರವೂ ಸಂಶೋಧನಾ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ವಿನೂತನ ಆವಿಷ್ಕಾರಗಳಿಗೆ ಕಾರಣರಾಗಬೇಕು ಎಂದರು.

ಸನ್ಮಾನ

2019-2020 ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಚ್.ಡಿ ಪದವಿ ಪಡೆದ ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ನರೇಂದ್ರ ಕೆ.ಸಿ., ಡಾ. ವಿದ್ಯಾ ಕುಡ್ವ, ಡಾ. ದುರ್ಗಾಪ್ರಸಾದ್, ಡಾ.‌ ರೂಪಾ ಬಿ. ಹೆಗ್ಡೆ, ಡಾ. ಶಿವಕುಮಾರ್ ಬಿ.ಆರ್., ಕಂಪ್ಯೂಟರ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಕ ಡಾ. ಶಾರದಾ ಉದಯ ಶಣೈ, ಡಾ. ಅನೀಶಾ ಪಿ. ರೋಡ್ರಿಗಸ್, ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಉದಯ, ಡಾ. ಸಂತೋಷ್ ಜಿ., ಡಾ. ಗ್ರೈನಲ್ ಡಿ’ಮೆಲ್ಲೊ, ಬಯೋಟೆಕ್ನಾಲಜಿ ವಿಭಾಗದ ಡಾ. ಸಂದೇಶ್ ಕೆ., ಭೌತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ರಾಘವೇಂದ್ರ ಬಯರಿ, ಡಾ. ಶ್ಯಾಮ್‍‌ ಪ್ರಸಾದ್ ಕೆ., ಹ್ಯುಮ್ಯಾನಿಟೀಸ್ ವಿಭಾಗದ ಸಹಪ್ರಾಧ್ಯಾಪಕ ಡಾ| ರಾಮಕೃಷ್ಣ ಬಿ. ಸನ್ಮಾನ ಸ್ವೀಕರಿಸಿದರು.

ಪುಸ್ತಕ ಬಿಡುಗಡೆ

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ಡಾ. ಸಂಜು ಅವರು ಬರೆದ ‘ಎ ನೋವೆಲ್ ಆರ್ಕಿಟೆಕ್ಚರ್ ಡಿಸೈನ್ ಫಾರ್ ನೆಟ್ವರ್ಕ್ ಆನ್ ಚಿಪ್’ ಎಂಬ ಪುಸ್ತಕ ಹಾಗೂ ನಿಟ್ಟೆ ತಾಂತ್ರಿಕ ಕಾಲೇಜಿನ ಗ್ರಂಥಪಾಲಕ ಡಾ. ದಿವಾಕರ ಭಟ್ ಅವರು ಬರೆದ ‘ಕ್ಷೀರಾಂಬುಧಿ’ ಮತ್ತು ‘ಕ್ಷೀರಸಾರ’ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ಐ. ರಮೇಶ್ ಮಿತ್ತಂತಾಯ ಸ್ವಾಗತಿಸಿ, ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ್, ಡಾ. ಸುಬ್ರಹ್ಮಣ್ಯ ಭಟ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕ ವೆಂಕಟೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ರಿಜಿಸ್ಟ್ರಾರ್ ಪ್ರೊ. ಯೋಗೀಶ್ ಹೆಗ್ಡೆ ವಂದಿಸಿದರು.

































































































error: Content is protected !!
Scroll to Top