ಕ್ರೈಸ್ಟ್‌ಕಿಂಗ್‌ : ಎಸ್‌ಎಸ್‌ಎಲ್‌ಸಿಯಲ್ಲಿ 100% ಫಲಿತಾಂಶ

ಕಾರ್ಕಳ : ಅನುತ್ತೀರ್ಣಗೊಂಡಿದ್ದ ಓರ್ವ ವಿದ್ಯಾರ್ಥಿ ಮರುಮೌಲ್ಯಮಾಪನದಲ್ಲಿ ಉತ್ತೀರ್ಣವಾಗುವುದರೊಂದಿಗೆ ಕಾರ್ಕಳದ ಕ್ರೈಸ್ಟ್‌ ಕಿಂಗ್ ಆಂಗ್ಲಮಾಧ್ಯಮ ‌ ಪ್ರೌಢಶಾಲೆ ಈ ವರ್ಷದ ಹತ್ತನೇ ತರಗತಿಯಲ್ಲಿ 100% ಫಲಿತಾಂಶ ದಾಖಲಿಸಿದೆ. ಸಂಸ್ಥೆಯಿಂದ ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 80 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು. ಒರ್ವ ವಿದ್ಯಾರ್ಥಿ ಮಾತ್ರ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದರು. ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಸಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಪ್ರಸ್ತುತ ವಿದ್ಯಾರ್ಥಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣವಾಗುವುದರೊಂದಿಗೆ ಸಂಸ್ಥೆ 100% ಫಲಿತಾಂಶ ದಾಖಲಿಸಿದೆ. ಇದರೊಂದಿಗೆ ಸಂಸ್ಥೆ ನಿರಂತರವಾಗಿ 100% ಫಲಿತಾಂಶ ದಾಖಲಿಸುವ ತನ್ನ ದಾಖಲೆಯನ್ನು ಕಾಯ್ದುಕೊಂಡಿದೆ.

































































































error: Content is protected !!
Scroll to Top