ಮೋದಿ ನಿರ್ಮಿತ ಕುಸಿತಗಳಿಗೆ ದೇಶ ಸಾಕ್ಷಿ: ರಾಹುಲ್‌ ಗಾಂಧಿ ವಾಗ್ದಾಳಿ

ದಿಲ್ಲಿ, ಸೆ.1; ಜಿಡಿಪಿ ತೀವ್ರ  ಕುಸಿತ, ಲಡಾಖ್ ನಲ್ಲಿ ಚೀನ ಅತಿಕ್ರಮಣ, ನಿರುದ್ಯೋಗ ಪ್ರಮಾಣ ಹೆಚ್ಚಳ, ಉದ್ಯೋಗ ನಷ್ಟ ಇತ್ಯಾದಿ ವಿಚಾರಗಳನ್ನು  ಹಿನ್ನೆಲೆಯಾಗಿಟ್ಟುಕೊಂಡು  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌  ಗಾಂಧಿ ಇನ್ನೊಂದು ಸುತ್ತಿನ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಮೋದಿ ನಿರ್ಮಿತ ಕುಸಿತಗಳಿಗೆ ಭಾರತ ಸಾಕ್ಷಿಯಾಗುತ್ತಿದೆ.ಐತಿಹಾಸಿಕ ಜಿಡಿಪಿ ಕುಸಿತ, 45 ವರ್ಷಗಳಲ್ಲೇ ಗರಿಷ್ಠ ನಿರುದ್ಯೋಗ, ಕೋಟಿಗಟ್ಟಲೆ ಮಂದಿಯ ಉದ್ಯೋಗ ನಷ್ಟ, ರಾಜ್ಯಗಳಿಗೆ ಜಿಎಸ್ ಟಿ ಪಾಲು ಖೋತಾ, ಕೊರೊನಾ ಪ್ರಕರಣಗಳ ತೀವ್ರ ಹೆಚ್ಚಳ ಎಂಬುದಾಗಿ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ನೋಟು ಅಮಾನ್ಯ ನಿರ್ಧಾರದ ಬಳಿಕ ದೇಶದ ಆರ್ಥಿಕತೆ ಕುಸಿಯಲಾರಂಭಿಸಿದೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಹಲವು ತಪ್ಪು ಆರ್ಥಿಕ ನೀತಿಗಳು  ಈ ಕುಸಿತವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಸೋಮವಾರ ರಾಹುಲ್‌ ಗಾಂಧಿ ಸರಕಾರವನ್ನು ಟೀಕಿಸುವ ವೀಡಿಯೊ ಸರಣಿಯ ಮೊದಲ ಕಂತನ್ನು ಬಿಡುಗಡೆಗೊಳಿಸಿದ್ದರು. ನಿರಂತರವಾಗಿ ಸರಕಾರದ ಮೇಲೆ ವಾಗ್ದಾಳಿ ನಡೆಸುತ್ತಿರುವ ಅವರು ಇಂದು ಸರಣಿ ಟ್ವೀಟ್‌ ಮಾಡಿದ್ದಾರೆ.





























































































error: Content is protected !!
Scroll to Top