ಕಾರ್ಕಳ : ದಿ. ಬಿ.ಪಿ. ವೆಂಕಟೇಶ ತುಮಕೂರು ಇವರ ಸ್ಮರಣಾರ್ಥ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ದುರ್ಗಾ ಗ್ರಾ.ಪಂ. ಕಚೇರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆ ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಸದಸ್ಯರಾದ ಸೌಜನ್ಯ ಉಪಾಧ್ಯಾಯ, ರೋಶನ್ ಡಿʼಮೆಲ್ಲೋ , ಶಂಕರ್ ನಾಯ್ಕ್, ಅಮರನಾಥ್ ಪ್ರಸಾದ್, ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾ ಪಿ. ಶೆಟ್ಟಿ, ಗ್ರಾ. ಪಂ. ಕಾರ್ಯದರ್ಶಿ ಸುಬ್ಬಯ್ಯ, ಭಾಸ್ಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದುರ್ಗಾ : ರೋಟರಿ ಕ್ಲಬ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ


















