ಮುಂಬಯಿ, ಆ. 20 : ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 462 ಅಂಕ ಪಡೆದಿರುವ ಬಂಟ್ವಾಳದ ಭಾಗ್ಯಶ್ರೀಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ 50,000 ರೂ. ಧನ ಸಹಾಯ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕರಿಸಲಾಯಿತು.
ಭಾಗ್ಯಶ್ರೀ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಪುತ್ರಿ. ತಂದೆ ಕೇಶವರು ಕೂಡ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿ ಬೀಡಿ ಕಟ್ಟಿ ಕುಟುಂಬ ಪೋಷಣೆಗೆ ನೆರವಾಗುತ್ತಿದ್ದಾರೆ.
ಭಾಗ್ಯಶ್ರೀಗೆ ಸೊಂಟದ ಕೆಳಗೆ ಬಲವಿಲ್ಲ. ಆದರೆ ಕಲಿಕೆಯಲ್ಲಿ ಭಾರಿ ಆಸಕ್ತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಮಾಡಿ ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾರೆ. ಅಮ್ಮ ಮಗಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ 420 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿ.ಯು.ಸಿ.ಗೆ ಎಸ್.ವಿ.ಎಸ್. ಪದವಿಪೂರ್ವ ಕಾಲೇಜನ್ನು ಸೇರಿದ ಇವರದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ.

ಸುನಿಲ್ ಆರ್. ಸಾಲ್ಯಾನ್ ಬಾಯ್ಕಲ. ಜಗದೀಶ್ ಆರ್. ಬಂಜನ್, ಅಂಬರ್ ನಾಥ್, ಸಾಯಿನಾಥ ಬಿ. ಸಾಲ್ಯಾನ್ ದುಬಾಯಿ, ಆನಂದ ಕುಲಾಲ್ ಜೋಗೇಶ್ವರಿ, ದೇವದಾಸ ಎಲ್. ಕುಲಾಲ್ ಡೊಂಬಿವಲಿ , ಡಿ. ಐ. ಮೂಲ್ಯ ಕಲ್ಯಾಣ್ , ಮಮತಾ ಎಸ್. ಗುಜರನ್, ಆಶಾಲತಾ ಮೂಲ್ಯ ಗೋರೆಗಾವ್, ರಘು ಮೂಲ್ಯ ಖಾರ್ ಘರ್, ಮಾಲತಿ ಅಂಚನ್ ಐರೋಲಿ, ಸುಧಾಕರ್ ಟಿ. ಕುಲಾಲ್ ರಬಾಲೆ, ದಿವಾಕರ್ ಮೂಲ್ಯ ಐರೋಲಿ, ಪ್ರೇಮ ಎಲ್. ಮೂಲ್ಯ ವಾಶಿ. ಅಶ್ವಿತಾ ಮೂಲ್ಯ ವಾಶಿ. ಧನವಂತಿ ಎಸ್. ಬಂಜನ್ , ವಿಶ್ವನಾಥ್ ಮೂಲ್ಯ, ರೇಣುಕಾ ಸಾಲಿಯಾನ್ ಮೀರಾರೋಡ್, ಜಯ ಎಸ್. ಅಂಚನ್ ಐರೋಲಿ, ಪಿ. ಶೇಖರ್ ಮೂಲ್ಯ, ಸಂಜೀವ ಬಂಗೇರ ಸಯಾನ್, ಸದಾನಂದ ಎಸ್. ಕುಲಾಲ್ ವಾಶಿ, ಜಯರಾಜ್ ಪಿ. ಸಾಲ್ಯಾನ್ ಘಾಟ್ಕೋಪರ್. ಮೊದಲಾದವರು ಭಾಗ್ಯಶ್ರೀಗೆ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.
ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ ಎಲ್. ಕುಲಾಲ್, ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್
ಅಮೂಲ್ಯ ಸಂಪಾದಕ ಶಂಕರ್ ವೈ. ಮೂಲ್ಯ, ಜ್ಯೋತಿ ಕೋ-ಓಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಭಾಗ್ಯಶ್ರೀಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ದಾನಿಗಳ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಲಾಲ ಸಂಘ ಮುಂಬಯಿ ಆಸಕ್ತ ಕುಲಾಲ ಸಮಾಜದ ಬಂಧುಗಳಿಗೆ ನಿರಂತರವಾಗಿ ಕಳೆದ 90 ವರ್ಷಗಳಿಂದ ಸಹಕಾರ ನೀಡುತ್ತ ಬಂದಿದೆ
ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 300 ಕುಟುಂಬಗಳಿಗೆ ಐದು ಲಕ್ಷಕ್ಕೂ ಮಿಕ್ಕಿ ದಿನ ಸಾಮಾಗ್ರಿಗಳನ್ನು ನೀಡಿದೆ
ವರದಿ: ದಿನೇಶ್ ಕುಲಾಲ್

















