ವರದಿ : ಏಳಿಂಜೆ ನಾಗೇಶ್, ಮುಂಬಯಿ
ನಕಲಿ ಫಾಲೋವರ್ಸ್ ಗಳನ್ನು ಖರೀದಿಸಿದ್ದಾರೆ ಎಂಬ ಆರೋಪದಲ್ಲಿ ಮುಂಬಯಿ ಪೊಲೀಸರು ಬಾಲಿವುಡ್‌ನ ಜನಪ್ರಿಯ ರ್ಯಾಪರ್ (rapper) ಬಾದ್ ಶಾಹನನ್ನು ವಿಚಾರಣೆಗೊಳಪಡಿಸಿದ್ದಾರೆ.
72ಲಕ್ಷ ರೂಪಾಯಿ ಪಾವತಿಸಿ ಬಾದ್ ಶಾಹ 72 ಕೋಟಿ ನಕಲಿ ವ್ಯೂವರ್ ಗಳನ್ನು ಖರೀದಿಸಿದ್ದಾರೆ ಎಂಬ ಆರೋಪ ಮುಂಬಯಿ ಪೊಲೀಸರದ್ದು.ಆದರೆ ಆತ ಮಾತ್ರ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ತನಿಖೆಯಿಂದ ತನ್ನ ಪ್ರಾಮಾಣಿಕತೆ ಜನತೆಗೆ ಗೊತ್ತಾಗಲಿದೆ ಎನ್ನುತ್ತಾರೆ.
ರ್ಯಾಪರ್ ಬಾದ್ ಶಾಹ ತನ್ನ ಮ್ಯೂಸಿಕ್ ವಿಡಿಯೋಗಾಗಿ 72 ಲ.ರೂ.ಪಾವತಿಸಿ ವ್ಯೂವರ್ ಶಿಪ್ ದಾಖಲೆಯನ್ನು ಮುರಿದಿದ್ದಾರೆ ಎನ್ನುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಶಾಲಿಗಳಿಗೆ ನಕಲಿ ಫಾಲೋವರ್ಸ್ ಮತ್ತು ವ್ಯೂವ್ ಗಳನ್ನು ಮಾರಾಟ ಮಾಡುವಂತಹ ಜಾಲವೊಂದು ಇಲ್ಲಿ ಕಾರ್ಯಾಚರಿಸುತ್ತಿದೆ.ಹೀಗೆ ನಕಲಿ ಫಾಲೋವರ್ಸ್ ಮತ್ತು ವ್ಯೂವರ್ ಗಳನ್ನು ತೋರಿಸಿ ಜನರನ್ನು ಮರುಳುಗೊಳಿಸಿ ತಮ್ಮ ವಿಡಿಯೊಗಳನ್ನು ಜನಪ್ರಿಯಗೊಳಿಸಲಾಗುತ್ತಿರುವುದು ಬೆಳಕಿಗೆ ಬರುತ್ತಿದೆ ಎನ್ನುತ್ತಾರೆ ಪೊಲೀಸರು. ಆದರೆ ಬಾದ್ ಶಾಹ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ.
ಯೂಟ್ಯೂಬ್‌ನಲ್ಲಿ 24 ಗಂಟೆಯಲ್ಲಿ ಈ ಹಾಡು ವಿಶ್ವ ದಾಖಲೆಯನ್ನೇ ಮುರಿದಿತ್ತು.’ಪಾಗಲ್ ಹೈ’ ಎಂಬ ಈ ಮ್ಯೂಸಿಕ್ ವಿಡಿಯೋ ಬಿಡುಗಡೆಯಾದ ಮೊದಲ ದಿನವೇ 75 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿತ್ತು. ಈ ಮೂಲಕ ಟೇಲರ್ ಸ್ವಿಫ್ಟ್ ಮತ್ತು ಕೊರಿಯನ್ ಬಾಯ್ಸ್ ಬ್ಯಾಂಡ್ ಬಿಟಿಎಸ್ ನ ಈ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ.
ಯೂಟ್ಯೂಬ್‌ನಲ್ಲಿ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಗಳಿಸಿ ವಿಶ್ವ ದಾಖಲೆ ಮಾಡುವ ಬಯಕೆ ಬಾದ ಶಾಹ ಗೆ ಇತ್ತು.ಆ ಕಾರಣಕ್ಕಾಗಿ ತಾನು ಆ ಕಂಪನಿಗೆ 72 ಲಕ್ಷ ಪಾವತಿಸಿರುವುದನ್ನು ಆತ ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ಹೇಳಿದ್ದಾರೆ.ಆದರೆ ಆತ ಇದನ್ನು ಸುಳ್ಳು ಎನ್ನುತ್ತಾರೆ.ಸತ್ಯಕ್ಕಾಗಿ ಕಾದು ನೋಡೋಣ.