ಒಂದೇ ಕುಟುಂಬದ 11 ಪಾಕ್‌ ನಿರಾಶ್ರಿತರ ಸಾವು; ಆತ್ಮಹತ್ಯೆ ಶಂಕೆ  

ಜೋಧ್‌ ಪುರ, ಆ. 9: ಪಾಕಿಸ್ಥಾನದಿಂದ ವಲಸೆ ಬಂದಿದ್ದ ಒಂದೇ ಹಿಂದು ಕುಟುಂಬದ 11 ಮಂದಿ ನಿರಾಶ್ರಿತರು ಸಾವಿಗೀಡಾಗಿರುವ ಘಟನೆ ದೇಶಾದ್ಯಂತ ಆಘಾತದ ಅಲೆಯೆಬ್ಬಿಸಿದೆ. ಪಾಕಿಸ್ಥಾನದಿಂದ 2012ರಲ್ಲಿ ವಲಸೆ ಬಂದಿದ್ದ ಈ ಕುಟುಂಬ ರಾಜಸ್ಥಾನದ ಜೋಧ್‌ ಪುರ ಜಿಲ್ಲೆಯ ದೇಚು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಲೋಡ್ತಿ ಎಂಬ  ಹಳ್ಳಿಯಲ್ಲಿ ವಾಸವಾಗಿತ್ತು.

ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಮತ್ತು ಐವರು ಮಕ್ಕಳು ಸಾವಿಗೀಡಾಗಿದ್ದು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ನಸುಕಿನ ವೇಳೆ ಅವರು ವಿಷ ಅಥವಾ ಕೀಟನಾಶಕ ಸೇವಿಸಿ ಬದುಕು ಕೊನೆಗಾಣಿಸಿಕೊಂಡಿದ್ದಾರೆ.

ಓರ್ವ ವ್ಯಕ್ತಿ ಚಿಂತಾಷಜಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿ ಬದುಕುಳಿದರೆ ಸಾವಿನ ಕಾರಣ ತಿಳಿಯಬಹುದು.

ಪಾಕಿಸ್ಥಾನದಿಂದ ನಿರಾಶ್ರಿತರಾಗಿ ಬಂದಿದ್ದ ಅವರು ಭೀಲ್‌  ಸಮುದಾಯಕ್ಕೆ ಸೇರಿದವರು. ಲೋಡದತಾದಲ್ಲಿ ಬೋರ್‌ ವೆಲ್‌ ಕೆಲಸ ಮಾಡಿಕೊಂಡು ಜೋಪಡಿಗಳಲ್ಲಿ ವಾಸವಾಗಿದ್ದರು.

 

 error: Content is protected !!
Scroll to Top