ದ.ಕ. : ಸೋಂಕಿತರನ್ನು ಗುರುತಿಸಲು ಕಾರ್ಯಪಡೆ

ಮಂಗಳೂರು, ಆ. 1 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ವಾರ್ಡ್ ಮತ್ತು ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಆನ್‌ಲೈನ್ ತರಬೇತಿ ನೀಡಲು ವೈದ್ಯರನ್ನು ಒಳಗೊಂಡ ಕಾರ್ಯಪಡೆ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರನ್ನು ತ್ವರಿತವಾಗಿ ಗುರುತಿಸುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ  ಜಿಲ್ಲಾಡಳಿತ ಈ  ಕ್ರಮ ಕೈಗೊಳ್ಳುತ್ತಿದೆ.

ವಿವಿಧ  ಕಾರಣಗಳಿಂದಾಗಿ ಕೊರೊನಾ ಕರ್ತವ್ಯಕ್ಕೆ ಗೈರು ಹಾಜರಾದ  ವೈದ್ಯರನ್ನು ಕಾರ್ಯಪಡೆ ಒಳಗೊಂಡಿರುತ್ತದೆ. ಸೋಂಕು ಲಕ್ಷಣಗಳುಳ್ಳ ಜನರ ಆರೋಗ್ಯವನ್ನು ಹೇಗೆ ಮೇಲ್ವಿಚಾರಣೆ ಮಾಡುವುದು, ಸೋಂಕಿತರನ್ನು ತ್ವರಿತವಾಗಿ ಗುರುತಿಸುವುದು ಮತ್ತು ಅಗತ್ಯ  ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಾರ್ಡ್ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯ ಸದಸ್ಯರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ತರಬೇತಿ ನೀಡಲಾಗುವುದು.  ಶಿಕ್ಷಕರು ಮತ್ತು ಇತರ ಆಸಕ್ತರು ಇದಕ್ಕಾಗಿ ಸ್ವಯಂಸೇವಕರಾಗಬಹುದು ಮತ್ತು ರೋಗಿಗಳ ಪರೀಕ್ಷೆ ನಡೆಸಬಹುದು.

ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂಬ ಆರೋಪದ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ರಾಜೇಂದ್ರ ಅವರು  ಚಿಕಿತ್ಸೆಯ ಶುಲ್ಕವನ್ನು  ಖಚಿತಪಡಿಸಿಕೊಳ್ಳಲು  ಖಾಸಗಿ ಆಸ್ಪತ್ರೆ ಸಂಘದ ಸದಸ್ಯರೊಂದಿಗೆ ಸಭೆ ನಡೆಸುವುದಾಗಿ ಹೇಳಿದರು. ಆಸ್ಪತ್ರೆಗಳು ಮಾರ್ಗಸೂಚಿಗಳನ್ನು ಮೀರಿದರೆ, ಕ್ರಮವನ್ನು ಎದುರಿಸಬೇಕಾಗುವುದು. ವಿವಿಧ ಆಸ್ಪತ್ರೆಗಳಿಂದ ರೋಗಿಗಳು ತದ್ವಿರುದ್ಧ  ವರದಿಗಳನ್ನು ಪಡೆಯುವ ವಿಷಯದ ಬಗ್ಗೆಯೂ ಗಮನಹರಿಸಿದ್ದು ಇವು ಜನರನ್ನು ‘ದಾರಿತಪ್ಪಿಸುವ  ಘಟನೆಗಳು’ ಎಂದು ಪರಿಗಣಿಸಿ ಅದನ್ನು ಸಹ ಪರಿಹರಿಸಲಾಗುವುದು ಎಂದರು.













































































































































































error: Content is protected !!
Scroll to Top