ಬೆಂಗಳೂರು, ಜು.25- ಬೆಂಗಳೂರಿನಲ್ಲಿ ಕೊರೊನಾ ಹಾವಳಿ ಕಳವಳಕಾರಿಯಾಗಿ ಹೆಚ್ಚುತ್ತಿರುವ ಸಂದರ್ಭದಲ್ಲೇ ಬಿಬಿಎಂಪಿ ಆರೋಗ್ಯಾಧಿಕಾರಿ ಕುಟುಂಬದ ಮೂವರು ಕೊರೊನಾಗೆ ಬಲಿಯಾಗಿರುವ ಘಟನೆ ಬೆಚ್ಚಿಬೀಳಿಸಿದೆ. ಕೇವಲ ನಾಲ್ಕು ದಿನಗಳಲ್ಲಿ ಈ ಕುಟುಂಬ ಮೂವರನ್ನು ಕಳೆದುಕೊಂಡಿದೆ.
ಬಿಬಿಎಂಪಿ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಕುಟುಂಬದಲ್ಲಿ ಮೂವರು ಕೊರೊನಾಗೆ ತುತ್ತಾಗಿದ್ದಾರೆ. ಕಳೆದ ಸೋಮವಾರ ತಂದೆಯ ಸಾವಿನಿಂದ ಮನನೊಂದಿದ್ದ ಅಧಿಕಾರಿ ಬುಧವಾರ ತನ್ನ ಭಾವನನ್ನು ಕಳೆದುಕೊಂಡಿದ್ದಾರೆ. ಗುರುವಾರ ಅವರ ತಾಯಿ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿನಿಂದ ಈ ಅಧಿಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಈ ಕುಟುಂಬದಲ್ಲಿ ಮೂವರು ಈ ಸೋಂಕಿಗೆ ಬಲಿಯಾಗಿದ್ದಾರೆ. ಬಿಬಿಎಂಪಿಯ ಆರೋಗ್ಯಾಧಿಕಾರಿಯಾಗಿರುವ ಇವರ ಕುಟುಂಬದಲ್ಲೇ ಮೂವರು ಈ ರೋಗಕ್ಕೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ.
ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೋ ಅಥವಾ ಸರಿಯಾದ ಆರೈಕೆ ಇಲ್ಲದೆ ಸಾವನ್ನಪ್ಪಿದ್ದಾರೋ ಎಂಬ ಕಾರಣ ಗೊತ್ತಾಗಿಲ್ಲ.
ಒಟ್ಟಾರೆ ಕೊರೊನಾ ವಾರಿಯರ್ಸ್ ಮಾತ್ರವಲ್ಲದೆ ಅವರ ಕುಟುಂಬದವರು ಕೂಡ ಸೋಂಕಿಗೆ ಬಲಿಯಾಗುತ್ತಿರುವುದು ಆತಂಕವುಂಟು ಮಾಡಿದೆ. ಕೊರೊನಾ ವಿರುದ್ಧ ಹೋರಾಡುವ ಸಿಬಂದಿಗೂ ಸೂಕ್ತ ರಕ್ಷಣೆ ಇಲ್ಲವೆ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.