ಅಹಮದಾಬಾದ್ : ಅಹಮದಾಬಾದ್ ಮಹಾನಗರಪಾಲಿಕೆ ಯಾರಾದರೂ ಪಾನ್ ಅಂಗಡಿ ಹತ್ತಿರ ಪಾನ್ ಜಗಿದು ಉಗಿಯುವುದು ಕಂಡರೆ ಅಂಗಡಿ ಮಾಲಕನಿಗೆ 10,000 ರೂ.ದಂಡ ವಿಧಿಸುವ ಕಾನೂನು ಜಾರಿಗೆ ತಂದಿದೆ.
ಇದೇ ವೇಳೆ ಪಾನ್ ಉಗಿಯುವವರ ಮೇಲೆ 500 ರೂ. ಮತ್ತು ಮಾಸ್ಕ್ ಧರಿಸದಿದ್ದರೆ 200 ರೂ.ದಂಡ ವಿಧಿಸಲಾಗುವುದು. ನಗರದಲ್ಲಿ ಕೊಕೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಾಯುಕ್ತ ಮುಕೇಶ್ ಕುಮಾರ್ ಹೇಳಿದ್ದಾರೆ.
ಪದೇಪದೆ ಎಚ್ಚರಿಸಿದ ಹೊರತಾಗಿಯೂ ಜನರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಕಠಿಣ ತೀರ್ಮಾನ ಕೈಗೊಂಡಿದೆ. ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ.