ಲಕ್ನೊ ಮೂಲದ ಕಂಪನಿಯಿಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚನೆ
ಲಕ್ನೊ: ಉತ್ತರ ಪ್ರದೇಶದ ರಾಜಧಾನಿಯಲ್ಲಿ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ಮುಂಬಯಿ ಮೂಲದ ಅಯೋಸಿಸ್ ಸ್ಪಾ ಮತ್ತು ಸ್ವಾಸ್ಥ್ಯ ಕಂಪನಿಯ ಎಂಡಿ ಕಿರಣ್ ಬಾವಾ ಮತ್ತು ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ವಿನಯ್ ಭಾಸಿನ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಕಿರಣ್ ಬಾಬಾ ತನ್ನ ಕಂಪನಿಗೆ ಶಿಲ್ಪಾ ಶೆಟ್ಟಿ ಬ್ರಾಂಡ್ ಅಂಬಾಸಿಡರ್ ಎಂದು ಹೇಳಿಕೊಂಡು ಫ್ರ್ಯಾಂಚೈಸಿ ಶುಲ್ಕ ಮತ್ತು ಹೂಡಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸಿತ್ತಿದ್ದ. ಫ್ರ್ಯಾಂಚೈಸ್‌ಗೆ ಸೇರಲು ಶಿಲ್ಪಾ ಶೆಟ್ಟಿಯ ಹೆಸರನ್ನು ಬಳಸಿ ಜನರಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಸಹ ನೀಡುತ್ತಿದ್ದ. ಶಿಲ್ಪಾ ಶೆಟ್ಟಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಮತ್ತು ನಟಿಯೇ ಫ್ರ್ಯಾಂಚೈಸ್ ಅನ್ನು ಉದ್ಘಾಟಿಸುತ್ತಾರೆ ಎಂದು ಜನರನ್ನು ನಂಬಿಸುತ್ತಿದ್ದರು. ಇದಲ್ಲದೆ ಶಿಲ್ಪಾ ಕಂಪನಿಯ ಪ್ರಚಾರಕ್ಕೆ ಸಂಬಂಧಿಸಿದ ಫೋಟೋಗಳನ್ನು ತೋರಿಸುತ್ತಿದ್ದರು.