ಮುಂಬಯಿ : ಹೊಟೇಲ್‌ಗಳನ್ನು ತೆರೆಯಲು ಅನುಮತಿ

ಮುಂಬಯಿ : ಮುಂಬಯಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಲಾಡ್ಜ್‌ಗಳು ಮತ್ತು ಅವುಗಳಲ್ಲಿರುವ ಹೊಟೇಲ್‌ಗಳನ್ನು ಕೆಲವು ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ತೆರೆಯಲು ಸರಕಾರ ಅನುಮತಿ ನೀಡಿದೆ.

ಅತಿಥಿಗಳಿಗೆ ತಂಗುವ ಸೌಲಭ್ಯ ಇರುವ ಲಾಡ್ಜ್‌ಗಳು, ಗೆಸ್ಟ್‌ ಹೌಸ್‌ಗಳನ್ನು ಜು.8 ರಿಂದ ತೆರೆಯಬಹುದು. ಆದರೆ 33% ಗ್ರಾಹಕರಿಗಷ್ಟೆ ಸದ್ಯಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚಿನ ಹೊಟೇಲ್‌ ಗಳಿಗೆ ಈ ನಿರ್ಧಾರದಿಂದ ಯಾವುದೇ ಪ್ರಯೋಜನ ಇಲ್ಲದಿದ್ದರೂ ಅನ್‌ ಲಾಕ್‌ ಆಗುವತ್ತ ಆರಂಭಿಕ ಹೆಜ್ಜೆ ಎಂಬ ನೆಲೆಯಲ್ಲಿ ಸ್ವಾಗತಿಸಿವೆ.

ಲಾಡ್ಜ್‌ ಗಳು ಮತ್ತು ಗೆಸ್ಟ್‌ ಹೌಸ್‌ ಗಳಲ್ಲಿ  ತಂಗಿರುವ  ಅತಿಥಿಗಳಿಗೆ ಮಾತ್ರ ಆಹಾರ ಪೂರೈಕೆ  ಮಾಡಬಹುದು. ನಳಿದ<ತೆ  ಪಾರ್ಸಲ್‌ ನೀಡಲು ಎಲ್ಲ ಹೊಟೇಲ್ಗಳಿಗೆ ಅನುಮತಿಯಿದೆ.

ಲಾಡ್ಜ್ ಗಳಿಗೆ  ರೋಗ ಲಕ್ಷಣ ರಹಿತ ಅತಿಥಿಗಳಿಗೆ ಮಾತ್ರ ಪ್ರವೇಶವಿದೆ. ಒಂದು ವೇಳೆ ಬಂದ ಬಳಿಎ ದೃಢ ಪಟ್ಟರೆ ಕೂಡಲೇ ಆ ವ್ಯಕ್ತಿಯನ್ನು ಪ್ರತ್ಯೇಕಿಸಿ ಸ್ಯಾನಿಟೈಸ್‌ ಮಾಡಬೇಕು.









































error: Content is protected !!
Scroll to Top