ಚೆನ್ನೈ : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ವಿಶಾಲ್‌ಗೆ ಅವರ ಬಳಿ ಎಕೌಟಂಟ್ ಆಗಿ ನೌಕರಿಗಿದ್ದ ಮಹಿಳೆಯೇ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.ವಿಶಾಲ್ ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ಮಾಪಕರನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಲ್ಲೇ ಇದ್ದಾರೆ.
ವಿಶಾಲ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಹರಿ ಕೆಲ ದಿನಗಳ ಹಿಂದೆ ಆಡಿಟ್ ಚೆಕ್ ಮಾಡಿದಾಡ ಕಂಪನಿಯಲ್ಲಿ 6 ವರ್ಷಗಳಿಂದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಟಿಡಿಎಸ್ ಮೊತ್ತವನ್ನು ನೇರವಾಗಿ ಕುಟುಂಬಸ್ಥರ ಖಾತೆಗೆ ಸೇರುವಂತೆ ಮಾಡಿರುವ ವಂಚನೆ ಬೆಳಕಿಗೆ ಬಂದಿದೆ.
ಮ್ಯಾನೆಜರ್ ಹರಿ ನೀಡಿರುವ ಮಾಹಿತಿ ಪ್ರಕಾರ ಅಕೌಂಟೆಂಟ್ ಜೂನ್ 28ರ ಒಳಗೆ ಆದಾಯ ತೆರಿಗೆ ಮಾಡಬೇಕಿತ್ತು. ಈ ಸಮಯದಲ್ಲಿ ಆಕೆ ಯಾವ ಇನ್ನಿತರ ನೌಕರರಿಗೂ ಟಿಡಿಎಸ್ ಹಣ ನೀಡಿಲ್ಲ ಎನ್ನುವುದು ತಿಳಿದು ಬಂದಿದೆ. ವಂಚನೆ ವಿಚಾರ ತಿಳಿಯುತ್ತಲೇ ವಿಶಾಲ್ ಕ್ರಮ ಕೈಗೊಂಡಿದ್ದಾರೆ. ಚೆನ್ನೈನ ಸ್ಥಳೀಯ ವಿರುಗಂಪಕ್ಕಂ ಪೊಲೀಸ್ ಠಾಣೆಯಲ್ಲಿ ಮ್ಯಾನಜರ್ ಹರಿ ವಂಚನೆ ವಿರುದ್ಧ ದೂರು ನೀಡಿದ್ದಾರೆ. ಸದ್ಯದಲ್ಲೇ ವಿಶಾಲ್ ಬ್ಯಾನರ್‌ನಲ್ಲಿ ‘ಚಕ್ರ’ ಮತ್ತು ‘Thupparivaalan 2’ ಸಿನಿಮಾ ರಿಲೀಸ್ ಆಗಲಿದೆ.