ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ತನಿಖೆ- ಮುಂದಿನವಾರ ಚೀನಕ್ಕೆ ನಿಯೋಗ ಭೇಟಿ

0

ದಿಲ್ಲಿ : ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ.

ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿತು. ಅಥವಾ ಮಾಹಿತಿ ನೀಡುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಿತು ಎಂಬ ಆರೋಪವನ್ನು ಕೇಳಿಬಂದಿತ್ತು. ಪ್ರಮುಖವಾಗಿ ಚೀನ ವಿರುದ್ಧ ಕಿಡಿಕಾರಿದ್ದ ಅಮೆರಿಕ ದೇಶ, ಚೀನ ಉದ್ದೇಶಪೂರ್ವಕವಾಗಿಯೇ ಜಗತ್ತಿನ ಮೇಲೆ ಬಯೋವಾರ್ ಸಾರಿದ್ದು, ಕೊರೊನಾ ವೈರಸ್ ಚೀನ ಲ್ಯಾಬ್ ನಲ್ಲಿ ತಯಾರಾದ ಜೈವಿಕ ಅಸ್ತ್ರ ಎಂದು ಕಿಡಿಕಾರಿತ್ತು. ಇದೇ ಕಾರಣಕ್ಕೆ ಕೊರೊನಾ ವೈರಸ್ ಅನ್ನು ಅಮೆರಿಕ ಚೀನ ವೈರಸ್ ಎಂದು ಕಿಡಿಕಾರಿತ್ತು.

ಅಲ್ಲದೆ ಇತ್ತೀಚೆಗಷ್ಟೇ ಭಾರತವೂ ಸೇರಿದಂತೆ ಜಗತ್ತಿನ 169 ರಾಷ್ಟ್ರಗಳು ಕೊರೊನಾ ವೈರಸ್ ಮೂಲದ ಕುರಿತು ತನಿಖೆ ನಡೆಸುವಂತೆ ಸಹಿ ಹಾಕಿದ್ದವು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ತನಿಖೆ ನಡೆಸುತ್ತಿದ್ದು, ವಿಶ್ವ ಸಂಸ್ಥೆಯ ವಿಶೇಷ ನಿಯೋಗ ತನಿಖೆಗೆ ಮುಂದಾಗಿದೆ. ಚೀನದಲ್ಲಿ ವೈರಸ್ ಮೂಲ ಹುಡುಕುವ ಕಾರ್ಯವನ್ನು ಈ ನಿಯೋಗ ಮಾಡಲಿದ್ದು, ಮುಂದಿನವಾರ ಚೀನಗೆ ತೆರಳಲಿದೆ. 

ಈ ಬಗ್ಗೆ ವಿಶ್ವಸಂಸ್ಥೆಯ ಹಿರಿಯ ವಿಜ್ಞಾನಿ ಭಾರತ ಮೂಲದ ಡಾ.ಸೌಮ್ಯ ಸ್ವಾಮಿನಾಥನ್ ಅವರು ಚೀನದಲ್ಲಿ ಮೊದಲಿಗೆ ವೈರಸ್ ಕಂಡು ಬಂದ ಜಾಗದಲ್ಲಿ ಸುಧೀರ್ಘ ಅಧ್ಯಯನ ನಡೆಸಲಾಗುತ್ತದೆ. ತಮ್ಮ ಭೇಟಿ ಕುರಿತು ತಾವು ಚೀನ ಸರ್ಕಾರದೊಂದಿಗೆ ಮಾತನಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಒಂದು ತಂಡ ಚೀನಗೆ ತೆರಳಲಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಕೊರೊನಾ ವೈರಸ್ ಹಬ್ಬಿತು? ವೈರಸ್ ಮೂಲ ಯಾವುದು? ವೈರಸ್ ಕುರಿತಂತೆ ಚೀನ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಇಲಾಖೆ ಜಗತ್ತಿಗೆ ಪಾರದರ್ಶಕ ಮಾಹಿತಿ ನೀಡಿತೇ? ಎಂಬಿತ್ಯಾದಿ ಅಂಶಗಳನ್ನು ಈ ನಿಯೋಗ ತನಿಖೆ ಮಾಡಲಿದೆ ಎಂದು ಹೇಳಿದರು.

Previous articleಎಬಿಡಿ –ಸ್ಮಿತ್‌ ಗೆ ಬೌಲಿಂಗ್‌ ಮಾಡುವ ಬಗ್ಗೆ ಕುಲದೀಪ್‌ ಹೇಳಿದ್ದೇನು?
Next articleಕೊರೊನಾ ಕಾವಳ : ಸರ್ವಪಕ್ಷ ಸಭೆ ಕರೆಯಲು ಎಚ್.ಕೆ.ಪಾಟೀಲ್‌ ಆಗ್ರಹ

LEAVE A REPLY

Please enter your comment!
Please enter your name here