ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೆ 35 ಎಕರೆ ಜಾಗ

ಬೆಂಗಳೂರು: ಕೊರೊನಾ ಸೋಂಕಿನಿಂದ ಮದೃತಪಟ್ಟವರ ಅಂತ್ಯಕ್ರಿಯೆ ನಡೆಸಲು ನಾನಾ ರೀತಿಯ ಅಡ್ಡಿಗಳು ಎದುರಾಗುತ್ತಿವೆ.ಈ ಹಿನ್ನೆಲೆಯಲ್ಲಿ  ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ಸರ್ಕಾರ ನಗರದ ಹೊರವಲಯದಲ್ಲಿ ನಿವೇಶನ ಮಂಜೂರು ಮಾಡಿದೆ. ನಗರದ ಹೊರವಲಯದಲ್ಲಿ 10 ಕಡೆ ಅಂತ್ಯಸಂಸ್ಕಾರಕ್ಕೆ ಜಾಗ ನಿಗದಿ ಮಾಡಿದೆ. ಒಟ್ಟು 35 ಎಕರೆ 18 ಗುಂಟೆ ಜಾಗ ಕಾಯ್ದಿರಿಸಿದೆ.

ಕೆಲ ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆಗೆ ಜನ ವಸತಿ ಪ್ರದೇಶದಲ್ಲಿರುವ  ಶ್ಮಶಾನದೊಳಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣ ಈ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಸಂಸ್ಕಾರ ನಡೆಸಲು ಕೆಲವು ಕಡೆ ಸಾರ್ವಜನಿಕರು ಗಲಾಟೆ ನಡೆಸಿದ್ದರು. ಹೀಗಾಗಿ ಸಾರ್ವಜನಿಕರಿಗೆ ಸ್ಪಂದಿಸಿರುವ ಸಚಿವ ಶ್ರೀರಾಮುಲು ನಗರದ ಹೊರವಲಯದಲ್ಲಿ 2 ಎಕರೆ ಜಾಗ ಮೀಸಲಿಡುವುದಾಗಿ ಹೇಳಿದ್ದರು. ನಗರದ ಒಳಗೆ ಇರುವ ಶ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎಂದು ಆದೇಶಿಸಿದ್ದರು.

ನಿನ್ನೆ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಅಸ್ಪತ್ರೆಯ ಸಿಬ್ಬಂದಿ ಪಿಪಿಇ ಕಿಟ್‍ಗಳನ್ನು ಸಾರ್ವಜನಿಕ ಸ್ಥಳದಲ್ಲೇ ಎಸೆದು ಹೋಗಿದ್ದರು. ಇದಕ್ಕೂ ಕೂಡಾ ವಿವಾದ ಉಂಟಾಗಿತ್ತು.

ದಾಸನಪುರ ಗಿಡ್ಡೇನಹಳ್ಳಿ ಸರ್ವೆ ನಂಬರ್ 80 ರಲ್ಲಿ 4 ಎಕರೆ, ಉತ್ತರಹಳ್ಳಿ ಗುಳಿಕಮಲೆ ಸರ್ವೆ ನಂಬರ್ 35 ರಲ್ಲಿ 4 ಎಕರೆ, ತಾವರೆಕೆರೆ ತಿಪ್ಪಗೊಂಡನಹಳ್ಳಿ ಸರ್ವೆ ನಂ. 4 ರಲ್ಲಿ 5 ಎಕರೆ, ಹೆಸರುಘಟ್ಟದ ಹುತ್ತನಹಳ್ಳಿಯಲ್ಲೂ 2 ಎಕರೆ ಜಾಗ ನಿಗದಿ, ಮಾರೇನಹಳ್ಳಿ ಸರ್ವೆ ನಂಬರ್ 182 ರಲ್ಲಿ 5 ಎಕರೆ ಜಾಗ, ಒಟ್ಟು 35ಎಕರೆ 18 ಗುಂಟೆ ಜಾಗ ಸ್ಮಶಾನಕ್ಕೆ ನಿಗದಿ ಮಾಡಲಾಗಿದೆ. ಸೋಂಕಿತರ ಅಂತ್ಯಸಂಸ್ಕಾರಕ್ಕೆ ಈ ಪ್ರದೇಶ ಬಳಕೆ ಮಾಡಿಕೊಳ್ಳಲಾಗುತ್ತದೆ.

error: Content is protected !!
Scroll to Top