ಇತರ ಸುದ್ದಿ

ಆ ವೃದ್ಧರ ಶವ ಎತ್ತಲೂ ಯಾರೂ ಬರಲಿಲ್ಲ

ಕೋಲ್ಕೊತ್ತಾದ ಬೆಹಲ ಬಡಾವಣೆಯ 70 ವರ್ಷ ಪ್ರಾಯವಾಗಿದ್ದ ಸನಾತನ್‌ ಪ್ರಧಾನ್‌  ಜು.19ರಂದು ಅಸ್ವಸ್ಥರಾದರು. ಮರುದಿನ ಮನೆಯವರು ಕೊರೊನಾ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಜು.23ರಂದು ಮನೆಯವರಿಗೆ  ಫೋನ್‌ ಬಂತು. ಸನಾತನ್‌ ವರದಿ ಪೊಸಿಟಿವ್‌ ಬಂದಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್‌ ಬರುತ್ತದೆ ತಯಾರಾಗಿರಿ ಎಂದರು. ಆದರೆ ಎಷ್ಟು ಹೊತ್ತಾದರೂ ಆಂಬುಲೆನ್ಸ್‌ ಬರಲಿಲ್ಲ. ಪದೇಪದೆ ಫೋನ್‌    ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. 20  ತಾಸು ಕಳೆದರೂ ಆಂಬುಲೆನ್ಸ್‌ ಬರಲಿಲ್ಲ. ಅಂಬುಲೆನ್ಸ್‌ಗೆ ಕಾಯುತ್ತಲೇ ಸನಾತನ್‌ ಪ್ರಾಣ ಬಿಟ್ಟರು.ಪ್ರಾಣ ಹೋದ […]

ಆ ವೃದ್ಧರ ಶವ ಎತ್ತಲೂ ಯಾರೂ ಬರಲಿಲ್ಲ Read More »

ಸಿಂಧು ಮಾನೆಗೆ ಯಾವಾಗ ನೌಕರಿ ಮರಳಿ ಸಿಕ್ಕೀತು?

ಸಿಂಧು ಮಾನೆ ಮುಂಬಯಿಯ ಹಿಂದುಜಾ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರು. ನಗರದಲ್ಲಿ ಕೊರೊನಾ ಹಾವಳಿ ಇರುವಾಗಲೂ ಉಳಿದವರಂತೆ ಅವರು ಕೂಡ ತನ್ನ ಕರ್ತವ್ಯದಲ್ಲಿ ನಿರತರಾಗಿದ್ದರು. ಹೀಗಿರುವಾಗ ಮೇ ತಿಂಗಳಲ್ಲಿ ಒಂದು ದಿನ ಸಿಂಧು ಮಾನೆಗೂ ಕೊರೊನಾ ವೈರಸ್‌ ತಗಲಿತು. ಒಂದು ಖಾಸಗಿ ಸೆಕ್ಯುರಿಟಿ ಕಂಪನಿಯ ಉದ್ಯೋಗಿ ಸಿಂಧು  ಮಾನೆ. ಧಾರಾವಿಯ ಕೊಳೆಗೇರಿಯ ಚಾಳ್‌ನಲ್ಲಿ ಗಂಡ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸವಾಗಿದ್ದಾರೆ. ಕೊರೊನಾ ರೋಗಿಗಳಿಗಾಗಿಯೇ ಇದ್ದ ರಾಜೀವ್‌ ಗಾಂಧಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ನಲ್ಲಿ ಅವರನ್ನು ಕ್ವಾರಂಟೈನ್‌ ಮಾಡಲಾಯಿತು.

ಸಿಂಧು ಮಾನೆಗೆ ಯಾವಾಗ ನೌಕರಿ ಮರಳಿ ಸಿಕ್ಕೀತು? Read More »

ಇದು ಖಾತರಿ ಅಗತ್ಯವಿಲ್ಲದ ಸಾಲ-ಆತ್ಮ ನಿರ್ಭರ ಭಾರತದಡಿ ಕೇಂದ್ರದ ಕೊಡುಗೆ

ದಿಲ್ಲಿ : ಕೊರೊನಾ  ವೈರಸ್ ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ಅದರಲ್ಲೂ ಸಣ್ಣ ಪುಟ್ಟ ವ್ಯಾಪಾರಿಗಳು, ಕುಶಲಕರ್ಮಿಗಳು, ಕೂಲಿ ಕಾರ್ಮಿಕರು, ಖಾಸಗಿ ರಂಗದ ಉದ್ಯೋಗಿಗಳು, ಅಸಂಘಟಿತ ಒಇದ ಕಾರ್ಮಿಕರು ನೌಕರಿ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇ<ಥವರಿಗೆ ನೆರವಾಗಲೆಂದೇ ಕೇಂದ್ರ ಸರಕಾರ ಸಣ್ಣ ಮೊತ್ತದ ತ್ವರಿತ ಸಾಲ  ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಮುಖ್ಯವಾಗಿ ಲಾಕ್‌ ಡೌನ್‌ನಿಂದಾಗಿ  ಉದ್ಯೋಗ ಮತ್ತು ಚಿಕ್ಕಪುಟ್ಟ ವ್ಯಾಪಾರವನ್ನು ಕಳೆದುಕೊಂಡವರಿಗಾಗಿ ಕೆಲಸವನ್ನು ಪುನರಾರಂಭಿಸಲು ಹಣದ ಅಗತ್ಯ ಇದೆ. ದೀರ್ಘ ಪ್ರಕ್ರಿಯೆ ಮತ್ತು ಬ್ಯಾಂಕಿನ ಹೆಚ್ಚಿನ ಬಡ್ಡಿದರಗಳಿಂದಾಗಿ

ಇದು ಖಾತರಿ ಅಗತ್ಯವಿಲ್ಲದ ಸಾಲ-ಆತ್ಮ ನಿರ್ಭರ ಭಾರತದಡಿ ಕೇಂದ್ರದ ಕೊಡುಗೆ Read More »

ಸುಪರ್‌ ಮಾರ್ಕೆಟ್‌ ಸುಪರ್‌ ವೈಸರ್‌ ಈಗ ರಸ್ತೆ ಬದಿಯ ಈರುಳ್ಳಿ ವ್ಯಾಪಾರಿ

ಕೇರಳದ ಅಲಪ್ಪುಳ ಜಿಲ್ಲೆಯ ವಲ್ಲಿಕುನ್ನು ನಿವಾಸಿ ಅಬ್ದುಲ್‌ ತಾಹಾ ಓಮಾನ್ ನಲ್ಲಿ ಸುಪರ್ ಮಾರ್ಕೆಟ್ ನ ಸುಪರ್‌ವೈಸರ್‌ಗೆ ಆಗಿ ತಕ್ಕ ಮಟ್ಟಿಗೆ ಉತ್ತಮ ಸಂಪಾದನೆಯನ್ನು  ಮಾಡುತ್ತಿದ್ದರು. ಖರ್ಚು ಕಳೆದು ಮನೆಗೂ ಒಂದಿಷ್ಟು ಕಳುಹಿಸುತ್ತಿದ್ದರು.ಊರಿನಲ್ಲಿರುವ ಅಪ್ಪ,ಅಮ್ಮ,ಇಬ್ಬರು ತಂಗಿಯಂದಿರ ಬದುಕು ಅವರು ಕಳುಹಿಸುವ ಹಣದಿಂದ ಹೆಚ್ಚೇನೂ ಏರುಪೇರಿಲ್ಲದೆ ಸಾಗುತ್ತಿತ್ತು.  ಗಲ್ಫ್‌ ನಲ್ಲೂ ಕೊರೊನಾ ಹಾವಳಿ ಶುರುವಾಗಿ ಸುಪರ್‌ ಮಾರ್ಕೆಟ್‌ ಮುಚ್ಚಿತು. ನಿರುದ್ಯೋಗಿಯಾದ ತಾಹಾ ಎಪ್ರಿಲ್‌ ನಲ್ಲಿ ಹೇಗಾದರೂ ಮಾಡಿ ಊರು ಸೇರಿಕೊಂಡರು. ಕೈಯಲ್ಲಿ ಒಂದಷ್ಟು ಹಣ ಇರುವಾಗ ಹೇಗೋ ದಿನ

ಸುಪರ್‌ ಮಾರ್ಕೆಟ್‌ ಸುಪರ್‌ ವೈಸರ್‌ ಈಗ ರಸ್ತೆ ಬದಿಯ ಈರುಳ್ಳಿ ವ್ಯಾಪಾರಿ Read More »

ರಾವಣ ಜಗತ್ತಿನ ಮೊದಲ ಪೈಲಟಾ? ಸಂಶೋಧನೆ ನಡೆಸಲಿದೆ ಶ್ರೀಲಂಕಾ

ಬೆಂಗಳೂರು:ರಾಮಾಯಣ ಮಹಾಕಾವ್ಯದಲ್ಲಿ ಸೀತೆಯನ್ನು ಅಪಹರಿಸುವ, ಎಡೆಗೆ ರಾಮನಿಂದ ಹತನಾಗುವ ರಾವಣನನ್ನುನಾವು ವಿಲನ್‌ ರೀತಿ ನೋಡುತ್ತಿರಬಹುದು.ಆದರೆ ರಾವಣನ ಊರಾ ಶ್ರೀಲಂಕಾದಲ್ಲಿ ಆತ ಹೀರೊ. ಲಂಕಾಸುರನೆಂದು ಭಾರತೀಯರು ಕರೆಯುವ ರಾವಣನ ಬಗ್ಗೆ ಶ್ರೀಲಂಕಾದಲ್ಲಿ ಈಚೆಗೆ ಅಪರಿಮಿತ ಆಸಕ್ತಿ ಮೂಡಿದೆ. ಅಲ್ಲಿನ ಸರ್ಕಾರವು ರಾವಣನ ಬಗ್ಗೆ ಸರ್ವ ರೀತಿಯಲ್ಲಿ ಅಧ್ಯಯನ ನಡೆಸಲು ಮುಂದಾಗಿದೆ. ರಾವಣನ ಬಗ್ಗೆ ಯಾರ ಬಳಿಯಾದರೂ ಯಾವುದೇ ರೀತಿಯ ದಾಖಲೆಗಳು ಇದ್ದರೆ ಸರ್ಕಾರಕ್ಕೆ ನೀಡಿ ಎಂದು ಅಲ್ಲಿ ಜಾಹೀರಾತುಗಳನ್ನ ನೀಡಲಾಗಿದೆ. ಶ್ರೀಲಂಕಾದ ಪುರಾತನ ವೈಮಾನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚು

ರಾವಣ ಜಗತ್ತಿನ ಮೊದಲ ಪೈಲಟಾ? ಸಂಶೋಧನೆ ನಡೆಸಲಿದೆ ಶ್ರೀಲಂಕಾ Read More »

ದಾಸರಿ ಎಂಬ ನಿತ್ಯ ಅನ್ನ ದಾಸೋಹಿ

ದಾಸರಿ ದುರ್ಗಾ ರಾವ್‌ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಕೃಷ್ಣಾ ನದಿಯ ದಂಡೆಯಲ್ಲಿರುವ ರಣಿಗೇರಿತೋಟ ಕಾಲನಿಯಲ್ಲಿ ವಾಸವಾಗಿರುವ ಒಬ್ಬ ಸಾಮಾನ್ಯ ಮೀನು ವ್ಯಾಪಾರಿ. ಬಾಲ್ಯದಲ್ಲೇ ಪೋಲಿಯೊ ಪೀಡಿತರಾಗಿರುವ ದಾಸರಿಯವರ ಓಡಾಟವೇನಿದ್ದರು ವಿಶೇಷವಾಗಿ ತಯಾರಿಸಲಾಗಿರುವ ತ್ರಿಚಕ್ರ ಸ್ಕೂಟಿಯಲ್ಲಿ. ನಿತ್ಯ ಬೆಳಗ್ಗೆ 4 ಗಂಟೆಗೆ ಏಳುವ ದಾಸರಿ 40 ಕಿ.ಮೀ.ದೂರವಿರುವ ಗುಂಟೂರು ಪೇಟೆಗೆ ತನ್ನ ತ್ರಿಚಕ್ರ ಸ್ಕೂಟಿಯನ್ನು ಚಲಾಯಿಸಿಕೊಂಡು  ಹೋಗುತ್ತಾರೆ. ಮುಖ್ಯ ಮಾರುಕಟ್ಟೆಯ ಫುಟ್ ಪಾತಿನ  ಟೆಂಟ್‌ನಲ್ಲಿ ಬೆಳಗ್ಗೆಯೇ ಅವರ ಮೀನು ವ್ಯಾಪಾರ ಪ್ರಾರಂಭವಾಗುತ್ತದೆ. ಉತ್ತಮ ತಾಜಾ ಮೀನುಗಳನ್ನು ಮಾರುವ

ದಾಸರಿ ಎಂಬ ನಿತ್ಯ ಅನ್ನ ದಾಸೋಹಿ Read More »

ಕೊರೊನಾ ವೈರಸ್ ನ 11 ಹೊಸ ರೋಗಲಕ್ಷಣಗಳು

ದಿಲ್ಲಿ : ಕೊರೊನಾ ವೈರಸ್‌ ವ್ಯದ್ಯರನ್ನು ಏಮಾರಿಸಿದಷ್ಟು ಬೇರೆ ಯಾವ ವೈರಸ್‌ ಏಮಾರಿಸಿರಲಿಕ್ಕಿಲ್ಲ. ಈ ವೈರಸ್‌ ಗೆ ನಿರ್ದಿಷ್ಟವಾದ ರೋಗ ಲಕ್ಷಣ ಎಂಬುದೇ ಇಲ್ಲ. ಆಗಾಗ ತನ್ನ ಲಕ್ಷಣಗಳನ್ನು ಬದಲಾಯಿಸುತ್ತಿರುವ ಇದು ವೈದ್ಯ ಲೋಕಕ್ಕೆ ಒಂದು  ಸವಾಲೇ ಆಗಿದೆ. ಇದರ ಲಕ್ಷಣಗಳು ನಿರಂತರವಾಗಿ ಬದಲಾಗುತ್ತಿವೆ. ಹೊಸ ಲಕ್ಷಣಗಳು ಕಂಡುಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ವೈರಸ್‌ನ ಹೊಸ 11 ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದೆ. ಆರಂಭದಲ್ಲಿ ಪತ್ತೆಯಾದ 4 ಲಕ್ಷಣಗಳು

ಕೊರೊನಾ ವೈರಸ್ ನ 11 ಹೊಸ ರೋಗಲಕ್ಷಣಗಳು Read More »

ಪೊಲೀಸರಿಗೆ ಮದುವೆ ಊಟ ಹಾಕಿದ ನವದಂಪತಿ

ಮುಂಬಯಿ : ಅಭಿಷೇಕ್‌ ಮತ್ತು ಮೀರಾ ಕುಲಕರ್ಣಿ 8 ವರ್ಷ ಪ್ರೀತಿಸಿ ಈ ವರ್ಷ ಮದುವೆಯಾಗಲು ತೀರ್ಮಾನಿಸಿದರು. ಅದರಂತೆ ಕಳೆದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥವೂ ಆಯಿತು. ಆದರೆ ಮದುವೆಗೆ ಮಾತ್ರ ಕೊರೊನಾ ಅಡ್ಡಿಯಾಯಿತು. ಕೊನೆಗೂ ಜೂನ್‌ 25 ರ<ದು ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಸರಳವಾಗಿ ಅವರ ಮದುವೆ ನೆರವೇರಿತು.ಇಲ್ಲಿಯ ತನಕ ಇದು ಒಂದು ಮಾಮೂಲು ಕತೆ. ನಿಜವಾದ ಕತೆ ಪ್ರಾರಂಭವಾಗುವುದು  ನಂತರ ಏನಾಯಿತು ಎನ್ನುವಲ್ಲಿಂದ. ತಕ್ಕ ಮಟ್ಟಿಗೆ ಅನುಕೂಲಸ್ಥರಾಗಿರುವ ಕುಲಕರ್ಣಿ ಕುಟುಂಬ  ಅದ್ದೂರಿಯಾಗಿ ಮದುವೆ ಮಾಡಲು ಅಗತ್ಯವಿದ್ದ

ಪೊಲೀಸರಿಗೆ ಮದುವೆ ಊಟ ಹಾಕಿದ ನವದಂಪತಿ Read More »

ಕೊರೊನಾ ವೈರಸ್‌ – ನೂತನ ಮಾರ್ಗಸೂಚಿ ಜಾರಿ

ಕರೋನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಂಡಿದೆ.  ದಿಲ್ಲಿ: ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಂಡಿದೆ. ಡಬ್ಲ್ಯುಎಚ್‌ಒ ಗುರುವಾರ ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಈ ಗೈಡ್ ಲೈನ್ಸ್ ನಲ್ಲಿ ಗಾಳಿಯಲ್ಲಿ ವೈರಸ್ ಹರಡುವಿಕೆಗೆ ಸಂಬಂಧಿಸಿದ ವಾದಗಳನ್ನು ಸ್ವೀಕರಿಸಲಾಗಿದೆ. ಆದರೂ ಕೊಡ ಈ ನಿಟ್ಟಿನಲ್ಲಿ ವ್ಯಾಪಕ ಅಧ್ಯಯನ ನಡೆಸುವುದು ಅಗತ್ಯವಿದೆ ಎಂದು

ಕೊರೊನಾ ವೈರಸ್‌ – ನೂತನ ಮಾರ್ಗಸೂಚಿ ಜಾರಿ Read More »

ವರ್ಷಕ್ಕೆ 660 ರೂ. ಹೂಡಿಕೆ – 36 ಸಾವಿರ ರೂ. ಪ್ರತಿಫಲ ಮೋದಿ ಸರಕಾರದ ಪಿಂಚಣಿ ವ್ಯವಸ್ಥೆಯ ವಿವರ

ಕಡಿಮೆ ಆದಾಯ ವರ್ಗದವರಿಗೆ ಕೇಂದ್ರ ಸರಕಾರದಿಂದ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ  ಪಿಂಚಣಿ ದಿಲ್ಲಿ :  ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಕಡಿಮೆ ಆದಾಯ ಇರುವವರಿಗೆ ಪಿಂಚಣಿ ವ್ಯವಸ್ಥೆ ಮಾಡಿದೆ. ಈ ಯೋಜನೆಯಡಿ 60 ವರ್ಷಗಳ ನಂತರ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ಸಿಗುತ್ತದೆ.  18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆ ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆ ಸೇರಬಹುದು.

ವರ್ಷಕ್ಕೆ 660 ರೂ. ಹೂಡಿಕೆ – 36 ಸಾವಿರ ರೂ. ಪ್ರತಿಫಲ ಮೋದಿ ಸರಕಾರದ ಪಿಂಚಣಿ ವ್ಯವಸ್ಥೆಯ ವಿವರ Read More »

error: Content is protected !!
Scroll to Top