• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ಕಾರ್ಕಳ : ಕ್ರಿಯೇಟಿವ್ ವಿದ್ಯಾರ್ಥಿಗಳಿಗೆ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ

ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕು- ಹರಿಶ್ಚಂದ್ರ ಕುಲಾಲ್ ಕಾರ್ಕಳ: ಕ್ರಿಯೇಟಿವ್ ಪ.ಪೂ. ಕಾಲೇಜಿನ ʼಹಸಿರೊಡನೆ ಕಲಿಕೆಯ ಕಲರವʼ ಕಾರ್ಯಕ್ರಮ ಪೆರ್ವಾಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸೆ. 19ರಂದು ಜರುಗಿತು. ಮುಖ್ಯಅತಿಥಿಯಾಗಿ ಹರಿಶ್ಚಂದ್ರ ಕುಲಾಲ್ ಭಾಗವಹಿಸಿದ್ದು, ಮಾತನಾಡಿದ ಅವರು ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು

ಕಾರ್ಕಳ : ಕ್ರಿಯೇಟಿವ್ ವಿದ್ಯಾರ್ಥಿಗಳಿಗೆ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ Read More »

ನಾಳೆ ಉತ್ತರ ಪ್ರದೇಶ ಸಿಎಂ ಯೋಗಿ ಸಿಲಿಕಾನ್‌ ಸಿಟಿ ನೆಲಮಂಗಲಕ್ಕೆ ಭೇಟಿ

ಬೆಂಗಳೂರು : ನೆಲಮಂಗಲ ಮಹದೇವಪುರದ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಧರ್ಮಸ್ಥಳ ಎಸ್‌ಡಿಎಂಸಿ ಸೊಸೈಟಿ ಸ್ಥಾಪಿಸಿರುವ ಮೂರನೇ ನಿಸರ್ಗದತ್ತ ಆರೋಗ್ಯ ಕ್ಷೇಮಪಾಲನ ಕೇಂದ್ರವಾದ ಕ್ಷೇಮವನವನ್ನು ಸೆ.1ರಂದು ಪೂರ್ವಾಹ್ನ 11.45ಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಲಿದ್ದಾರೆ. ಮಹದೇವಪುರ ಗ್ರಾಮದ ಸಮೀಪ 20ಎಕರೆ ಜಾಗದಲ್ಲಿ ರೂ.93 ಕೋಟಿ ವೆಚ್ಚದಲ್ಲಿ ಈ ಕ್ಷೇಮವನ್ನು ನಿರ್ಮಾಣಗೊಳಿಸಲಾಗಿದ್ದು, ಬೆಂಗಳೂರು ಸುತ್ತಮುತ್ತಲು ಮತ್ತು ಹತ್ತಾರು ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಬಹಳ ಅನುಕೂಲವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಮಹಾಸ್ವಾಮೀಜಿ ಡಾ. ನಿರ್ಮಲಾನಂದನಾಥ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನಾಳೆ ಉತ್ತರ ಪ್ರದೇಶ ಸಿಎಂ ಯೋಗಿ ಸಿಲಿಕಾನ್‌ ಸಿಟಿ ನೆಲಮಂಗಲಕ್ಕೆ ಭೇಟಿ Read More »

ಗ್ರಾಮ ಸಹಾಯಕರಿಗೆ ಕೈದಿಗಳ ದಿನಗೂಲಿಯೂ ಇಲ್ಲ

ನ್ಯೂಸ್‌ ಕಾರ್ಕಳ ವಿಶೇಷ ವರದಿ ಅಸಹಾಯಕ ಗ್ರಾಮ ಸಹಾಯಕರು ಕಾರ್ಕಳ : ಗ್ರಾಮಸ್ಥರಿಗೆ ಸರಕಾರಿ ಸೌಲಭ್ಯ ಒದಗಿಸಿಕೊಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಸಿಗುವ ಸಂಬಳ ಮಾತ್ರ ಯಾವ ಮೂಲೆಗೆ ಸಾಕಾಗುತ್ತಿಲ್ಲ. ವಿಪರ್ಯಾಸವೆಂದರೆ ಜೈಲಿನಲ್ಲಿರುವ ಕೈದಿಗಳಿಗೆ ಸಿಗುವಷ್ಟು ದಿನಕೂಲಿ ಕೂಡ ಗ್ರಾಮ ಸಹಾಯಕರಿಗೆ ದೊರೆಯುತ್ತಿಲ್ಲ. ಈ ಚಿಲ್ಲರೆ ಸಂಬಳವನ್ನು ಕೂಡ ಸರಿಯಾರಿ ಕೊಡುತ್ತಿಲ್ಲ. ಕೆಲವೊಮ್ಮೆ ಮೂರು ತಿಂಗಳವರೆಗೆ ಕಾಯಬೇಕೆನ್ನುವುದು ವಾಸ್ತವ.ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಾರ್ಯವೂ ಗ್ರಾಮ ಸಹಾಯಕರ ಮೂಲಕವೇ ಆಗಬೇಕು. ಗ್ರಾಮದಲ್ಲಿ ಅದೇನೆ ತೊಂದರೆಯಾದರೂ

ಗ್ರಾಮ ಸಹಾಯಕರಿಗೆ ಕೈದಿಗಳ ದಿನಗೂಲಿಯೂ ಇಲ್ಲ Read More »

ರೆಡಿಯಾಗುತ್ತಿದೆ ಕಾರ್ಕಳಕ್ಕೊಂದು ಸುಂದರ ವಾಕಿಂಗ್‌ ಟ್ರ್ಯಾಕ್‌

ಕಾರ್ಕಳ: ಸರ್ವಾಂಗೀಣವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕಾರ್ಕಳ ನಗರಕ್ಕೆ ಸುಸಜ್ಜಿತವಾದ ವಾಕಿಂಗ್‌ ಟ್ರ್ಯಾಕ್‌ ಇಲ್ಲ ಎಂಬ ಕೊರತೆಯೊಂದಿತ್ತು. ಇದೀಗ ಈ ಕೊರತೆಯೂ ನೀಗುವ ಕಾಲ ಸನ್ನಿಹಿತವಾಗಿದೆ. ಕಾರ್ಕಳದ ಅಭಿವೃದ್ಧಿಗೆ ಪಣತೊಟ್ಟು ಹಗಲಿರುಳು ಶ್ರಮಿಸುತ್ತಿರುವ ಕ್ಷೇತ್ರದ ಶಾಸಕರೂ ಆಗಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅವರ ಪ್ರಯತ್ನದ ಫಲವಾಗಿ ನಗರದ ಆನೆಕೆರೆ ಸುತ್ತ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣವಾಗುತ್ತಿದೆ. ಬೆಳೆಯುತ್ತಿರುವ ಕಾರ್ಕಳ ನಗರಕ್ಕೆ ಈ ಮಾದರಿಯ ವಾಕಿಂಗ್‌ ಟ್ರ್ಯಾಕ್‌ನ ಅಗತ್ಯವಿತ್ತು. ವಾಕಿಂಗ್‌ ಟ್ರ್ಯಾಕ್‌ ಆನೆಕೆರೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ

ರೆಡಿಯಾಗುತ್ತಿದೆ ಕಾರ್ಕಳಕ್ಕೊಂದು ಸುಂದರ ವಾಕಿಂಗ್‌ ಟ್ರ್ಯಾಕ್‌ Read More »

ರಾಜ್ಯದ ಬಾರ್ & ರೆಸ್ಟೋರೆಂಟ್​ಗಳಲ್ಲಿ ಮದ್ಯಪೂರೈಕೆ ಬಂದ್

ನೂತನ ಸಾಫ್ಟ್​ವೇರ್ ಅಪ್​ ಡೇಟ್​ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ ಕೆ.ಎಸ್.ಬಿ.ಸಿ.ಎಲ್.ನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಬಾರ್​ ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮದ್ಯಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ರಾಜ್ಯದ ಬಾರ್ ಹಾಗೂ ರೆಸ್ಟೋರೆಂಟ್​ಗಳಲ್ಲಿ ಖಾಲಿಯಾಗಿವೆ ಮದ್ಯಪಾನ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಮಧ್ಯ ಇದೆ. ಎ. 6ರಂದು ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.

ರಾಜ್ಯದ ಬಾರ್ & ರೆಸ್ಟೋರೆಂಟ್​ಗಳಲ್ಲಿ ಮದ್ಯಪೂರೈಕೆ ಬಂದ್ Read More »

ಮುಸಲ್ಮಾನರ ಬಗ್ಗೆ ವಿರೋಧ ಇಲ್ಲ – ಸಚಿವ ಈಶ್ವರಪ್ಪ

ಕಾರ್ಕಳ : ಯಾವ ಮುಸಲ್ಮಾನ ಸ್ವಾತಂತ್ರ್ಯ ಹೋರಾಟದಲ್ಲಿ, ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೋ‌ ಅಂತಹ ಮುಸಲ್ಮಾನರ ಬಗ್ಗೆ ಗೌರವವಿದೆ. ಯಾವ ಮುಸಲ್ಮಾನ ತಾಯ್ನಾಡಿನ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾನೋ ಅಂತಹವರಿಗೆ ಬಹಿಷ್ಕಾರವಿದೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಎ. 3ರಂದು ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್‌ ಅವರವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾವೇನೂ ಹೇಳಲ್ಲ. ಉಡುಪಿಯ 6 ಮಂದಿ ವಿದ್ಯಾರ್ಥಿಗಳಿಂದಾಗಿ ಹಿಜಾಬ್‌ ರಾದ್ಧಾಂತ ಸೃಷ್ಟಿಯಾಯಿತು. ಇದೀಗ ಹಲಾಲ್‌ ವಿಚಾರವಾಗಿ ಕೆಲವರು ವಿವಾದವುಂಟು

ಮುಸಲ್ಮಾನರ ಬಗ್ಗೆ ವಿರೋಧ ಇಲ್ಲ – ಸಚಿವ ಈಶ್ವರಪ್ಪ Read More »

ರಕ್ತ ದಾನದಲ್ಲಿ ಉಡುಪಿ ಜಿಲ್ಲೆ ಮುಂದೆ : ಡಾ. ಮಧುಸೂದನ

ಕಾರ್ಕಳ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ದಾನವೆ ರಕ್ತದಾನ. ಉಡುಪಿ ಜಿಲ್ಲೆ ರಕ್ತದಾನದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯು ಹಲವು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ ಎಂದು ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ. ಮಧುಸೂದನ ನಾಯಕ್ ಕಾರ್ಕಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿರುವ ರೆಡ್ ಕ್ರಾಸ್ ಸಪ್ತಾಹದ ಅಂಗವಾಗಿ ಏಪ್ರಿಲ್ 3 ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಭಾಪತಿ ಡಾಕ್ಟರ್ ಕೆ. ರಾಮಚಂದ್ರ ಜೋಶಿ ಅವರು

ರಕ್ತ ದಾನದಲ್ಲಿ ಉಡುಪಿ ಜಿಲ್ಲೆ ಮುಂದೆ : ಡಾ. ಮಧುಸೂದನ Read More »

ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗ್ರೂಪ್ ಕ್ಯಾ|ವರುಣ್ ಸಿಂಗ್ ಇನ್ನಿಲ್ಲ

ಬೆಂಗಳೂರು: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇದೀಗ ಹುತಾತ್ಮರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ. ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರಂತ ನಡೆದ ಸ್ಥಳದಲ್ಲಿ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ಏರ್ ಲಿಪ್ಟ್ ಮಾಡಲಾಗಿತ್ತು.

ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗ್ರೂಪ್ ಕ್ಯಾ|ವರುಣ್ ಸಿಂಗ್ ಇನ್ನಿಲ್ಲ Read More »

ವೇಣೂರು : ಪರಿಸರ ಪ್ರೇಮಿಗಳ ಪ್ರಯತ್ನದ ಹೊರತಾಗಿಯೂ ಮೌಡ್ಯಕ್ಕೆ ಬಲಿಯಾದ ಶ್ರೀತಾಳೆ

ವೇಣೂರು : ಪರಿಸರ ಪ್ರೇಮಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ ಬೆಳ್ತಂಗಡಿ ತಾಲೂಕು ವೇಣೂರು ಬಳಿಯ ಕರಿಮಣೇಲು ಗ್ರಾಮದಲ್ಲಿದ್ದ ಶ್ರೀತಾಳೆಮರ ಕೊನೆಗೂ ಮೌಢ್ಯಕ್ಕೆ ಬಲಿಯಾಗಿದೆ ಎಂದು ಮರವನ್ನು ಉಳಿಸಲು ಹೋರಾಡಿದ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್ ಸರಳೇಬೆಟ್ಟು ಬೇಸರ ವ್ಯಕ್ತಪಡಿಸಿದರು. ಸತತ ಪ್ರಯತ್ನದಿಂದ ಉಡುಪಿ ಸಮೀಪದ ಆತ್ರಾಡಿಯಲ್ಲಿದ್ದ ಶ್ರೀತಾಳೆ ಮರವನ್ನು ಮನೆಯವರ ಜತೆ ಮಾತನಾಡಿ ಉಳಿಸುವಲ್ಲಿ ಯಶಸ್ವಿಯಾಗಿದ್ದೆವು. ಆ ಮನೆಯ ಯಜಮಾನರು ಇಂದಿಗೂ ಜೀವಂತವಾಗಿದ್ದಾರೆ.ಅದರಂತೆ ವೇಣೂರಿನ ಕರಿಮಣೇಲು ಮನೆಯವರಿಗೂ ಮನವರಿಕೆ ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು

ವೇಣೂರು : ಪರಿಸರ ಪ್ರೇಮಿಗಳ ಪ್ರಯತ್ನದ ಹೊರತಾಗಿಯೂ ಮೌಡ್ಯಕ್ಕೆ ಬಲಿಯಾದ ಶ್ರೀತಾಳೆ Read More »

ಮಂಗಳೂರು :ಯುವಕನ ಸೆಲ್ಫಿ ಹುಚ್ಚಿಗೆ ಜೀವನವೇ ಕರಟಿ ಹೋಯಿತು

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಸುಟ್ಟು ಹೋದ ಘಟನೆ ದ.ಕ.ಜಿಲ್ಲೆಯ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ ನಡೆದಿದೆ. ಸಲಾನ್ ಪಾರಸ್ (21)ಎಂಬಾತನೇ ಅವಘಡಕ್ಕೆ ಒಳಗಾದ ಯುವಕ. ಸುರತ್ಕಲ್ ಕೊಂಕಣ ರೈಲ್ವೇ ನಿಲ್ದಾಣ ವಿದ್ಯುತ್ತೀಕರಣಗೊಂಡಿದ್ದು,ಕೆಳಮಟ್ಟದಲ್ಲಿ ಹೈವೋಲ್ಟೇಜ್ ತಂತಿಗಳನ್ನು ಆಳವಡಿಸಲಾಗಿದೆ. ಅಪಾಯದ ಬೋರ್ಡನ್ನು ಕೂಡ ಹಾಕಲಾಗಿತ್ತು. ಯುವಕ ಸಲಾನ್ ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ತೆರಳಿದ್ದ ಹೈವೋಲ್ಟೇಜ್

ಮಂಗಳೂರು :ಯುವಕನ ಸೆಲ್ಫಿ ಹುಚ್ಚಿಗೆ ಜೀವನವೇ ಕರಟಿ ಹೋಯಿತು Read More »

error: Content is protected !!
Scroll to Top