• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾರ್ಕಳ ಸುದ್ದಿ

ಕುಡಿತದ ಚಟ ಯುವಕ ಆತ್ಮಹತ್ಯೆ

ಅಜೆಕಾರು: ಅತಿಯಾದ ಮದ್ಯಪಾನದ ಚಟ ಹೊಂದಿದ್ದ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಂಡೆರಗಂಡಿ ಬಳಿ ನಡೆದಿದೆ.ಕಾರ್ತಿಕೇಯನ್ (28) ಮೃತಪಟ್ಟವರು. ಇವರು ಕಳೆದ ಎರಡು ವರ್ಷಗಳಿಂದ ಸ್ಥಳೀಯ ಮನೋಜ್ ಎಂಬುವವರ ಪ್ರಭಾ ಆರ್ಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 31ರಂದು ಕೆಲಸಕ್ಕೆ ರಜೆ ಹಾಕಿದ್ದ ಕಾರ್ತಿಕೇಯನ್ ಅಂದು ರಾತ್ರಿ 9.30ಕ್ಕೆ ಊಟ ಮುಗಿಸಿ ಪ್ರಭಾ ಆರ್ಟ್ಸ್ ಬಳಿ ಇರುವ ತಮ್ಮ ಕೊಠಡಿಗೆ ತೆರಳಿದ್ದರು. ಮರುದಿನ (ಸೆ.1) ಬೆಳಿಗ್ಗೆ 8.15ರ ಸುಮಾರಿಗೆ ಸಹೋದ್ಯೋಗಿ ಕೊಠಡಿಯ ಬಳಿ ತೆರಳಿ

ಕುಡಿತದ ಚಟ ಯುವಕ ಆತ್ಮಹತ್ಯೆ Read More »

ಆಸ್ಪತ್ರೆ ದಾಖಲಾಗಿದ್ದ ಆಟೋ ಚಾಲಕ – ಡಿಸ್ಚಾರ್ಜ್‌ ಆಗದೇ ಮನೆಗೆ ಬಂದು ಆತ್ಮಹತ್ಯೆ

ಕಾರ್ಕಳ : ಆಟೋ ಚಾಲಕ, ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ ಗಣೇಶ್‌ ಆಚಾರ್ಯ (38) ಆ. 31ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್‌ ಆಸ್ಪತ್ರೆಗೆ ದಾಖಲಾಗಿದ್ದರು. ಡಿಸ್ಚಾರ್ಜ್‌ ಆಗದೇ ಆಸ್ಪತ್ರೆಯಿಂದ ನೇರ ಮನೆಗೆ ಬಂದಿರುವ ಗಣೇಶ್‌ ವಿಷ ಪದಾರ್ಥ ಸೇವಿಸಿದ್ದಾರೆ. ಅವಿವಾಹಿತರಾಗಿದ್ದ ಅವರು ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಆಸ್ಪತ್ರೆ ದಾಖಲಾಗಿದ್ದ ಆಟೋ ಚಾಲಕ – ಡಿಸ್ಚಾರ್ಜ್‌ ಆಗದೇ ಮನೆಗೆ ಬಂದು ಆತ್ಮಹತ್ಯೆ Read More »

ಬೈಲೂರು: ಬೈಕ್‌ಗಳ ನಡುವೆ ಅಪಘಾತ ಮಹಿಳೆಗೆ ಗಂಭೀರ ಗಾಯ

ಕಾರ್ಕಳ: ತಾಲೂಕಿನ ಬೈಲೂರು ಗ್ರಾಮದ ಕಲ್ಲಕಂಬ ಬಳಿ ಸೋಮವಾರ (ಆ. 31) ಬೆಳಿಗ್ಗೆ ಸಂಭವಿಸಿದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ನಿವಾಸಿ ಶಿವಪ್ರಸಾದ್ ನಾಯ್ಕ ಅವರು ತಮ್ಮ ಪತ್ನಿ ಮೋಹಿನಿ ಅವರೊಂದಿಗೆ ಬೈಕ್‌ನಲ್ಲಿ ಕಾರ್ಕಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಕಲ್ಲಕಂಬ ಬಳಿ ಮುಂಭಾಗದಲ್ಲಿ ತೆರಳುತ್ತಿದ್ದ ಮತ್ತೊಂದು ಬೈಕ್‌ನ ಸವಾರ ಮನ್ಸೂರ್ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಎರಡೂ ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿವೆ.ಅಪಘಾತದ ರಭಸಕ್ಕೆ ರಸ್ತೆಗೆ

ಬೈಲೂರು: ಬೈಕ್‌ಗಳ ನಡುವೆ ಅಪಘಾತ ಮಹಿಳೆಗೆ ಗಂಭೀರ ಗಾಯ Read More »

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ರನ್ನರ್‌ಅಪ್

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದಿದೆ. ತಂಡದ ಸದಸ್ಯ ಪೂಜಿತ್ ಗೌಡ ಬೆಸ್ಟ್ ಗೋಲ್‌ ಕೀಪರ್ ಅವಾರ್ಡ್ ತನ್ನದಾಗಿಸಿಕೊಂಡಿದ್ದಾರೆ. ತಂಡದಲ್ಲಿದ್ದ ಹೃತ್ವಿಕ್, ಆಖಿಲ್, ವಿಖ್ಯಾತ್ ಮತ್ತು ದೃತಿನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ರನ್ನರ್‌ಅಪ್ Read More »

ಸೆ. 5 : ಅನ್ಯಾರ್‌ಕಟ್ಟೆ ಮಾರುತಿ ಫ್ರೆಂಡ್ಸ್‌ – 28ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕಾರ್ಕಳ : ಕೌಡೂರು ನಿಂಜೂರು ಅನ್ಯಾರ್‌ಕಟ್ಟೆ ಶ್ರೀ ಮಾರುತಿ ಫ್ರೆಂಡ್ಸ್‌ ಇದರ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.5ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಗೋಪೂಜೆ, 10 ಗಂಟೆಗೆ ಭಜನಾ ಕಾರ್ಯಕ್ರಮ, 11 ಗಂಟೆಗೆ ಸಾಮೂಹಿಕ ಶನಿಪೂಜೆ, ಮಧ್ಯಾಹ್ನ 2 ಗಂಟೆಯಿಂದ ಮುದ್ದುಕೃಷ್ಣ ಸ್ಪರ್ಧೆ, 4 ಗಂಟೆಗೆ ಮಡಕೆ ಒಡೆಯುವುದು, ಆಟೋಟ ಸ್ಪರ್ಧೆ, 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 8.30ರಿಂದ ಮಂಗಳೂರು ಸಾಯಿಶಕ್ತಿ ಕಲಾಬಳಗದವರಿಂದ ತುಳು ಪೌರಾಣಿಕ ನಾಟಕ ಬನತ ಭೈರವೆ ಪ್ರದರ್ಶನಗೊಳ್ಳಲಿದೆ. ರಾತ್ರಿ

ಸೆ. 5 : ಅನ್ಯಾರ್‌ಕಟ್ಟೆ ಮಾರುತಿ ಫ್ರೆಂಡ್ಸ್‌ – 28ನೇ ವರ್ಷದ ಮೊಸರು ಕುಡಿಕೆ ಉತ್ಸವ Read More »

ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ವಿಶ್ವ ಹೃದಯ ದಿನದ ಅಂಗವಾಗಿ ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯು ಹೃದಯ ರೋಗದ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಉದ್ದೇಶದಿಂದ ಸಮಗ್ರ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್ ಪರಿಚಯಿಸಿದೆ.ರೂ. 3000/- ನ ಈ ಪ್ಯಾಕೇಜ್‌ನಲ್ಲಿ ಇಸಿಜಿ, ಎಕೋ /ಟಿಎಂಟಿ, ಎಫ್.ಬಿ.ಯಸ್, ಶುಗರ್ ಪರೀಕ್ಷೆ, ಲಿಪಿಡ್ ಪ್ರೊಫೈಲ್ ಮತ್ತು ಕಿಡ್ನಿ ಫಂಕ್ಷನ್ ಟೆಸ್ಟ್‌ಗಳನ್ನು ಒಳಗೊಂಡ ಅಗತ್ಯ ರಕ್ತ ಪರೀಕ್ಷೆಗಳು, ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿರುತ್ತದೆ.ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.

ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯ ತಪಾಸಣಾ ಶಿಬಿರ Read More »

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಕಾರ್ಕಳದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ನಾಳೆ ಕಣಜಾರಿನ ಮೂಲ ಮನೆಯಲ್ಲಿ ಅಂತ್ಯಸಂಸ್ಕಾರ ಕಾರ್ಕಳ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ತರಬೇತಿ ವಿಮಾನ ಪತನದಲ್ಲಿ ಮೃತಪಟ್ಟ ಕಾರ್ಕಳ ತಾಲೂಕಿನ ಕಣಜಾರು ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಅವರ ಅಂತಿಮ ಸಂಸ್ಕಾರ ಆ. 30ರಂದು ಕಣಜಾರು ಕಡಬೆರ್ಕೆ ಮನೆಯಲ್ಲಿ ನಡೆಯಲಿದೆ. ಉತ್ತರ ಪ್ರದೇಶದ ಕಾನ್ಪುರದ ಗರ್ಗ್ ಏವಿಯೇಷನ್ ತರಬೇತಿ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಭಿಷೇಕ್ ತರಬೇತಿ ಪಡೆಯುತ್ತಿದ್ದರು. ಆ. 27ರಂದು ನಡೆದ ತರಬೇತಿ ವಿಮಾನ ಪತನದ ಅಪಘಾತದಲ್ಲಿ ಅಭಿಷೇಕ್ ಪೂಜಾರಿ ಹಾಗೂ

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಕಾರ್ಕಳದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು Read More »

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಘಟಕ : ನಾರಾಯಣ ಗುರು ಜಯಂತಿ ಆಚರಣೆ – ಸಾಧಕರಿಗೆ ಸನ್ಮಾನ

ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಸಂಯುಕ್ತ ಆಶ್ರಯದಲ್ಲಿ ಆ.28ರಂದು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಜಾತಿ ಅಸಮಾನತೆಯ ವಿರುದ್ದ ಜನಜಾಗೃತಿ ನಡೆಸಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಬ್ರಹ್ಮ ಶ್ರೀ ನಾರಾಯಣಗುರುಗಳ ಜೀವನವು ನಮಗೆಲ್ಲರಿಗೂ ಮಾದರಿಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ನಿಗಮಗಳ ಮೂಲಕ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಘಟಕ : ನಾರಾಯಣ ಗುರು ಜಯಂತಿ ಆಚರಣೆ – ಸಾಧಕರಿಗೆ ಸನ್ಮಾನ Read More »

ಕಾರ್ಕಳ – ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ವರಮಹಾಲಕ್ಷ್ಮೀ ಪೂಜಾ ಸಂಭ್ರಮ

ಕಾರ್ಕಳ : ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮ ಪ್ರಾರಂಭವಾಗುತ್ತದೆ. ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬವೇ ವರಮಹಾಲಕ್ಷ್ಮಿ. ಅಂತೆಯೇ ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬ ಸಂಭ್ರಮಾಚರಣೆ. ಈ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಮುಖ್ಯವಾದ ಹಬ್ಬ. ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಮಹಿಳೆಯರು ಉಪವಾಸ ಕೈಗೊಳ್ಳುವ ಮೂಲಕ ವರಮಹಾಲಕ್ಷ್ಮಿ ವ್ರತ ಕೈಗೊಳ್ಳುತ್ತಾರೆ. ಕಾರ್ಕಳ – ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಕಳ ಶ್ರೀ ರಾಮ ಮಂದಿರ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರ,

ಕಾರ್ಕಳ – ಹೆಬ್ರಿ ಉಭಯ ತಾಲೂಕಿನೆಲ್ಲೆಡೆ ವರಮಹಾಲಕ್ಷ್ಮೀ ಪೂಜಾ ಸಂಭ್ರಮ Read More »

ಆ. 29 : ಕಾರ್ಕಳ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : ಪಿಡಬ್ಲ್ಯೂಡಿಯವರು ರೋಡ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ಮಾರ್ಗ ಸ್ಥಳಾಂತರದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆ. 29ರಂದು ಕಾರ್ಕಳದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಕಳ ತಾಲೂಕಿನ ಕೆ.ಎಚ್.ಬಿ ಕಾಲೋನಿ, ಜೋಡುರಸ್ತೆ, ಪದವು, ಗುಂಡ್ಯಡ್ಕ, ಬೊರ್ಗಲ್ ಗುಡ್ಡೆ, ಕುಂಟಾಡಿ, ಪೊಸನೊಟ್ಟು, ಪಳ್ಳಿ, ಆನಂದಿ ಮೈದಾನ, ನಕ್ರೆ, ಪರಪು ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಆ. 29 : ಕಾರ್ಕಳ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ Read More »

error: Content is protected !!
Scroll to Top