ಹೆಬ್ರಿ ಸುದ್ದಿ

hebri news, newskarkala, karkala news

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ

ಕಾರ್ಕಳ : ವೇಗವಾಗಿ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಸಬಾ ಗ್ರಾಮದ ಮ್ಯಾಡಿಸ್‌ ಕಟ್ಟಿ ಕೆಫೆ ಸಮೀಪ ರಸ್ತೆ ಬದಿ ಮಲಗಿದ್ದ ಗಣೇಶ ಎಂಬವರ ಕಾಲುಗಳ ಮೇಲೆ ಚಲಿಸಿದ ಪರಿಣಾಮ ಗಣೇಶ ಅವರ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮಾ.9ರ ರಾತ್ರಿ 11.45ರ ವೇಳೆಗೆ ಘಟನೆ ಸಂಭವಿಸಿದ್ದು, ಪೆರ್ವಾಜೆ ಕಸಬಾದ ರಾಮನಾಥ ಎಂಬವರು ನೀಡಿದ ದೂರಿನ ಪ್ರಕಾರ ನಗರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿ ಪಲ್ಟಿಯಾಗಿ ಡ್ರೈವರ್‌, ಕ್ಲೀನರ್‌ಗೆ […]

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ Read More »

ಹೆಬ್ರಿ : ಮಹಾ ಚಂಡಿಕಾಯಾಗ, ನೇಮೋತ್ಸವ

ಹೆಬ್ರಿ : ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪರಿವಾರ ಶಕ್ತಿಯಾದ ಬಚ್ಚಪ್ಪು ಮೇಲ್ಜಡ್ಡು ಶ್ರೀ ಧೂಮಾವತಿ ಸನ್ನಿಧಿಯಲ್ಲಿದೇವತಾ ಪಾರ್ಥನೆ, ಚಕ್ರಾಬ್ಜ ಮಂಡಲಪೂಜೆ, ಸರ್ವಮೂಲ ಪಾರಾಯಣ, ಚಂಡಿಕಾಹೋಮ, ಪಂಚವಿಂಶತಿ ದ್ರವ್ಯಕಲಶ ಸ್ಥಾಪನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ , ಪರಿವಾರ ಭೈರವ ಗುಳಿಕಗಳಿಗೆ ನವಕಪ್ರಧಾನ ಹೋಮ ಕಲಶಾಭಿಷೇಕ, ಬ್ರಹ್ಮಸ್ಥಾನ, ನಾಗಸ್ಥಾನ, ಪಂಜುರ್ಲಿ ಸ್ಥಾನಗಳಲ್ಲಿ ನವಕಪ್ರಧಾನ, ಮಲಸಾವಿರ ಸ್ಥಾನದಲ್ಲಿ ಪನಿವಾರಪೂಜೆ. ಸಾರ್ವಜನಿಕ ಅನ್ನಸಂತರ್ಪಣೆ ಶನಿವಾರ ನೆರವೇರಿದೆ.ಸಂಜೆ ಶ್ರೀ ಹರಿವಾಯು ಕೃಪಾಪೋಷಿತ ಧೂಮಾವತೀ ಯಕ್ಷಗಾನ ಕಲಾ ಸಂಘದಿಂದ “ಸಹಸ್ರಾರ ವೈಭವ”

ಹೆಬ್ರಿ : ಮಹಾ ಚಂಡಿಕಾಯಾಗ, ನೇಮೋತ್ಸವ Read More »

ಮಾ. 25ರಿಂದ ಎಸ್ಸೆಸೆಲ್ಸಿ ಪರೀಕ್ಷೆ : ಕಾರ್ಕಳದ 2783 ವಿದ್ಯಾರ್ಥಿಗಳು ನೋಂದಣಿ

ವರದಿ : ನಳಿನಿ ಎಸ್‌. ಸುವರ್ಣ ಕಾರ್ಕಳ : ರಾಜ್ಯಾದ್ಯಂತ ಮಾರ್ಚ್‌ 25ರಿಂದ ಏಪ್ರಿಲ್ 6ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಕಾರ್ಕಳ-ಹೆಬ್ರಿ ತಾಲೂಕಿನ 27 ಸರಕಾರಿ ಪ್ರೌಢಶಾಲೆಗಳು, 12 ಅನುದಾನಿತ, 15 ಅನುದಾನ ರಹಿತ, 1 ಮೊರಾರ್ಜಿ ದೇಸಾಯಿ ಹಾಗೂ 1 ಮೌಲಾನ ಅಜ಼ಾದ್‌ ಸೇರಿದಂತೆ 56 ಪ್ರೌಢಶಾಲೆಗಳ ಒಟ್ಟು 2783 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 2783 ವಿದ್ಯಾರ್ಥಿಗಳಲ್ಲಿ 1432 ವಿದ್ಯಾರ್ಥಿಗಳು ಮತ್ತು 1351 ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ 2642 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವ (ಫ್ರೆಶರ್ಸ್)

ಮಾ. 25ರಿಂದ ಎಸ್ಸೆಸೆಲ್ಸಿ ಪರೀಕ್ಷೆ : ಕಾರ್ಕಳದ 2783 ವಿದ್ಯಾರ್ಥಿಗಳು ನೋಂದಣಿ Read More »

ಅಕ್ರಮ ಪ್ರವೇಶ – ಹಾನಿ – ಜೀವ ಬೆದರಿಕೆ

ಹೆಬ್ರಿ : ಮಂಗಳೂರು ಕುಲಶೇಖರದ ಬಿಪಿನ್‌ ರೈ ಎಂಬವರು ಹೆಬ್ರಿ ಗ್ರಾಮದಲ್ಲಿ ಹೊಂದಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬಾವಿಯ ಆವರಣ, ಬಾವಿ ಕಟ್ಟೆ ಮತ್ತು ಮನೆಯ ಗೋಡೆಯನ್ನು ಕೆಡವಿ ಹಾಕಿದ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ. 8ರಂದು ರಾತ್ರಿ 7 ಗಂಟೆ ವೇಳೆಗೆ ಸುಷ್ಮಾ ಮತ್ತಿತತರರು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ಎಸಗಿರುವುದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಬಾವಿಕಟ್ಟೆ, ಗೋಡೆ ಒಡೆದು ಹಾಕಿ 2 ಲ.ರೂ. ನಷ್ಟವುಂಟುಮಾಡಿದ್ದಾರೆ ಎಂದು ಬಿಪಿನ್‌ ರೈ

ಅಕ್ರಮ ಪ್ರವೇಶ – ಹಾನಿ – ಜೀವ ಬೆದರಿಕೆ Read More »

ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘ – ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಪ್ರವೀಣ್‌ ಕುಮಾರ್‌ ಹೆಗ್ಡೆ, ಕಾರ್ಯದರ್ಶಿಯಾಗಿ ಸುನೀತಾ ಅರುಣ್‌ ಹೆಗ್ಡೆ ಹೆಬ್ರಿ : ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘ ರಿ. ಇದರ ನೂತನ ಅಧ್ಯಕ್ಷರಾಗಿ ವರ್ಧನ್‌ ಇಂಡಸ್ಟ್ರೀಸ್‌ ಮಾಲಕ ಪ್ರವೀಣ್‌ ಕುಮಾರ್‌ ಹೆಗ್ಡೆ ಹಾಗೂ ಕಾರ್ಯದರ್ಶಿಯಾಗಿ ಉದ್ಯಮಿ ಸುನೀತಾ ಅರುಣ್‌ ಹೆಗ್ಡೆ ಅವರು ಆಯ್ಕೆಗೊಂಡಿರುತ್ತಾರೆ. ಮಾ. 3ರಂದುಅಮರಾವತಿ ಹೊಟೇಲ್‌ ಸಭಾಂಗಣದಲ್ಲಿ ಎಚ್. ಸುಧಾಕರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಹೆಚ್. ಸುಧಾಕರ್ ಹೆಗ್ಡೆ , ಕೋಶಾಧಿಕಾರಿಯಾಗಿ

ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘ – ನೂತನ ಪದಾಧಿಕಾರಿಗಳ ಆಯ್ಕೆ Read More »

ಬಲ್ಲಾಡಿ ಚಂದ್ರಶೇಖರ ಭಟ್‌ಗೆ ರಾಜ್ಯ ವಿಭೂಷಣ ಪ್ರಶಸ್ತಿ ಪ್ರದಾನ

ಹೆಬ್ರಿ : ನೇತಾಜಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಫೆ.28ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಬಲ್ಲಾಡಿ ಚಂದ್ರಶೇಖರ ಭಟ್ ಅವರಿಗೆ ರಾಜ್ಯ ವಿಭೂಷಣ ಪ್ರಶಸ್ತಿ – 2024 ನೀಡಿ ಗೌರವಿಸಲಾಯಿತು.ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಶಿಕ್ಷಕರಾಗಿರುವ ಬಲ್ಲಾಡಿ ಚಂದ್ರಶೇಖರ ಭಟ್ ಚಾಣಕ್ಯ ಕಲ್ಚರಲ್ ಮತ್ತು ಎಜುಕೇಶನ್ ಅಕಾಡೆಮಿ, ಹೆಬ್ರಿ ನೀಡಿದ ಉಡುಪಿ ಜಿಲ್ಲಾ ಅತ್ಯುತ್ತಮ

ಬಲ್ಲಾಡಿ ಚಂದ್ರಶೇಖರ ಭಟ್‌ಗೆ ರಾಜ್ಯ ವಿಭೂಷಣ ಪ್ರಶಸ್ತಿ ಪ್ರದಾನ Read More »

ಕಸ ಹಾಕುವವರ ವಿರುದ್ಧ ಕಠಿಣ ಕ್ರಮ – ಹೆಬ್ರಿ ಗ್ರಾಮ ಪಂಚಾಯತ್‌

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸ್ವಚ್ಛತಾ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಬೇಕು ಬೇಕಂತಲೇ ಕಸ ಹಾಕಿ ಪರಿಸರವನ್ನು ಹಾಳು ಮಾಡುತ್ತಿರುವುದಲ್ಲದೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೆಬ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ತಾರನಾಥ್‌ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಸ್ವಚ್ಛತಾ ವಾಹನದ ಮೂಲಕ ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪೇಟೆ ಹಾಗೂ ಸುತ್ತಮುತ್ತಲಿನ ಪರಿಸರದ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಕಳೆದ ಆರು

ಕಸ ಹಾಕುವವರ ವಿರುದ್ಧ ಕಠಿಣ ಕ್ರಮ – ಹೆಬ್ರಿ ಗ್ರಾಮ ಪಂಚಾಯತ್‌ Read More »

ಮುನಿಯಾಲು : ಕಾರುಗಳ ಮುಖಾಮುಖಿ ಡಿಕ್ಕಿ

ಜ್ಯುವೆಲ್ಲರಿ ಶಾಪ್‌ ಮಾಲಕ ಜಗದೀಶ್‌ ಆಚಾರ್ಯ ಸಾವು ಹೆಬ್ರಿ : ಕಾರುಗಳ ನಡುವೆ ಡಿಕ್ಕಿಯಾದ ಪರಿಣಾಮ ಚಾಲಕ ಸಾವನಪ್ಪಿದ ದುರ್ಘಟನೆ ಫೆ. 29ರಂದು ಸಂಭವಿಸಿದೆ. ಶ್ರೀ ಮಹಾಗಣಪತಿ ಜ್ಯುವೆಲ್ಲೆರ್ಸ್ ಶಾಪ್‌ ಮಾಲಕ ಜಗದೀಶ್‌ ಆಚಾರ್ಯ (74) ಮೃತ ದುರ್ದೈವಿ.KA-05-NE-2013ನೇ ನೋಂದಾಯಿತ ಕಾರು ವೇಣೂರುನಿಂದ ಮುನಿಯಾಲು ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಜಗದೀಶ್‌ ಆಚಾರ್ಯ ಅವರು ಆಲ್ಟೋ ಕಾರಿನಲ್ಲಿ ಮುನಿಯಾಲು ಕಡೆಗೆ ಬರುತ್ತಿದ್ದು, ಮುನಿಯಾಲು ಪೇಟೆ ಮುಂಭಾಗದಲ್ಲಿ ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಚಾಲಕ ಜಗದೀಶ್‌ ಆಚಾರ್ಯ ಅವರು ಗಾಯಗೊಂಡಿದ್ದು,

ಮುನಿಯಾಲು : ಕಾರುಗಳ ಮುಖಾಮುಖಿ ಡಿಕ್ಕಿ Read More »

ಗ್ಯಾರಂಟಿಯೊಂದಿಗೆ ಅಭಿವೃದ್ಧಿಯೂ ಆಗಲಿ : ಸುನಿಲ್‌ ಕುಮಾರ್‌

ಹೆಬ್ರಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಾವೇಶ ಹೆಬ್ರಿ: ಸರಕಾರದ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿದೆಯಾ ಎಂದು ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು. ಸರಕಾರದ ಐದು ಗ್ಯಾರಂಟಿಗಳು ಎಲ್ಲಾ ಜನರಿಗೆ ಸಿಗಬೇಕು. ಎಲ್ಲವನ್ನು ಉಚಿತವಾಗಿ ಕೊಟ್ಟು ಸರಕಾರ ನಡೆಸಲು ಸಾಧ್ಯವಿಲ್ಲ. ಇದರೊಂದಿಗೆ ಇನ್ನಿತರ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದು ನಾನು ಶಾಸಕನಾಗಿ ಸರಕಾರವನ್ನು ಒತ್ತಾಯಿಸುತ್ತೇನೆ. ರಸ್ತೆ, ಆಸ್ಪತ್ರೆ, ಶಾಲೆ, ಕುಡಿಯುವ ನೀರು ಇದು ಜನರಿಗೆ ಮೊದಲು ಸಿಗಬೇಕು. ಗ್ಯಾರಂಟಿ ಯೋಜನೆ ಜೊತೆಗೆ ಇತರ ಅಭಿವೃದ್ಧಿ ಕೆಲಸಗಳು ನಡೆದರೆ ಮಾತ್ರ ಉತ್ತಮ ಸಮಾಜ

ಗ್ಯಾರಂಟಿಯೊಂದಿಗೆ ಅಭಿವೃದ್ಧಿಯೂ ಆಗಲಿ : ಸುನಿಲ್‌ ಕುಮಾರ್‌ Read More »

ಕಜ್ಕೆ ಶಾಖಾಮಠದಲ್ಲಿ ಅನ್ನದಾಸೋಹ ಯೋಜನೆಯ ಕುರಿತು ಚಿಂತನೆ : ಶಿವಸುಜ್ಞಾನತೀರ್ಥ ಸ್ವಾಮೀಜಿ

ಹೆಬ್ರಿ : ಕಜ್ಕೆ ಶಾಖಾಮಠದಲ್ಲಿ ಶ್ರೀಅನ್ನಪೂರ್ಣೇಶ್ವರಿ ಶಿಲಾಮಯ ದೇವಸ್ಥಾನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ ದೇವರು, ಶ್ರೀ ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಹಾಗೂ ನಾಗದೇವರ ಸನ್ನಿಧಿಯ ಶಿಲಾಬಿಂಬ ಪ್ರತಿಷ್ಠೆ, ಮಹಾಕುಂಭಾಭಿಷೇಕವು ಶ್ರೀವಿಶ್ವಕರ್ಮ ಜಗದ್ಗುರು ಶ್ರೀಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯವು ಜರುಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀದೇವಿಯ ದರ್ಶನಕ್ಕಾಗಿ ಆಗಮಿಸುವ ವಿವಿಧ ಭಾಗದ ಭಕ್ತಾದಿಗಳ ಅನುಕೂಲತೆಗೆ ತಕ್ಕಂತೆ ಪ್ರತಿದಿನವು ಮಧ್ಯಾಹ್ನದ ಅನ್ನದಾಸೋಹ ಮಾಡುವ ಯೋಜನೆಯನ್ನು ಮಾಡುವ ಕುರಿತಂತೆ ಚಿಂತನೆ ನಡೆಸಲಾಗುವುದು ಎಂದು

ಕಜ್ಕೆ ಶಾಖಾಮಠದಲ್ಲಿ ಅನ್ನದಾಸೋಹ ಯೋಜನೆಯ ಕುರಿತು ಚಿಂತನೆ : ಶಿವಸುಜ್ಞಾನತೀರ್ಥ ಸ್ವಾಮೀಜಿ Read More »

error: Content is protected !!
Scroll to Top