Author name: newskarkala desk

ಪ್ರಚಾರದ ಗೀಳಿಗೆ ಕಾಂಗ್ರೆಸ್‌ ನಾಯಕರಿಂದ ನಾನಾ ರೀತಿಯ ಹೇಳಿಕೆ – ನವೀನ್‌ ನಾಯಕ್‌

ಕಾರ್ಕಳ : ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಕಳ ಶಾಸಕರು ಈಗಾಗಲೇ ಜಿಲ್ಲಾ ಸಹಾಯಕ ಕಮಿಷನರ್, ಜಿಲ್ಲಾ ಯೋಜನಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸಭೆ ಕರೆದು ಕಾರ್ಕಳದ ಅಭಿವೃದ್ಧಿಯ ಕುರಿತು ಸಭೆ ನಡೆಸಿದ್ದಾರೆ. ಪುರಸಭಾ ವ್ಯಾಪ್ತಿಯ ಅಭಿವೃದ್ಧಿಯ ಕುರಿತಾಗಿಯೇ ಚರ್ಚೆ ನಡೆಸಿ ಕಾರ್ಯಯೋಜನೆ ರೂಪಿಸಿದ್ದಾರೆ. ಇದರ ಪರಿಣಾಮವಾಗಿ ತಕ್ಷಣವೇ ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಬಗೆ ಹರಿಯಲಿದೆ ಎನ್ನುವುದನ್ನರಿತು ಇದರ ಕ್ರೆಡಿಟ್ ಪಡೆದುಕೊಳ್ಳುವ ತರಾತುರಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ

ಪ್ರಚಾರದ ಗೀಳಿಗೆ ಕಾಂಗ್ರೆಸ್‌ ನಾಯಕರಿಂದ ನಾನಾ ರೀತಿಯ ಹೇಳಿಕೆ – ನವೀನ್‌ ನಾಯಕ್‌ Read More »

ವಸತಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

ಉಡುಪಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾರ್ಕಳ ತಾಲೂಕು ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಕನ್ನಡ, ಇಂಗ್ಲೀಷ್, ಜೀವಶಾಸ್ತ್ರ, ಮತ್ತು ಭೌತಶಾಸ್ತ್ರ ವಿಷಯಗಳ ಹಾಗೂ ಬ್ರಹ್ಮಾವರ ತಾಲೂಕು ಆರೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಖಾಲಿ ಇರುವ ಕನ್ನಡ, ಇಂಗ್ಲೀಷ್, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಹಾಗೂ ಗಣಕ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಯಾ ವಿಷಯದಲ್ಲಿ

ವಸತಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ Read More »

ಮುಂಗಾರು ಮಳೆ : ಕಂಟ್ರೋಲ್ ರೂಂ ಸ್ಥಾಪನೆ

ಉಡುಪಿ : ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ದೂ. ಸಂಖ್ಯೆ: 0820-2574802, ಟೋಲ್ ಫ್ರೀ ನಂಬರ್ 1077, ತಾಲೂಕು ತಹಶೀಲ್ದಾರರ ಕಚೇರಿಗಳಾದ ಉಡುಪಿ ದೂ.ಸಂಖ್ಯೆ: 0820-2520417, ಕುಂದಾಪುರ ದೂ.ಸಂಖ್ಯೆ: 08254-230357, ಕಾರ್ಕಳ ದೂ.ಸಂಖ್ಯೆ: 08258-230201, ಬೈಂದೂರು ದೂ.ಸಂಖ್ಯೆ: 08254-251657, ಬ್ರಹ್ಮಾವರ ದೂ.ಸಂಖ್ಯೆ: 0820-2560494, ಕಾಪು ದೂ.ಸಂಖ್ಯೆ: 0820-2551444 ಹಾಗೂ ಹೆಬ್ರಿ ತಾಲೂಕು ದೂ.ಸಂಖ್ಯೆ: 08253-250201 ಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಾದ ಪೌರಾಯುಕ್ತರು ಉಡುಪಿ ನಗರಸಭೆ

ಮುಂಗಾರು ಮಳೆ : ಕಂಟ್ರೋಲ್ ರೂಂ ಸ್ಥಾಪನೆ Read More »

ಹೆಬ್ರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು

ಹೆಬ್ರಿ : ಮೇ 24ರ ರಾತ್ರಿ ಹೆಬ್ರಿ ತಾಲೂಕು ಅನಂತನಗರ ಎಸ್ಆರ್‌ಎಸ್ ಶಾಲೆಯ ಬಳಿಯಿರುವ ಕೀರ್ತನ ಪ್ರಭು ಎಂಬವರ ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಕಪಾಟಿನ ಬೀಗವನ್ನು ಒಡೆದು ಲಾಕರ್ ನಲ್ಲಿದ್ದ ಅಂದಾಜು 49,42,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 3,95,000 ರೂ. ಮೌಲ್ಯದ ಬೆಳ್ಳಿ ಆಭರಣ ಮತ್ತು ಸುಮಾರು 6,60,000 ರೂ. ಮೌಲ್ಯದ ಚಿನ್ನದ ಹೊದಿಕೆ ಇರುವ ವಜ್ರದ ಆಭರಣ ಸೇರಿದಂತೆ ಒಟ್ಟು 59,77,000 ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ

ಹೆಬ್ರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು Read More »

ಎಸ್ಸೆಸೆಲ್ಸಿ ಫಲಿತಾಂಶ -ಎರಡನೇ ಹಂತದ ಪರೀಕ್ಷೆಯಲ್ಲಿ ವೈಭವ್‌ ಕುಲಾಲ್‌ಗೆ 617 ಅಂಕ

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಮಿಯ್ಯಾರು ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ಕಾರ್ಕಳ : ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಹತ್ತನೇ ತರಗತಿಯ ದ್ವಿತೀಯ ಪರೀಕ್ಷೆಯಲ್ಲಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿ ವೈಭವ್ ವಿ. ಆರ್. ಕುಲಾಲ್ 617 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಗಳಿಸಿದ್ದಾರೆ. ಏ. 23ರಂದು ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾದಾಗ ವೈಭವ್ ಕುಲಾಲ್ ಗೆ 610 ಅಂಕ ದೊರಕಿತ್ತು. ಬಳಿಕ ಪುನಃ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಪರೀಕ್ಷೆ ಬರೆದು 617

ಎಸ್ಸೆಸೆಲ್ಸಿ ಫಲಿತಾಂಶ -ಎರಡನೇ ಹಂತದ ಪರೀಕ್ಷೆಯಲ್ಲಿ ವೈಭವ್‌ ಕುಲಾಲ್‌ಗೆ 617 ಅಂಕ Read More »

ಮನಮೋಹನ ‘ಅನೂಹ್ಯ’ ಆಳ್ವ

ಆಳ್ವರು ಅಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮೂಡುಬಿದಿರೆಯಲ್ಲಿ ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳು. ಆದರೆ, ಅದನ್ನು ಹೊರತುಪಡಿಸಿ ನೋಡಿದರೂ ಆಳ್ವರು ಈ ಕಾಲದ ಒಂದು ಅದ್ಭುತ. ಹತ್ತಿರದಿಂದ ಬಲ್ಲವರಿಗೆ ಅವರೊಂದು ಅಚ್ಚರಿ. ಆಳ್ವರೆಂದರೆ ಅಗಾಧ ಜ್ಞಾನ, ಅತ್ಯಂತ ಅಚ್ಚುಕಟ್ಟುತನ, ಅದ್ದೂರಿ, ಅಭೂತಪೂರ್ವ ಕಾರ್ಯಕ್ರಮ ಸಂಘಟಕ, ಅಪ್ಪಟ ಕಲಾಕಾರ, ಅಭಿವೃದ್ಧಿಯ ಕನಸುಗಾರ, ಅಮೋಘ ಸಾಧಕ. ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾಗಿರುವ ಆಳ್ವರು ಗೆಳೆಯರ ಪಾಲಿನ ಅಪರಂಜಿ, ಅಪರಿಮಿತ ಯೋಜನೆ ಹಾಗೂ ಯೋಚನೆಯ ಅದಮ್ಯ ಉತ್ಸಾಹಿ. ಹೀಗೆ ಆಳ್ವರೆಂದರೆ ಬೆರಗು, ಅನೂಹ್ಯ. ಆಧುನಿಕ

ಮನಮೋಹನ ‘ಅನೂಹ್ಯ’ ಆಳ್ವ Read More »

ವಿನೋದಾ ಎಸ್. ಶೆಟ್ಟಿ ನಿಧನ

ಕಾರ್ಕಳ : ಡಾ. ದಿ. ಸುನೇತ್ರ ಶೆಟ್ಟಿ ಅವರ ಪತ್ನಿ ವಿನೋದಾ ಎಸ್. ಶೆಟ್ಟಿ (81) ಮೇ 25ರ ರಾತ್ರಿ ಸ್ವಗೃಹ ತೆಳ್ಳಾರು ರಸ್ತೆ ಮನೆಯಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಡವರ ಬಂಧು ಕಾರ್ಯಕ್ರಮದ ಮೂಲಕ ಅನೇಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡಿರುತ್ತಾರೆ. ಮೃತರ ಅಂತ್ಯ ಸಂಸ್ಕಾರ ಮಧ್ಯಾಹ್ನ 12 ಗಂಟೆಗೆ ಕೌಡೂರು ವಿಠಲ ಸದನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿನೋದಾ ಎಸ್. ಶೆಟ್ಟಿ ನಿಧನ Read More »

ಮೇ 26ರಿಂದ ಮುಂಗಾರು ಮಳೆ ಮುನ್ಸೂಚನೆ – ವಿಕೋಪ ನಿಭಾಯಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಕರೆ

ಉಡುಪಿ : ಮೇ 26 ರಿಂದ ಮುಂಗಾರು ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಸೇರಿದಂತೆ ಅವಘಡಗಳ ಪರಿಸ್ಥಿತಿಗಳನ್ನು ಎದುರಿಸಲು ಎಲ್ಲ ಇಲಾಖಾಧಿಕಾರಿಗಳು ರಕ್ಷಣಾ ಸಾಮಗ್ರಿಗಳೊಂದಿಗೆ ಸನ್ನದ್ಧರಾಗಬೇಕು. ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಪ್ರಕೃತಿ ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಮುಂದಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮೇ 19ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ (ಮಾನ್ಸೂನ್) ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೇ 26ರಿಂದ ಮುಂಗಾರು ಮಳೆ ಮುನ್ಸೂಚನೆ – ವಿಕೋಪ ನಿಭಾಯಿಸಲು ಮುಂದಾಗುವಂತೆ ಜಿಲ್ಲಾಧಿಕಾರಿ ಕರೆ Read More »

ಬೋಳಾಸ್‌ ಹಾಗೂ ವಿಕಾಸ ಸೇವಾ ಸಂಸ್ಥೆ ವತಿಯಿಂದ ಸಂಜೀವಿನಿ ಮಹಿಳೆಯರಿಗೆ ಹೊಲಿಗೆ ಯಂತ್ರ – ಚೆಂಡೆ ವಿತರಣೆ

​ಕಾರ್ಕಳ : ಸ್ವರ್ಣ ಕಾರ್ಕಳ ಕಲ್ಪನೆಯಡಿ ಪ್ರವಾಸೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಎಲ್ಲ ಆಯಾಮಗಳಲ್ಲಿ ಕ್ಷೇತ್ರದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯರು ಆರ್ಥಿಕವಾಗಿ ವೃದ್ಧಿಯಾಗಬೇಕು. ಕ್ಷೇತ್ರದ ಕೊನೆಯ ಮನೆಯೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವುದೇ ನಮ್ಮ ಆಶಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.​ಮೇ 17ರಂದು ಶಾಸಕರ ವಿಕಾಸ ಕಚೇರಿಯಲ್ಲಿ ಬೋಳಾಸ್ ಆಗ್ರೋ ಪ್ರೈವೆಟ್ ಲಿಮಿಟೆಡ್ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಕಳ ಮತ್ತು ಹೆಬ್ರಿ ಸಂಜೀವಿನಿ ಒಕ್ಕೂಟದ ಮಹಿಳೆಯರ ತಂಡದ

ಬೋಳಾಸ್‌ ಹಾಗೂ ವಿಕಾಸ ಸೇವಾ ಸಂಸ್ಥೆ ವತಿಯಿಂದ ಸಂಜೀವಿನಿ ಮಹಿಳೆಯರಿಗೆ ಹೊಲಿಗೆ ಯಂತ್ರ – ಚೆಂಡೆ ವಿತರಣೆ Read More »

ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ‘ಸಾಮರ್ಥ್ಯ ವನ ಪಾರ್ಕ್’ ನಿರ್ಮಾಣ

ಉಡುಪಿ : ವಿಕಲಚೇತನ ಮಕ್ಕಳ ಬೆಳವಣಿಗೆ, ಮನರಂಜನೆ ಹಾಗೂ ಅವರ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉಡುಪಿ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ “ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯ ವನ ಪಾರ್ಕ್” ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮೇ 16ರಂದು ಶಿಲಾನ್ಯಾಸ ನೆರವೇರಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿ. ಪಂ. ವತಿಯಿಂದ ಪಾರ್ಕ್ ನಿರ್ಮಿಸಲಾಗುತ್ತಿದ್ದು ವಿಕಲಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗಾವಕಾಶ

ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ‘ಸಾಮರ್ಥ್ಯ ವನ ಪಾರ್ಕ್’ ನಿರ್ಮಾಣ Read More »

error: Content is protected !!
Scroll to Top