Author name: Newskarkala Desk

ಡಾ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ 55ನೇ ವರ್ಧಂತ್ಯುತ್ಸವ

ಧರ್ಮಸ್ಥಳದಲ್ಲಿ ಮನೆ ಮಾಡಿದ ಸಂಭ್ರಮ ಮಂಗಳೂರು(ಅ.24): ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕದ 55 ನೇ ವರ್ಧಂತ್ಯುತ್ಸವ ಅ.24ರಂದು ಧರ್ಮಸ್ಥಳದಲ್ಲಿ ನಡೆಯಲಿದ್ದು, ಸಂಭ್ರಮ ಸಡಗರ ಮನೆಮಾಡಿದೆ. ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಬಸದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಭಕ್ತರು, ದೇವಾಲಯದ ನೌಕರರು, ನಾಗರೀಕರು, ವಿವಿಧ ಸಂಸ್ಥೆಗಳ ನೌಕರರು, ಅಭಿಮಾನಿಗಳು ವೀರೇಂದ್ರ ಹೆಗಡೆಯವರಿಗೆ ಗೌರವ ಸಮರ್ಪಿಸಲಿದ್ದಾರೆ, ವೀರೇಂದ್ರ ಹೆಗಡೆಯವರ ನಿವಾಸ, ದೇವಾಲಯ, ವಸತಿ ಛತ್ರಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಸೋಮವಾರ ಸಂಜೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಅಭಿನಂದನಾ

ಡಾ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ 55ನೇ ವರ್ಧಂತ್ಯುತ್ಸವ Read More »

10,889 ಮಸೀದಿಗಳಿಗೆ ಲೌಡ್​​ ಸ್ಪೀಕರ್​​ ಬಳಸಲು ಅನುಮತಿ ನೀಡಿದ ರಾಜ್ಯ ಸರ್ಕಾರ

ಮಸೀದಿ ಸೇರಿದಂತೆ ದೇವಾಲಯ ಮತ್ತು ಚರ್ಚ್‌ಗಳಿಗೂ ಅನುಮತಿ ಬೆಂಗಳೂರು: ಕರ್ನಾಟಕದ 10,889 ಮಸೀದಿಗಳಿಗೆ ಲೌಡ್​​ ಸ್ಪೀಕರ್​​ ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಆಜಾನ್​ ವಿರುದ್ಧ ಪ್ರತಿರೋಧ​ ಶುರುವಾಗಿತ್ತು. ಇದರಿಂದ ಕರ್ನಾಟಕ ಸರ್ಕಾರ ಅನುಮತಿ ಇಲ್ಲದೆ ಲೌಡ್​ ಸ್ಪೀಕರ್​ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಬಳಿಕ ಲೌಡ್​ ಸ್ಪೀಕರ್​ಗೆ ಪರವಾನಿಗೆ ನೀಡಲು ಮಸೀದಿ, ದೇವಾಲಯ, ಚರ್ಚ್‍ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನೆಲೆ ಮಂದಿರ,

10,889 ಮಸೀದಿಗಳಿಗೆ ಲೌಡ್​​ ಸ್ಪೀಕರ್​​ ಬಳಸಲು ಅನುಮತಿ ನೀಡಿದ ರಾಜ್ಯ ಸರ್ಕಾರ Read More »

ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ

ಆರೋಗ್ಯ ಕಾಪಾಡಲು ಕ್ರೀಡೆ ಸಹಕಾರಿ – ಸುಮಾ ಕೇಶವ್‌ ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಸ್‌.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಇದರ ಸಹಯೋಗದಲ್ಲಿ ಕಾರ್ಕಳ ತಾಲೂಕು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಅ. 21ರಂದು ತಾಲೂಕು ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಕ್ರೀಡಾ ಜ್ಯೋತಿ ಬೆಳಗಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಆರೋಗ್ಯ ಕಾಪಾಡುವಲ್ಲಿ ಸಹಕಾರಿ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಸೋಲು ಗೆಲುವನ್ನು ಸಮಚಿತ್ತದಿಂದ

ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ Read More »

ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಲಿಕ ವೇಳಾಪಟ್ಟಿ ಪ್ರಕಟ

ಮಾ. 10 ರಿಂದ ಮಾ. 29 ವರೆಗೆ ಪರೀಕ್ಷೆ ನಡೆಯಲಿದೆ ಬೆಂಗಳೂರು: ಕರ್ನಾಟಕ ರಾಜ್ಯದ 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಯ ತಿಳಿಸಿರುವಂತೆ ಪರೀಕ್ಷೆಗಳು 2023 ಮಾ. 10 ರಿಂದ ಮಾ. 29 ವರೆಗೆ ನಿಗದಿಯಾಗಿವೆ. “ದ್ವಿತೀಯ ಪಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ಪರಿಷ್ಕರಣೆಯನ್ನು ಅಧಿಕೃತ ವೆಬ್ ತಾಣದಲ್ಲಿ ಇಲಾಖೆ ಪ್ರಕಟಿಸಲಿದೆ” ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ

ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಲಿಕ ವೇಳಾಪಟ್ಟಿ ಪ್ರಕಟ Read More »

ಜೋಡುರಸ್ತೆ- ಭ್ರಾಮರಿ ತುಡರ ಮಳಿಗೆಯಲ್ಲಿ ಆಕರ್ಷಕ ಕೊಡುಗೆ

ಹಸಿರು ಪಟಾಕಿ ಖರೀದಿಸಿ ಚಿನ್ನದ ನಾಣ್ಯ ಪಡೆಯಿರಿ ಕಾರ್ಕಳ: ಜೋಡುರಸ್ತೆಯ ಹತ್ತಿರ ಪ್ರೈಮ್‌ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸಿರು ಪಟಾಕಿ ಮಾರಾಟ ಮಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆ ನೀಡಿದೆ. ಕಡಿಮೆ ದರದಲ್ಲಿ ವಿವಿಧ ಮಾದರಿಯ ಉತ್ತಮ ಗುಣಮಟ್ಟದ ಸುಡು ಮದ್ದುಗಳು, ಗಿಫ್ಟ್‌ ಪ್ಯಾಕ್‌ಗಳು ಲಭ್ಯ. 500 ರೂ. ಗಿಂತ ಹೆಚ್ಚು ಪಟಾಕಿ ಖರೀದಿಸಿದಲ್ಲಿ ಲಕ್ಕಿ ಕೂಪನ್‌ ನೀಡಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ. ಮೌಲ್ಯದ ಚಿನ್ನದ ನಾಣ್ಯ ಹಾಗೂ ದ್ವಿತೀಯ ಬಹುಮಾನವಾಗಿ 5,000 ರೂ.

ಜೋಡುರಸ್ತೆ- ಭ್ರಾಮರಿ ತುಡರ ಮಳಿಗೆಯಲ್ಲಿ ಆಕರ್ಷಕ ಕೊಡುಗೆ Read More »

ಸರಕಾರಿ ಶಾಲಾ ಮಕ್ಕಳ ಪೋಷಕರಿಂದ ಹಣ ಸಂಗ್ರಹ ಕ್ರಮ ಖಂಡನೀಯ – ಶುಭದ ರಾವ್‌

ಕಾರ್ಕಳ : ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ವೆಚ್ಚಕ್ಕಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಎಸ್‌ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರೂ. ಹಣ ಸಂಗ್ರಹಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದು ಖಂಡನೀಯ ಎಂದು ಕಾರ್ಕಳ ಕಾಂಗ್ರೆಸ್‌ ವಕ್ತಾರ ಶುಭದ ರಾವ್‌ ಹೇಳಿದರು. ರಾಜ್ಯ ಸರಕಾರದ ಈ ನೀತಿಯಿಂದಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಂದ ತಿಂಗಳಿಗೆ 100 ರೂ. ಸಂಗ್ರಹಿಸಲು ರಾಜ್ಯ

ಸರಕಾರಿ ಶಾಲಾ ಮಕ್ಕಳ ಪೋಷಕರಿಂದ ಹಣ ಸಂಗ್ರಹ ಕ್ರಮ ಖಂಡನೀಯ – ಶುಭದ ರಾವ್‌ Read More »

ಕಾರ್ಲಾ ಸೂಪರ್ ಮಾರ್ಕೆಟ್‌: ದೀಪಾವಳಿ ಸಂಭ್ರಮಕ್ಕಾಗಿ ಆಕರ್ಷಕ ಕೊಡುಗೆ

ಉತ್ತಮ ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಗ್ರಹೋಪಯೋಗಿ ವಸ್ತುಗಳು ಕಾರ್ಕಳ : ಆನೆಕೆರೆ ಭವಾನಿ ಮಿಲ್ ಮತ್ತು ಬೈಲೂರಿನ ಇಂಡಿಯನ್ ಪೆಟ್ರೋಲ್ ಪಂಪ್ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಲಾ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಚಹಾ ಹುಡಿ, ಸೋಪ್, ಸಕ್ಕರೆ, ವಾಷಿಂಗ್ ಪೌಡರ್, ಫೇಸ್‌ವಾಶ್ ಲಿಕ್ವಿಡ್, ಶಾಂಪೂ, ಗೋಧಿ ಹಿಟ್ಟು, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ಗ್ರಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಇದೆ. ರೆಡ್ ಲೇಬಲ್ ಟೀ, ಆಯುಷ್‌

ಕಾರ್ಲಾ ಸೂಪರ್ ಮಾರ್ಕೆಟ್‌: ದೀಪಾವಳಿ ಸಂಭ್ರಮಕ್ಕಾಗಿ ಆಕರ್ಷಕ ಕೊಡುಗೆ Read More »

ಕಾರ್ಕಳ: ವೃತ್ತಮಟ್ಟದ ಕ್ರೀಡಾಕೂಟದಲ್ಲಿ ಕ್ರೈಸ್ಟ್‌ಕಿಂಗ್‌ ಪ್ರಾಥಮಿಕ ಶಾಲೆ ಸಮಗ್ರ ಚಾಂಪಿಯನ್

ಬಾಲಕರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ರೈಸ್ಟ್‌ಕಿಂಗ್‌ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಅ.20ರಂದು ಸ್ಥಳೀಯ ಗಾಂಧಿ ಮೈದಾನದಲ್ಲಿ ನಡೆದ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್‌ ಆಂಗ್ಲಮಾಧ್ಯಮ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿಯ ಜೊತೆಗೆ ಬಾಲಕರ ವಿಭಾಗದಲ್ಲಿಯು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಏಳನೇ ತರಗತಿಯ ಶ್ರೇಯಸ್ ದೇವಾಡಿಗ 400ಮೀ ಓಟ ಪ್ರಥಮ ಹಾಗೂ 600ಮೀ ಓಟ ದ್ವಿತೀಯ,

ಕಾರ್ಕಳ: ವೃತ್ತಮಟ್ಟದ ಕ್ರೀಡಾಕೂಟದಲ್ಲಿ ಕ್ರೈಸ್ಟ್‌ಕಿಂಗ್‌ ಪ್ರಾಥಮಿಕ ಶಾಲೆ ಸಮಗ್ರ ಚಾಂಪಿಯನ್ Read More »

ಉದ್ಯೋಗ ಮತ್ತು ವಿದ್ಯಾರ್ಥಿವೇತನ ಮಾಹಿತಿ

KSP: ಕರ್ನಾಟಕ ಪೊಲೀಸ್‌, ಇಲಾಖೆಯಲ್ಲಿ, ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) (ಮಹಿಳಾ ಮತ್ತು ಪುರುಷ) ಹುದ್ದೆಗಳು, ವಿದ್ಯಾರ್ಹತೆ: ಪಿ.ಯು.ಸಿ. ಕೊನೆಯ ದಿನಾಂಕ: 21-10-2022. SBI: ಸರ್ಕಲ್ ವೇಸ್ಟ್ ಆಫೀಸರ್ ಹುದ್ದೆಗಳು, ವಿದ್ಯಾಹ೯ತೆ: ಪದವಿ, ಕೊನೆಯ ದಿನಾಂಕ: 7-11-2022. DKZP: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ, ಬಿಲ್ ಕಲೆಕ್ಟರ್+ ಕ್ಲಕ್೯+ ವಾಟರ್ ಆಪರೇಟರ್ + ಅಟೆಂಡೆಂಟ್ + ಕ್ಲೀನರ್ ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ + ಕಂಪ್ಯೂಟರ್ ಜ್ಞಾನ/ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ: 31-1೦-11-2012, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ

ಉದ್ಯೋಗ ಮತ್ತು ವಿದ್ಯಾರ್ಥಿವೇತನ ಮಾಹಿತಿ Read More »

ಅ.23: ಜೆಸಿಐ ಕಾರ್ಕಳ ವತಿಯಿಂದ ರಕ್ತದಾನ ಶಿಬಿರ

ರಕ್ತ ನೀಡಿ – ಜೀವ ಉಳಿಸಿ ಕಾರ್ಕಳ: ಪ್ರಸ್ತುತ ದಿನಗಳಲ್ಲಿ ಪ್ರತಿ ನಿತ್ಯ ಅತಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅಗತ್ಯತೆ ಇದೆ. ಜೆಸಿಐ ಕಾರ್ಕಳ, ಜೂನಿಯರ್ ಜೆಸಿ ವಿಂಗ್ ಹಾಗು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ಅ.23 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 9.30 ರಿಂದ 12.30 ರವರೆಗೆ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಲಿಚ್ಛಿಸುವವರು 9980008190, 7760449852 ಈ ನಂಬರಿಗೆ ಸಂಪರ್ಕಿಸಿ ಎಂದು ಸಂಘಟನೆಯ

ಅ.23: ಜೆಸಿಐ ಕಾರ್ಕಳ ವತಿಯಿಂದ ರಕ್ತದಾನ ಶಿಬಿರ Read More »

error: Content is protected !!
Scroll to Top