10,889 ಮಸೀದಿಗಳಿಗೆ ಲೌಡ್​​ ಸ್ಪೀಕರ್​​ ಬಳಸಲು ಅನುಮತಿ ನೀಡಿದ ರಾಜ್ಯ ಸರ್ಕಾರ

ಮಸೀದಿ ಸೇರಿದಂತೆ ದೇವಾಲಯ ಮತ್ತು ಚರ್ಚ್‌ಗಳಿಗೂ ಅನುಮತಿ

ಬೆಂಗಳೂರು: ಕರ್ನಾಟಕದ 10,889 ಮಸೀದಿಗಳಿಗೆ ಲೌಡ್​​ ಸ್ಪೀಕರ್​​ ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಆಜಾನ್​ ವಿರುದ್ಧ ಪ್ರತಿರೋಧ​ ಶುರುವಾಗಿತ್ತು. ಇದರಿಂದ ಕರ್ನಾಟಕ ಸರ್ಕಾರ ಅನುಮತಿ ಇಲ್ಲದೆ ಲೌಡ್​ ಸ್ಪೀಕರ್​ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಬಳಿಕ ಲೌಡ್​ ಸ್ಪೀಕರ್​ಗೆ ಪರವಾನಿಗೆ ನೀಡಲು ಮಸೀದಿ, ದೇವಾಲಯ, ಚರ್ಚ್‍ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನೆಲೆ ಮಂದಿರ, ಮಸೀದಿ, ಚರ್ಚ್‍ಗಳಿಂದ ​17,850 ಅರ್ಜಿಗಳು ಬಂದಿದ್ದವು. ಇದರಲ್ಲಿ 10,889 ಮಸಿದಿಗಳಿಗೆ, 3000ಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರ್ಕಾರ ಅನುಮತಿ ನೀಡಿದೆ. ಸರ್ಕಾರ 2 ವರ್ಷಗಳ ಅವಧಿಗೆ ಅನುಮತಿ ನೀಡಿದ್ದು, ಅನುಮತಿ ಪಡೆದ ಧಾರ್ಮಿಕ ಕೇಂದ್ರಗಳು 450 ರೂಪಾಯಿ ಶುಲ್ಕ ಪಾವತಿಸಬೇಕಿದೆ.

ಧ್ವನಿವರ್ಧಕ ಬಳಸಲು ನಿಯಮಗಳು
ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಸಬೇಕು. ನಿಯಮಿತ ಡೆಸಿಬಲ್ ಮಾತ್ರ ಬಳಸಬೇಕು. ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 70 ಡೆಸಿಬಲ್ ಶಬ್ದದ ಮಟ್ಟವನ್ನು ಅನುಮತಿಸಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಶಬ್ದದ ಮಟ್ಟವನ್ನು ಅನುಮತಿಸಲಾಗಿದೆ. ವಸತಿ ವಲಯಗಳಲ್ಲಿ, ಶಬ್ದದ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಇದಲ್ಲದೆ, ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿಯಲ್ಲಿ 40 ಡೆಸಿಬಲ್ ಶಬ್ದವನ್ನು ಅನುಮತಿಸಲಾಗಿದೆ.

Latest Articles

error: Content is protected !!