ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಲಿಕ ವೇಳಾಪಟ್ಟಿ ಪ್ರಕಟ

ಮಾ. 10 ರಿಂದ ಮಾ. 29 ವರೆಗೆ ಪರೀಕ್ಷೆ ನಡೆಯಲಿದೆ

ಬೆಂಗಳೂರು: ಕರ್ನಾಟಕ ರಾಜ್ಯದ 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಯ ತಿಳಿಸಿರುವಂತೆ ಪರೀಕ್ಷೆಗಳು 2023 ಮಾ. 10 ರಿಂದ ಮಾ. 29 ವರೆಗೆ ನಿಗದಿಯಾಗಿವೆ.

“ದ್ವಿತೀಯ ಪಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಮುಂದಿನ ಪರಿಷ್ಕರಣೆಯನ್ನು ಅಧಿಕೃತ ವೆಬ್ ತಾಣದಲ್ಲಿ ಇಲಾಖೆ ಪ್ರಕಟಿಸಲಿದೆ” ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:
ಮಾರ್ಚ್ 10: ಕನ್ನಡ, ಅರೇಬಿಕ್
ಮಾರ್ಚ್ 11: ಗಣಿತ, ಶಿಕ್ಷಣ
ಮಾರ್ಚ್ 13: ಅರ್ಥಶಾಸ್ತ್ರ
ಮಾರ್ಚ್ 14: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್ 15: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 16: ಲಾಜಿಕ್, ಬಿಸಿನೆಸ್ ಸ್ಟಡೀಸ್
ಮಾರ್ಚ್ 17: ಮಾಹಿತಿ ಮತ್ತು ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಕ್ಷೇಮ
ಮಾರ್ಚ್ 18: ಭೂಗೋಳ, ಜೀವಶಾಸ್ತ್ರ
ಮಾರ್ಚ್ 20: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 21: ಹಿಂದಿ
ಮಾರ್ಚ್ 23: ಇಂಗ್ಲಿಷ್
ಮಾರ್ಚ್ 25: ರಾಜ್ಯಶಾಸ್ತ್ರ, ಅಂಕಿಅಂಶ
ಮಾರ್ಚ್ 27: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ
ಮಾರ್ಚ್ 29: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್.

ವೇಳಾಪಟ್ಟಿಯಂತೆ ಪರೀಕ್ಷೆಗಳು ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರ ವರೆಗೆ ನಡೆಯಲಿದೆ. ವೇಳಾಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 21 ರಂದು ಸಂಜೆ 5-30ರ ಒಳಗಾಗಿ idexam,dpue@gmail.com ಗೆ ಮೇಲ್ ಮಾಡಲು ಸೂಚಿಸಲಾಗಿದೆ.

Latest Articles

error: Content is protected !!