Author name: Newskarkala Desk

ಆಳ್ವಾಸ್: ಕನ್ನಡ ಸಂಘದ ವಾರ್ಷಿಕ ಕಾರ‍್ಯಕ್ರಮಗಳ ಉದ್ಘಾಟನಾ ಸಮಾರಂಭ

“ಭಾರತೀಯ ಭಾಷೆಗಳು ಮತ್ತು ತಾಂತ್ರಿಕ ಶಿಕ್ಷಣ” ಉಪನ್ಯಾಸ ಮೂಡುಬಿದಿರೆ: ದೇಶಿಯ ಭಾಷೆಗಳ ಉಪಯೋಗ ಹೇಗೆ ಆಗಬೇಕೆಂಬ ಉನ್ನತ ಯೋಚನೆಗಳು ನಮ್ಮ ನಡುವೆ ಜರಗುತಿದ್ದರೂ, ಅವುಗಳನ್ನು ಕಾರ‍್ಯಗತಗೊಳಿಸಲು ಇರುವ ಯೋಜನೆಗಳು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಕನ್ನಡ ಕೀಬೋರ್ಡ್ ಜನಕ ಹಾಗೂ ಮಣಿಪಾಲ ಎಂಐಟಿ ನಿವೃತ್ತ ಪ್ರಾಧ್ಯಪಕ ಡಾ ಕೆಪಿ ರಾವ್ ನುಡಿದರು. ಅವರು ಮಿಜಾರಿನ ಆಳ್ವಾಸ್ ತಾಂತ್ರಿಕ ವಿದ್ಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದೊಂದಿಗೆ ಕನ್ನಡ ಸಂಘದ ವಾರ್ಷಿಕ

ಆಳ್ವಾಸ್: ಕನ್ನಡ ಸಂಘದ ವಾರ್ಷಿಕ ಕಾರ‍್ಯಕ್ರಮಗಳ ಉದ್ಘಾಟನಾ ಸಮಾರಂಭ Read More »

ಸಾಣೂರು : ರಬ್ಬರ್ ತೋಟದಲ್ಲಿ ಸುಟ್ಟು ಕರಕಲಾದ ದೇಹ ಪತ್ತೆ

ಕಾರ್ಕಳ : ಸಾಣೂರು‌ ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿಯ ರಬ್ಬರ್‌ ತೋಟದಲ್ಲಿ ಸುಟ್ಟು ಕರಕಲಾದ ದೇಹವೊಂದು ಬುಧವಾರ ಪತ್ತೆಯಾಗಿದೆ. ರಬ್ಬರ್‌ ತೋಟದಲ್ಲಿ ಕಾರ್ಮಿಕನಾಗಿದ್ದ ವ್ಯಕ್ತಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಸಾಣೂರು : ರಬ್ಬರ್ ತೋಟದಲ್ಲಿ ಸುಟ್ಟು ಕರಕಲಾದ ದೇಹ ಪತ್ತೆ Read More »

ಇ-ಸ್ಟ್ಯಾಪಿಂಗ್‌ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಮಾಹಿತಿ

ಕಾರ್ಕಳ: ವಕೀಲರ ಸಂಘ ಮತ್ತು ಆಶಯ ಸೌಹರ್ದ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಇ- ಸ್ಟ್ಯಾಪಿಂಗ್‌ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಅ.18ರಂದು ಕಾರ್ಕಳದ ಪುರಸಭಾ ಕಚೇರಿಯ ಮುಂಭಾಗದಲ್ಲಿರುವ ಆಶಯ ಸೌಹರ್ದ ಸಹಕಾರ ಸಂಘದಲ್ಲಿ ನಡೆಯಿತು. ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್‌ ಕುಮಾರ್‌ ಶೆಟ್ಟಿ ಇ-ಸ್ಟ್ಯಾಪಿಂಗ್‌ ಸೇವೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಿ. ಮುರಲೀಧರ ಭಟ್‌ ಇ-ಸ್ಟ್ಯಾಪಿಂಗ್‌ ಸೇವೆ

ಇ-ಸ್ಟ್ಯಾಪಿಂಗ್‌ ಸೇವೆಯ ಉದ್ಘಾಟನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಕಾನೂನಿನ ಮಾಹಿತಿ Read More »

ಬಾವಿಗೆ ಹಾರಿ ಆತ್ಮಹತ್ಯೆ

ಹೆಬ್ರಿ: ಶಿವಪುರ ಗ್ರಾಮದ ಮುಳ್ಳುಗುಡ್ಡೆ ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ. ಮುಳ್ಳುಗುಡ್ಡೆ ಕಾಳಾಯಿಯ ನಾರಾಯಣ ಶೆಟ್ಟಿಗಾರ (73 ವ.) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಾನಸಿಕವಾಗಿ ನೊಂದು ಮನೆಯ ಪಕ್ಕದ ರಬ್ಬರ್‌ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಆತ್ಮಹತ್ಯೆ Read More »

ಕಾಂತಾರದ ಪ್ರೇರಣೆ-ಕಂಬಳದ ಹಿನ್ನೆಲೆ

ಕಾರ್ಕಳ: ಚಲನಚಿತ್ರಗಳು ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗುತ್ತದೆ. ಇದಕ್ಕೆ ಉತ್ತಮವಾದ ನಿದರ್ಶನ ಪ್ರಸ್ತುತ ದೇಶದಾದ್ಯಂತ ಸಂಚಲನ ಮೂಡಿಸುತ್ತಿರುವ ಕಾಂತಾರ ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾವು ಕರಾವಳಿಯ ಸೊಬಗನ್ನು ಚಿತ್ರಿಸುವುದರ ಜೊತೆಗೆ ಕರಾವಳಿಯ ಜನತೆಯ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ. ಇಲ್ಲಿನ ದೈವರಾಧನೆಯ ಮಹತ್ವ, ಪ್ರಕೃತಿಯೊಂದಿಗೆ ಜನರ ಬೆಸುಗೆ, ಪರಿಸರ ಮತ್ತು ಜನರ ರಕ್ಷಣೆಯಲ್ಲಿ ದೈವದ ಕಾರ್ಣಿಕ ಇವೆಲ್ಲವನ್ನೂ ಕಟ್ಟಿಕೊಟ್ಟಿರುವ ಕಾಂತಾರ ಸಿನಿಮಾವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಚಿತ್ರದ ಬಿಡುಗಡೆ

ಕಾಂತಾರದ ಪ್ರೇರಣೆ-ಕಂಬಳದ ಹಿನ್ನೆಲೆ Read More »

ಕೊಳಕ್ಕೆ ಇರ್ವತ್ತೂರು ನಾಗಬ್ರಹ್ಮಸ್ಥಾನಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ

ಕಾರ್ಕಳ: 480 ವರ್ಷದ ಐತಿಹಾಸಿಕ ಮಹತ್ವವುಳ್ಳ ಕೊಳಕ್ಕೆ ಇರ್ವತ್ತೂರು ಗೊಲ್ಡಿಂದಿ ಸಾರ್ವಜನಿಕ ಶ್ರೀ ನಾಗಬ್ರಹ್ಮಸ್ಥಾನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅ.18 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್, ಜಯಕೀರ್ತಿ ಕಡಂಬ, ಸಮಿತಿಯ ಅಧ್ಯಕ್ಷರಾದ ಭರತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ ಎಸ್ ಕೋಟ್ಯಾನ್ ಪಂಚಾಯತ್‌

ಕೊಳಕ್ಕೆ ಇರ್ವತ್ತೂರು ನಾಗಬ್ರಹ್ಮಸ್ಥಾನಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ Read More »

ಅ.18: ಸಚಿವ ಸುನೀಲ್‌ ಕುಮಾರ್‌ ಕಾರ್ಯಕ್ರಮದ ವಿವರ

ಕಾರ್ಕಳ : ಅ.18ರ ಮಂಗಳವಾರದಂದು ಸಚಿವ ಸುನೀಲ್‌ ಕುಮಾರ್‌ ಭಾಗವಹಿಸುವ ಕಾರ್ಯಕ್ರಮದ ವಿವರ ಇಂತಿದೆ.ಬೆಳಿಗ್ಗೆ ಗಂಟೆ 8:30ಕ್ಕೆ ಇರ್ವತ್ತೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡ ಹಾಗೂ ನೂತನವಾಗಿ ನಿರ್ಮಾಣವಾದ ರಸ್ತೆ ಉದ್ಘಾಟನೆ, ಮಧ್ಯಾಹ್ನ 2ಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಾನಗರ ಪಾಲಿಕ ಪರಿಶೀಲನಾ ಸಭೆ, 3ಕ್ಕೆ ಮಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ, ಸಂಜೆ 4:30ಕ್ಕೆ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ʼಕೋಟಿ ಕಂಠ ಗಾಯನʼ ಕಾರ್ಯಕ್ರಮದ

ಅ.18: ಸಚಿವ ಸುನೀಲ್‌ ಕುಮಾರ್‌ ಕಾರ್ಯಕ್ರಮದ ವಿವರ Read More »

ಮೀಸಲಾತಿ ಹೆಚ್ಚಳ : ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಕರಾವಳಿ ಭಾಗದ ಪ. ಪಂಗಡ ನಿಯೋಗ

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಬೇಡಿಕೆಗೆ ರಾಜ್ಯ ಸರ್ಕಾರವು ಸ್ಪಂದಿಸಿದ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡದ ನಿಯೋಗ ಅ. 17ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಪರಿಶಿಷ್ಟ ಜಾತಿಗೆ ಇದ್ದ ಶೇ. 15 ಮೀಸಲಾತಿಯನ್ನು ಶೇ.17 ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಇದ್ದ ಶೇ.3 ಮೀಸಲಾತಿಯನ್ನು ಶೇ. 7 ಕ್ಕೆ ಸರಕಾರ ಹೆಚ್ಚಳ ಮಾಡಿತ್ತು. ಇಂಧನ ಹಾಗೂ

ಮೀಸಲಾತಿ ಹೆಚ್ಚಳ : ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಕರಾವಳಿ ಭಾಗದ ಪ. ಪಂಗಡ ನಿಯೋಗ Read More »

ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತದ ಗಡಿ ಭದ್ರತಾ ಪಡೆ

ಪಂಜಾಬ್‌ನ ಭಾರತ – ಪಾಕಿಸ್ತಾನ ಗಡಿಯ ಭಾಗದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಸುಮಾರು 12 ಕೆ.ಜಿ ಸರಕನ್ನು ಹೊತ್ತಿದ್ದ ಡ್ರೋನ್ ಅನ್ನು ಭದ್ರತಾ ಪಡೆಗಳು ಭಾನುವಾರ ರಾತ್ರಿ ಹೊಡೆದುರುಳಿಸಿದ್ದಾರೆ. ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ರಾತ್ರಿ 9:15ರ ಸುಮಾರಿಗೆ ಭದ್ರತಾ ಪಡೆಗಳು ಕ್ವಾಡ್ ಕಾಪ್ಟರ್ ಸ್ಪೋರ್ಟಿಂಗ್ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್‌ನಲ್ಲಿ ಲೋಡ್ ಮಾಡಲಾಗಿದ್ದ ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸರಕನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಡ್ರೋನ್‌ನಲ್ಲಿ ಯಾವ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ

ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತದ ಗಡಿ ಭದ್ರತಾ ಪಡೆ Read More »

ಬೆಸ್ಕಾಂನಲ್ಲಿ 400 ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (BESCOM ) ಖಾಲಿ ಇರುವ 400 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಬೆಸ್ಕಾಂ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ನವೆಂಬರ್‌ 07ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಖ್ಯೆ:400ಉದ್ಯೋಗ ಸ್ಥಳ:ಬೆಂಗಳೂರು- ಕರ್ನಾಟಕಹುದ್ದೆಯ ಹೆಸರು: ಅಪ್ರೆಂಟಿಸ್‌ವೇತನ :8000-9008 ಗ್ರಾಜುಯೇಟ್‌ ಅಪ್ರೆಂಟಿಸ್‌ ವಿಭಾಗ :ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ :143ಎಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಷನ್‌ ಇಂಜಿನಿಯರಿಂಗ್:116‌ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಜಿನಿಯರಿಂಗ್:36‌ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್:20‌ಸಿವಿಲ್‌ ಇಂಜಿನಿಯರಿಂಗ್:5‌ಇನ್‌

ಬೆಸ್ಕಾಂನಲ್ಲಿ 400 ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನ Read More »

error: Content is protected !!
Scroll to Top