Author name: Newskarkala Desk

ನಿಟ್ಟೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ತಂಡ

ತ್ಯಾಜ್ಯ ನಿರ್ವಹಣಾ ಘಟಕದ ಬಗ್ಗೆ ಮೆಚ್ಚುಗೆ ನಿಟ್ಟೆ: ತ್ಯಾಜ್ಯ ನಿರ್ವಹಣೆ ಅಧ್ಯಯನ ಕುರಿತಾಗಿ ನಿಟ್ಟೆ ಗ್ರಾಮ ಪಂಚಾಯತಿಗೆ ಅ.20 ರಂದು ಪಶ್ಚಿಮ ಬಂಗಾಳದಿಂದ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿತು. ಪಂಚಾಯತಿ ವ್ಯಾಪ್ತಿಯ ತ್ಯಾಜ್ಯ ನಿರ್ವಹಣಾ ಕೇಂದ್ರ, ಎಂಆರ್ ಎಫ್ ಘಟಕ ಮತ್ತು ಗೋಭರ್ ಧನ್ ಘಟಕಕ್ಕೆ ಭೇಟಿ ನೀಡಿದ್ದು ಅಲ್ಲಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್

ನಿಟ್ಟೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ತಂಡ Read More »

ಬೆಂಗಳೂರಿನಲ್ಲಿ 37 ತುಳು – ಕನ್ನಡ ಸಂಘಟನೆಗಳ ಸಭೆ ಆಯೋಜನೆ

ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೆ ಸಚಿವ ಸುನೀಲ್‌ ಕುಮಾರ್ ಆಹ್ವಾನ ಬೆಂಗಳೂರು : ಕರಾವಳಿಯ ಉಭಯ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿಯ ನೆಲ ಎಂದು ನಂಬಲಾಗುತ್ತಿದೆ. ‌ಭೂತ ಕೋಲ, ದೈವ ನರ್ತನ ಇತ್ಯಾದಿ ಕಾರಣಗಳಿಗೆ ನಮ್ಮ ಜಿಲ್ಲೆ ವೈಶಿಷ್ಯಪೂರ್ಣವಾಗಿದೆ. ಸಾಂಸ್ಕೃತಿಕವಾಗಿಯೂ ವಿಶೇಷತೆ ಹೊಂದಿರುವ ಕರಾವಳಿಯಲ್ಲಿ ಪರಶುರಾಮನಿಗೆ ಸಂಬಂಧಪಟ್ಟ ಯಾವುದೇ ಪ್ರತಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ದೇಶದ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದ್ದು ಡಿಸೆಂಬರ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲರೂ

ಬೆಂಗಳೂರಿನಲ್ಲಿ 37 ತುಳು – ಕನ್ನಡ ಸಂಘಟನೆಗಳ ಸಭೆ ಆಯೋಜನೆ Read More »

ಜ್ಞಾನಸುಧಾ : ಪ್ರತಿಭಾ ಪುರಸ್ಕಾರ – 66.67 ಲಕ್ಷ ರೂ. ದ್ವಿತೀಯ ಹಂತದ ಸ್ಕಾಲರ್‌ಶಿಪ್‌ ವಿತರಣೆ

ಜ್ಞಾನಸುಧಾ ಕಾರ್ಕಳಕ್ಕೊಂದು ಹೆಮ್ಮೆಯ ಸಂಸ್ಥೆ – ನಿತ್ಯಾನಂದ ಪ್ರಭು ಕಾರ್ಕಳ : ಕಾರ್ಕಳ ಕಲ್ಲಿನಿಂದ ಕೆತ್ತಿದ ಮೂರ್ತಿಗಳು ದೇಶ-ವಿದೇಶಗಳಲ್ಲಿ ಆರಾಧನೆಗೊಳ್ಳುತ್ತಿದೆ. ಅಂತೆಯೇ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ಮೌಲ್ಯಗಳೊಂದಿಗೆ ದೇಶ ವಿದೇಶಗಳಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಇದು ಕಾರ್ಕಳಕ್ಕೆ ಮತ್ತೊಂದು ಹೆಮ್ಮೆಯ ಸಂಗತಿ ಎಂದು ಖ್ಯಾತ ಲೆಕ್ಕಪರಿಶೋಧಕ ನಿತ್ಯಾನಂದ ಪ್ರಭು ಬಣ್ಣಿಸಿದರು.ಅವರು ಗುರುವಾರ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ವತಿಯಿಂದ ನಡೆದ ದ್ವಿತೀಯ ಹಂತದ ಜ್ಞಾನಸುಧಾ ಪ್ರತಿಭಾ

ಜ್ಞಾನಸುಧಾ : ಪ್ರತಿಭಾ ಪುರಸ್ಕಾರ – 66.67 ಲಕ್ಷ ರೂ. ದ್ವಿತೀಯ ಹಂತದ ಸ್ಕಾಲರ್‌ಶಿಪ್‌ ವಿತರಣೆ Read More »

ಕ್ರೈಸ್ಟ್‌ಕಿಂಗ್: ಕಾರ್ಕಳ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ

ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಅ. 20ರಂದು ಗಾಂಧಿ ಮೈದಾನದಲ್ಲಿ ನಡೆಯಿತು.ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಸುರೇಂದ್ರ ಶೆಟ್ಟಿ ಕ್ರೀಡಾಜ್ಯೋತಿ ಬೆಳಗಿಸಿದರು. ಮಕ್ಕಳನ್ನು ಮೊಬೈಲ್‌ನಿಂದ ದೂರ ಮಾಡಿ ಕ್ರೀಡೆಯ ಕಡೆಗೆ ಆಸಕ್ತರನ್ನಾಗಿ ಮಾಡಬೇಕು, ಇಂತಹ ಕ್ರೀಡಾಕೂಟಗಳಿಂದ ದೇಶಕ್ಕೆ ಒಳ್ಳೆಯ ಪ್ರತಿಭೆಗಳನ್ನು ನೀಡಲು ಸಾಧ್ಯ ಎಂದರು.ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕ್ರೈಸ್ಟ್‌ಕಿಂಗ್ ಎಜುಕೇಷನ್

ಕ್ರೈಸ್ಟ್‌ಕಿಂಗ್: ಕಾರ್ಕಳ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ Read More »

60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ 2 ಸಾವಿರ ರೂ. ಮಾಸಾಶನ – ಸುನೀಲ್‌ ಕುಮಾರ್‌ ಘೋಷಣೆ

ಬೆಂಗಳೂರು : 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಘೋಷಣೆ ಮಾಡಿದ್ದಾರೆ. ಪ್ರತಿ ತಿಂಗಳು 2 ಸಾವಿರ ನೀಡಲು ಸರಕಾರ ನಿರ್ಧರಿಸಿದ್ದು, ಈ ಮೂಲಕ ಕರಾವಳಿ ಭಾಗದ ದೈವ ನರ್ತಕರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ವೇಳೆ ಮಾತನಾಡಿದ ಸಚಿವ ಸುನೀಲ್‌ ಕುಮಾರ್‌ ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗ. ತುಳುನಾಡಿನ ದೈವಾರಾಧನೆ ಬಗ್ಗೆ ಯಾರೋ ಒಬ್ಬ ವ್ಯಕ್ತಿ ಏನೋ ಹೇಳಿದ್ರೆ

60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ 2 ಸಾವಿರ ರೂ. ಮಾಸಾಶನ – ಸುನೀಲ್‌ ಕುಮಾರ್‌ ಘೋಷಣೆ Read More »

ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಸಲಹಾ ಸಮಿತಿ ಉದ್ಘಾಟನೆ

‘ಪ್ರಕೃತಿ ಐಕ್ಯಂ’- ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸಾಣೂರು: ಪ್ರಕೃತಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸಲಹಾ ಸಮಿತಿ ಉದ್ಘಾಟನಾ ಕಾರ್ಯಕ್ರಮ ಹಾಗೂ ‘ಪ್ರಕೃತಿ ಐಕ್ಯಂ’ ಎಂಬ ಹೆಸರಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಅ.15 ರಂದು ನಡೆಯಿತು. ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಮಂಗಳೂರು ಶ್ರೀನಿವಾಸ ಕಾಲೇಜಿನ ಡಾ .ಜಯಶ್ರೀ, ಬೆಂಗಳೂರು ಲೀಡ್ ಮಾಸ್ಟರ್ ಅಕಾಡೆಮಿಕ್ ವಲೀಡ್ಟರಿನ ಡಾ. ರಾಖಿ ಮಥಾಯ್ ಆಂಟೋನಿ, ಗೋವಾ ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್ ಜೊವಾಲಜಿಯ ಡಾ. ನಂದಿನಿ, ಅಳಿಕೆ ಶ್ರೀ

ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಸಲಹಾ ಸಮಿತಿ ಉದ್ಘಾಟನೆ Read More »

ಸಾಣೂರಿನಲ್ಲಿ ಸುಟ್ಟು ಕರಕಲಾದ ದೇಹ ಪತ್ತೆ – ಆತ್ಮಹತ್ಯೆ ಶಂಕೆ

ಜೊತೆಗಿದ್ದ ಕಾರ್ಮಿಕ ನಾಪತ್ತೆ – ಮೂಡುತ್ತಿದೆ ಹಲವು ಅನುಮಾನ ಕಾರ್ಕಳ : ಸಾಣೂರು ಗ್ರಾಮದ ಶುಂಠಿಗುಡ್ಡೆಯ ರಬ್ಬರ್‌ ತೋಟದಲ್ಲಿ ಸುಟ್ಟು ಕರಕಲಾದ ಮೃತದೇಹ ಬುಧವಾರ ಪತ್ತೆಯಾಗಿದ್ದು, ಮೃತನನ್ನು ಇದೇ ರಬ್ಬರ್‌ ತೋಟದಲ್ಲಿ ಕಾರ್ಮಿಕನಾಗಿರುವ ಕೇರಳ ಮಲಪ್ಪುರಂ ಮೂಲದ ಗೋಪಿ (60) ಎಂದು ಗುರುತಿಸಲಾಗಿದೆ. ಉದ್ಯಮಿ ವಿವೇಕಾನಂದ ಶೆಣೈ ಅವರು ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿದ್ದು, ಪ್ಲಾಂಟೇಶನ್ ನ ಉಸ್ತುವಾರಿಯನ್ನು ಹವಾಲ್ದಾರ್‌

ಸಾಣೂರಿನಲ್ಲಿ ಸುಟ್ಟು ಕರಕಲಾದ ದೇಹ ಪತ್ತೆ – ಆತ್ಮಹತ್ಯೆ ಶಂಕೆ Read More »

ನಿಟ್ಟೆ ವಿದ್ಯಾಲಯ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ಅವಕಾಶ ಕಲ್ಪಿಸಿದೆ

ಜಪಾನ್‌ನ ನಿಡ್ಯಾಕ್-ರೀಡ್ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟಿಸಿ ಹಿಡೆಕಾಜು ಯಮಜಕಿ ಕಾರ್ಕಳ: ‘ಭಾರತ ದೇಶದ ಪ್ರತಿ‍ಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ನಿಡ್ಯಾಕ್ ರೀಡ್ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿದೆ ಎಂದು ಹಿಡೆಕಾಜು ಯಮಜಕಿ ಹೇಳಿದರು.ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನಿನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್

ನಿಟ್ಟೆ ವಿದ್ಯಾಲಯ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ಅವಕಾಶ ಕಲ್ಪಿಸಿದೆ Read More »

ಅ.28 ರಿಂದ ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಂಗಳೂರು: ಸುರತ್ಕಲ್‌ನಲ್ಲಿ ಅಕ್ರಮ ಎಂದು ಹೇಳಲಾಗುತ್ತಿರುವ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಹೋರಾಟದ ಸ್ವರೂಪ ತ್ರೀವಗತಿಯನ್ನು ಪಡೆಯುತ್ತಿದ್ದು, ಸಮಿತಿಯು ಅ.28 ರಿಂದ ಟೋಲ್‌ ಗೇಟ್‌ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.ಇಂದು ಸುರತ್ಕಲ್‌ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಈ ನಡುವೆ ಸುರತ್ಕಲ್‌ ಟೋಲ್‌ ಗೇಟ್‌ ನಲ್ಲಿ ಎಂದಿನಂತೆ

ಅ.28 ರಿಂದ ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ Read More »

24 ವರ್ಷಗಳ ನಂತರ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ನವದೆಹಲಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಕರ್ನಾಟಕ ಮೂಲಕ, ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.ಚಲಾವಣೆಯಾದ ಒಟ್ಟು 9.385 ಮತಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ 7 ಸಾವಿರದ 897 ಮತಗಳು, ಸಂಸದ ಶಶಿ ತರೂರ್ ಪರವಾಗಿ ಸಾವಿರದ 072 ಮತಗಳು ಲಭಿಸಿವೆ. ಇನ್ನು 400ಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ.ಈ ಮೂಲಕ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸ್ಥಾನದಲ್ಲಿ ಮಲ್ಲಿಕಾರ್ಜುವ ಖರ್ಗೆಯವರು ಕೂರಲಿದ್ದು, 24 ವರ್ಷಗಳ ನಂತರ ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷರಾಗಿ

24 ವರ್ಷಗಳ ನಂತರ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ Read More »

error: Content is protected !!
Scroll to Top