Thursday, December 1, 2022
spot_img
Homeಸುದ್ದಿಬೆಂಗಳೂರಿನಲ್ಲಿ 37 ತುಳು - ಕನ್ನಡ ಸಂಘಟನೆಗಳ ಸಭೆ ಆಯೋಜನೆ

ಬೆಂಗಳೂರಿನಲ್ಲಿ 37 ತುಳು – ಕನ್ನಡ ಸಂಘಟನೆಗಳ ಸಭೆ ಆಯೋಜನೆ

ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೆ ಸಚಿವ ಸುನೀಲ್‌ ಕುಮಾರ್ ಆಹ್ವಾನ

ಬೆಂಗಳೂರು : ಕರಾವಳಿಯ ಉಭಯ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿಯ ನೆಲ ಎಂದು ನಂಬಲಾಗುತ್ತಿದೆ. ‌ಭೂತ ಕೋಲ, ದೈವ ನರ್ತನ ಇತ್ಯಾದಿ ಕಾರಣಗಳಿಗೆ ನಮ್ಮ ಜಿಲ್ಲೆ ವೈಶಿಷ್ಯಪೂರ್ಣವಾಗಿದೆ. ಸಾಂಸ್ಕೃತಿಕವಾಗಿಯೂ ವಿಶೇಷತೆ ಹೊಂದಿರುವ ಕರಾವಳಿಯಲ್ಲಿ ಪರಶುರಾಮನಿಗೆ ಸಂಬಂಧಪಟ್ಟ ಯಾವುದೇ ಪ್ರತಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ದೇಶದ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದ್ದು ಡಿಸೆಂಬರ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕನ್ನಡ ಹಾಗೂ ಸಂಸ್ಕೃತಿ, ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಮನವಿ ಮಾಡಿಕೊಂಡರು.

ಅವರು ಗುರುವಾರ ಅರಮನೆ ಮೈದಾನದಲ್ಲಿ 37 ತುಳು- ಕನ್ನಡ ಸಂಘ-ಸಂಸ್ಥೆಗಳ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷೆ, ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ತುಳು – ಕನ್ನಡ ಸಂಘಗಳನ್ನು ಆಮಂತ್ರಿಸಿ ಸಭೆ ನಡೆಸಲಾಗಿದೆ. ಕಾರ್ಕಳದಲ್ಲಿ ನಡೆಯುವ ಪರುಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಸುನೀಲ್‌ ಕುಮಾರ್‌ ವಿನಂತಿಸಿದರು.

ಸಕಾರಾತ್ಮಕ ಸ್ಪಂದನೆ
ತುಳುವಿಗೆ ಅಧಿಕೃತ ರಾಜ್ಯಭಾಷೆ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಹಳ‌ ಕಾಲದಿಂದ ಇದೆ. ಇದಕ್ಕೆ ನಮ್ಮ ಸರಕಾರವೂ ಬದ್ಧವಾಗಿದೆ. ಕೇಂದ್ರ ಸರಕಾರದಿಂದಲೂ ಸಕಾರಾತ್ಮಕ ಸ್ಪಂದನೆಯಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಕಾನೂನು ಇಲಾಖೆಗೆ ಅಭಿಪ್ರಾಯ ಕೋರಿ ಪತ್ರ ಬರೆಯಲಾಗಿದೆ ಎಂದು ಸುನೀಲ್‌ ಕುಮಾರ್ ತಿಳಿಸಿದರು. ೩೭ ಸಂಘಟನೆ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಪುಸ್ತಕ ನೀಡಿ ಅಭಿನಂದಿಸಲಾಯಿತು.‌

LEAVE A REPLY

Please enter your comment!
Please enter your name here

Most Popular

error: Content is protected !!