ಕಾರ್ಕಳ : ಶ್ರೀ ವಿಶ್ವಕರ್ಮ ಫ್ರೆಂಡ್ಸ್ ನೂರಾಳ್ ಬೆಟ್ಟು ಇವರ ವತಿಯಿಂದ ಅಶಕ್ತರಿಗೆ ನೆರವು ಯೋಜನೆ ಮೂಲಕ ದಾನಿಗಳ ಸಹಕಾರದಿಂದ ನಲ್ಲೂರು ಗ್ರಾಮದ ಪೇರಲ್ಕೆ ನಿವಾಸಿಗಳಾದ ಶಾರದ ಮತ್ತು ವನಜ ಅವರ ಮನೆಯನ್ನು ಪುನರ್ ನಿರ್ಮಾಣಗೊಳಿಸಿ ಜ. 4ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕಾಷ್ಠಶಿಲ್ಪ ಕೇಂದ್ರ ಸಂಪಿಗೆ ಇಲ್ಲಿನ ಹರೀಶ್ ಆಚಾರ್ಯ ಕಲ್ಲಮೂಂಡ್ಕೂರು ಮನೆಯನ್ನು ಹಸ್ತಾಂತರಿಸಿದರು. ಶ್ರೀ ವಿಶ್ವಕರ್ಮ ಪ್ರೆಂಡ್ಸ್ ಸಂಘಟನೆಯ ಅಧ್ಯಕ್ಷರು, ಪದಧಿಕಾರಿಗಳು, ಸರ್ವ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ವಿಶ್ವಕರ್ಮ ಫ್ರೆಂಡ್ಸ್ ನೂರಾಳ್ ಬೆಟ್ಟು – ಅಶಕ್ತರಿಗೆ ನೆರವು ಯೋಜನೆ
























