ಕಾರ್ಕಳ : ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೊಳಪಡುವ ಹೆಬ್ರಿ ತಾಲೂಕು ಕುರ್ಪಾಡಿ-ಖಜಾನೆ- ಮುನಿಯಾಲು ರಸ್ತೆಯ ಭಾಗಗಳಲ್ಲಿ 2025ರ ನ. 11ರಂದು ಇಲಾಖಾ ಅನುಮತಿಯಿಲ್ಲದೆ ಯಾರೋ ಅಪರಿಚಿತರು ಜೆ.ಸಿ.ಬಿ/ಹಿಟಾಚಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಅನಧಿಕೃತವಾಗಿ ಅಗೆದು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯುಂಟು ಮಾಡಿದ್ದಾರೆ. ಅಲ್ಲದೆ ಸರಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿ ನಷ್ಟ ಉಂಟು ಮಾಡಿರುತ್ತಾರೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಸಿ.ಪಿ. ಇವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮುನಿಯಾಲು : ಇಲಾಖಾ ಅನುಮತಿಯಿಲ್ಲದೆ ರಸ್ತೆಯ ಭಾಗದಲ್ಲಿ ಅಗೆತ – ಪ್ರಕರಣ ದಾಖಲು
























