ನೀರಿನ ಟ್ಯಾಂಕ್‌ ಬಿದ್ದು ಮೇಸ್ತ್ರಿ ಸಾವು

ಕಾರ್ಕಳ : ನೀರಿನ ಟ್ಯಾಂಕ್‌ ಮೈ ಮೇಲೆ ಬಿದ್ದು ಮೇಸ್ತ್ರಿ ಸಾವನಪ್ಪಿದ ದುರ್ಘಟನೆ ಅ. 9ರಂದು ಬೈಲೂರು ಗ್ರಾಮದ ಜಾರ್ಕಳದಲ್ಲಿ ಸಂಭವಿಸಿದೆ. ಉಮೇಶ್‌ ಎಂಬವರ ತೋಟದಲ್ಲಿ ಪರ್ಕಳದ ದಯಾನಂದ ಮತ್ತು ಮೇಸ್ತ್ರಿ ಆನಂದ ಎಂಬುವವರು ಶೆಡ್ಡ್‌ ನಿರ್ಮಾಣದ ಕೆಲಸ ಮಾಡುತ್ತಿದ್ದಾಗ ಶೆಡ್ಡ್‌ನ ಬಳಿ ಹಳೆಯದಾದ ಕಬ್ಬಿಣದ ಸ್ಟ್ಯಾಂಡ್‌ ಮೇಲೆ ಇರಿಸಿದ್ದ ಸುಮಾರು 2 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಮೈ ಮೇಲೆ ಬಿದ್ದಿದ್ದು, ಪರಿಣಾಮವಾಗಿ ದಯಾನಂದ, ಆನಂದ ಹಾಗೂ ಉಮೇಶ್‌ ಅವರು ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಗಾಯಾಳುಗಳನ್ನು ಬೈಲೂರು ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದ ಆನಂದ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































































error: Content is protected !!
Scroll to Top