ಗೆಳೆಯರ ಬೆದರಿಕೆಗೆ ಆತ್ಮಹತ್ಯೆಗೈದ ಅಭಿಷೇಕ್‌ ಆಚಾರ್ಯ

ಕಾರ್ಕಳ : ಗೆಳೆಯರ ಬ್ಲಾಕ್‌ಮೇಲ್‌ಗೆ ನೊಂದು ಅ. 9ರಂದು ಬೆಳ್ಮಣ್‌ನ ಸೂರಜ್‌ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ನಿಟ್ಟೆ ಗ್ರಾಮದ ಪರಪ್ಪಾಡಿ ಅಭಿಷೇಕ್ ಆಚಾರ್ಯ(23)ನ ಡೆತ್‌ ನೋಟ್‌ ಪತ್ತೆಯಾಗಿದೆ. ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಷೇಕ್‌ ತನ್ನ ಸಾವಿಗೆ ನಾಲ್ವರು ಗೆಳೆಯರು ಕಾರಣವೆಂದು ಉಲ್ಲೇಖ ಮಾಡಿರುತ್ತಾನೆ. ಲೇಡಿಗೋಷನ್‌ ಆಸ್ಪತ್ರೆ ಎಎನ್‌ ವಾರ್ಡ್‌ ನರ್ಸ್‌ ನಿರೀಕ್ಷಾ, ಗುರುಪುರದ ರಾಕೇಶ್‌ ಹಾಗೂ ತಸ್ಲೀಂ, ಕಂಕನಾಡಿಯ ರಾಹುಲ್‌ ಹಣಕ್ಕಾಗಿ ನನಗೆ ತುಂಬಾನೆ ಕಿರಿಕುಳ ಮಾಡಿರುತ್ತಾರೆ. ಹಲ್ಲೆಗೈದು, ಕೊಲೆ ಬೆದರಿಕೆಯೊಡ್ಡಿರುತ್ತಾರೆ. ನನ್ನ ರೂಮ್‌ಮೇಟ್ ತೇಜು ಕುಮಾರ್‌ ಗೂ ನಿರೀಕ್ಷಾ ಬ್ಲ್ಯಾಕ್‌ ಮೇಲ್‌ ಮಾಡಿದ್ದು ಅನಂತರ ಆತ ಕಾಣೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿರುತ್ತಾನೆ.

ನಿರೀಕ್ಷಾ ಮೊದಮೊದಲು ತನ್ನೊಂದಿಗೆ ಪ್ರೀತಿಯ ನಾಟಕವಾಡಿ ಅನಂತರ ನನ್ನ ಅಶ್ಲೀಲ ಫೋಟೊ ಮುಂದಿಟ್ಟು ಲಕ್ಷಾಂತರ ರೂ. ಪಡೆದಿರುತ್ತಾಳೆ. ನಿರೀಕ್ಷಾ, ರಾಕೇಶ್‌ ತಂಡ ನಿರಂತರವಾಗಿ ಹಣಕ್ಕಾಗಿ ಬೇಡಿಕೆಯಿಟ್ಟು ಹಿಂಸಿಸಿರುತ್ತಾರೆ. ಕಾನೂನಿನಲ್ಲಿ ನ್ಯಾಯ ದೊರೆಯುವ ಭರವಸೆಯಿಲ್ಲದ ಕಾರಣ ಅವರಿಂದ ಮತ್ಯಾರಿಗೂ ಈ ರೀತಿ ತೊಂದರೆ ಆಗಬಾರದು. ನಾನು ಜೀವನ ಪರ್ಯಂತ ನೆಮ್ಮದಿಯಿಂದ ಇರಲು ಇವರು ಬಿಡಲಾರರು. ಹಾಗಾಗಿ ಆತ್ಮಹತ್ಯೆಗೆ ನಿರ್ಧರಿಸಿರುವುದಾಗಿ ಅಭಿಷೇಕ್‌ ಡೆತ್‌ ನೋಟ್‌ ನಲ್ಲಿ ತಿಳಿಸಿದ್ದಾನೆ.

ಅಂಗಾಂಗ ದಾನ
ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ ಸಾವು ಸಂದರ್ಭ ನೋವಾಗದು. ಆದರೆ, ಇದರಿಂದ ಅಂಗಾಂಗ ದಾನ ಮಾಡಲು ಸಾಧ್ಯವಿಲ್ಲ ಎಂದು ಅರಿತು ನೇಣಿಗೆ ಶರಣಾಗುತ್ತಿರುವುದಾಗಿ ಡೆತ್‌ ನೋಟ್‌ ನಲ್ಲಿ ತಿಳಿಸಿದ್ದು, ಸಾವಿನಲ್ಲೂ ಸಾಮಾಜಿಕ ಕಳಕಳಿ ಮೆರೆದಿದ್ದಾನೆ.

ಪ್ರಕರಣ ಕುರಿತು ಎಸ್‌ಪಿ ಏನಂದ್ರು ?
ಪ್ರಕರಣ ಕುರಿತು ಎಸ್‌ಪಿ ಡಾ. ಹರಿರಾಂ ಶಂಕರ್‌ ಮಾಹಿತಿ ನೀಡಿದ್ದು, ಪೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ. ಕೆಲವು ಸಮಯದಿಂದ ಅಭಿಷೇಕ್‌ ಖಿನ್ನತೆಗೆ ಒಳಗಾಗಿರುವ ಕುರಿತು ವರದಿಯಾಗಿದೆ ಎಂದರು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಭಿಷೇಕ್‌ ನಿರೀಕ್ಷಾ ಅವರ ಖಾಸಗಿ ವೀಡಿಯೊವನ್ನು ಲೇಡಿಗೋಷನ್ ಸಿಬ್ಬಂದಿ ವಾಟ್ಸಾಪ್ ಗ್ರೂಪ್‌ಗೆ ಹಂಚಿಕೊಂಡಿದ್ದಾರೆ. ನಿರೀಕ್ಷಾ ಇತ್ತೀಚೆಗೆ ವಿವಾಹವಾಗಿದ್ದಾರೆ. ಇಲ್ಲಿಯವರೆಗಿನ ತನಿಖೆಯ ಪ್ರಕಾರ ಅವರೆಲ್ಲ ಬ್ಲ್ಯಾಕ್‌ಮೇಲ್‌ ಮಾಡಿರುವುದು ಸುಳ್ಳು ಎಂದು ತಿಳಿದು ಬಂದಿದೆ. ಆದಾಗ್ಯೂ, ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ 3 ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

















































































error: Content is protected !!
Scroll to Top