ಜೇಸಿಐ ಜೇಸಿ ಸಪ್ತಾಹ – ವಿದ್ಯಾರ್ಥಿಗಳಿಗೆ ತರಬೇತಿ

ಕಾರ್ಕಳ : ಜೇಸಿಐ ಕಾರ್ಕಳ ನೇತೃತ್ವದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ಎರಡನೇ ದಿನವಾದ ಇಂದು (ಸೆ. 10) ಶ್ರೀ ಭುವನೇಂದ್ರ ಕಾಲೇಜಿನಲ್ಲಿ Career Guidance Resume Building ಎಂಬ ವಿಚಾರವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ರಾಷ್ಟ್ರೀಯ ತರಬೇತುದಾರೆ ಕ್ವೀನಿ ಡಿ. ಕೋಸ್ಟಾ ತರಬೇತಿ ನೀಡಿದರು. ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ Skill development ವಿಚಾರವಾಗಿ ತರಬೇತಿ ನೀಡಿದರು. ಇಲ್ಲಿ ಶಾಹೀನ್‌ ರಿಜ್ವಾನ್‌ ಮೆಹಂದಿ ವರ್ಕ್‌ ಶಾಪ್‌ ನಡೆಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರು ಚಿತ್ತರಂಜನ್ ಶೆಟ್ಟಿ, ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್ ಜೈನ್, ಮುಖ್ಯ ಶಿಕ್ಷಕಿ ಸುರೇಖಾ ರಾಜ್, ಪ್ರಚಿತ್ ಕುಮಾರ್, ಸುಶಾಂತ್ ಶೆಟ್ಟಿ, ರಿಜ್ವಾನ್ ಖಾನ್, ಶಿಕ್ಷಕರು ಹಾಗೂ ಜೇಸಿ ಸದಸ್ಯರು ಉಪಸ್ಥಿತರಿದ್ದರು.















































































error: Content is protected !!
Scroll to Top