ಜನಾಗ್ರಹ ಸಭೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಮಾತನಾಡಿದವರ ನಾಲಗೆ ಇಲ್ಲದಾಗಬೇಕು ಅಥವಾ ಮಾತನಾಡುವವರೇ ಇಲ್ಲದಾಗಬೇಕು ಎಂದ ರವೀಶ್ ತಂತ್ರಿ ವಿರುದ್ಧ ಪ್ರಕರಣ ದಾಖಲು

ಕಾರ್ಕಳ : ಕುಕ್ಕುಂದೂರು ಪಂಚಾಯತ್ ಮುಂಭಾಗದ ಮೈದಾನದಲ್ಲಿ ಇಂದು ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಹಾಗೂ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುವುತ್ತಿರುವುದನ್ನು ವಿರೋಧಿಸಿ ನಡೆದ ಜನಾಗ್ರಹ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಐಕ್ಯ ವೇದಿಕೆ ಕೇರಳ ಇದರ ರವೀಶ್ ತಂತ್ರಿ ಕುಂಟಾರು ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವೀಶ್ ತಂತ್ರಿ ಅವರು ತಮ್ಮ ಭಾಷಣದಲ್ಲಿ ತಾಂಟ್ರೆ ಬಾ ತಾಂಟ್ ಬಾ ಎನ್ನುವರಿಗೆ ನಮಗೆ ತಕ್ಕ ಉತ್ತರ ಕೊಡುವ ದಾರಿಯೂ ಗೊತ್ತಿದೆ. ಇನ್ನು ಯಾರಾದರೂ ನಮ್ಮ ಧರ್ಮಗುರುಗಳು ನಮ್ಮ ಧಾರ್ಮಿಕ ಕೇಂದ್ರಗಳು, ನಮ್ಮ ಸಾಮಾಜಿಕ ನೇತಾರರ ವಿರುದ್ದ ಯಾರೇ ಮಾತನಾಡಿದರೇ ಅದು ಅವರ ಕೊನೆಯ ಮಾತಾಗಿರಬೇಕು. ಮರುದಿವಸ ಆ ರೀತಿ ಮಾತನಾಡಿದವರ ನಾಲಿಗೆ ಇಲ್ಲದಾಗಬೇಕು ಅಥವಾ ಮಾತನಾಡುವವರೇ ಇಲ್ಲದಾಗಬೇಕು ಆ ಚಿಂತನೆಯಲ್ಲಿ ಹಿಂದೂ ಸಮಾಜ ಮುಂದಡಿಯಿಡಬೇಕು, ಅದಕ್ಕಾಗಿ ನಾವು ಸಂಘಟಿತರಾಗಬೇಕು ಎಂದಿದ್ದು ಪ್ರಚೋದನಕಾರಿ ಎಂದು ಪ್ರಕರಣ ದಾಖಲಾಗಿದೆ.























































































































error: Content is protected !!
Scroll to Top