ರಾಜ್ಯ ಜೂನಿಯರ್ ಅಥ್ಲೆಟಿಕ್ – ಅನುರಾಗ್‌ಗೆ ಚಿನ್ನದ ಪದಕ

ಉಡುಪಿ : ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದ ಗುಂಡು ಎಸೆತ ಅಂಡರ್ 18ರ ವಯೋಮಿತಿಯ ವಿಭಾಗದಲ್ಲಿ ಅನುರಾಗ್‌ ಜಿ. ಅವರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಅನುರಾಗ್‌ ಅವರು 17.15 ಮೀಟರ್ ದೂರ ಗುಂಡು ಎಸೆದಿರುತ್ತಾರೆ. ಈ ಮೂಲಕ ಮುಂದಿನ ಅಕ್ಟೋಬರ್‌ನಲ್ಲಿ ಒರಿಸ್ಸಾ ಹಾಗೂ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಿನಿ ರಾಜೇಶ್ ಶೆಟ್ಟಿ ತರಬೇತಿ ನೀಡಿರುತ್ತಾರೆ. ಅನುರಾಗ್‌ ಅವರು ಕಾರ್ಕಳ ಬಿಎಸ್‌ಎನ್‌ಎಲ್‌ ಉದ್ಯೋಗಿ ಗುರುರಾಜ್‌ ಟಿ.ಟಿ. ಹಾಗೂ ರಮಣಿ ದಂಪತಿ ಪುತ್ರ.































































































error: Content is protected !!
Scroll to Top