ವೈಬ್ರೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗೋಲ್ ಸೆಟ್ಟಿಂಗ್ – ಕೌಶಲ್ಯಾಧಾರಿತ ಕಾರ್ಯಾಗಾರ

ಮೂಡುಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಗೋಲ್ ಸೆಟ್ಟಿಂಗ್ ಎಂಬ ವಿಷಯದ ಕುರಿತು ಕೌಶಲ್ಯಾಧಾರಿತ ಕಾರ್ಯಾಗಾರ ನಡೆಯಿತು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಮಾತನಾಡಿ, ಭವಿಷ್ಯದ ಗುರಿಯನ್ನು ನಿಗದಿಪಡಿಸುವ ಮತ್ತು ಅದನ್ನು ಕಾರ್ಯಗತಗೊಳಿಸಲು ಸರಿಯಾದ ಯೋಜನೆಯ ರೂಪಿಸುವುದರ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೇ ತಿಳಿದುಕೊಳ್ಳಬೇಕು ಎಂದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವರ್ಷಾ ಕಾಮತ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮುಂದಿನ ಜೀವನ ಹೇಗೆ ಇರಬೇಕು ಎಂಬುದನ್ನು ನಿರ್ಧರಿಸಿ, ತಮ್ನ ಕನಸಿನ ಬದುಕನ್ನು ನನಸಾಗಿಸುವಲ್ಲಿ ಕಾರ್ಯೋನ್ಮುಖರಾಗಬೇಕು. ಋಣಾತ್ಮಕ ಯೋಚನೆಗಿಂತ ಧನಾತ್ಮಕ ಯೋಚನೆಯ ಕಡೆಗೆ ಹೆಚ್ಚು ಒತ್ತುಕೊಡುವುದನ್ನು ಕಲಿತಾಗ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಶ್ ಝಾ, ಶರತ್ ಗೋರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು.





























































































































error: Content is protected !!
Scroll to Top