ಪಶು ವೈದ್ಯಕೀಯ ನಿವೃತ್ತ ಪರಿವೀಕ್ಷಕ ಕೆ. ಭಾಸ್ಕರ್ ರಾವ್‌‌‌ ನಿಧನ

ಕಾರ್ಕಳ : ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಪರಿವೀಕ್ಷಕ, ಪುಲ್ಕೇರಿ ನಿವಾಸಿ ಕೆ. ಭಾಸ್ಕರ್ ರಾವ್‌‌‌ ಲಾಡ್ (75) ಜು. 31 ರ ಮುಂಜಾನೆ ನಿಧನ ಹೊಂದಿದರು. ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ಸಮಾಜದಲ್ಲಿ ಆದರ್ಶಪ್ರಾಯರಾಗಿದ್ದ ಅವರು ಧಾರ್ಮಿಕ ಹಾಗೂ ಸಮುದಾಯದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ ಸುಮಿತ್ರಾ, ಪುತ್ರರಾದ ಎಂಸಿಎಫ್ ನ ಜೆಜೆಎಂ ಕೀರ್ತನ್ ಕುಮಾರ್ ಲಾಡ್, ಬೆಂಗಳೂರಿನಲ್ಲಿ ಇಂಜಿನೀಯರ್ ಆಗಿರುವ ಪ್ರವೀಣ್ ಕುಮಾರ್ ಲಾಡ್, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಗುರುವಾರ ಪುಲ್ಕೇರಿಯಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.































































































error: Content is protected !!
Scroll to Top