ಅರಣ್ಯ ಇಲಾಖೆ ವಾಚ್‌ಮೆನ್‌ ವಿಷ ಸೇವನೆ – ಚಿಕಿತ್ಸೆಗೆ ಸ್ಪಂದಿಸದೆ ಸಾವು

ಕಾರ್ಕಳ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅರಣ್ಯ ಇಲಾಖೆಯ ವಾಚ್‌ಮೆನ್‌ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಜು. 24ರಂದು ನಡೆದಿದೆ. ವೇದವ್ಯಾಸ (50) ಮೃತರು. ಇವರು ಸುಮಾರು 12 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ವಾಚ್‌ಮೆನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಅಣ್ಣನ ಮಗ ಸುಮಂತ್‌ ಅವರೊಂದಿಗೆ ಕಾರ್ಕಳ ಕಸಬಾ ಗ್ರಾಮದ ಅನಂತಶಯನ ಎಂಬಲ್ಲಿ ವಾಸವಾಗಿದ್ದರು. ಕಳೆದ ನವಂಬರ್‌ ತಿಂಗಳಲ್ಲಿ ಇವರಿಗೆ ಕ್ಯಾನ್ಸರ್‌ ಕಾಯಿಲೆ ಇರುವ ಬಗ್ಗೆ ತಿಳಿದು ನಂತರ ಮನೆಯಲ್ಲಿದ್ದು, ಇದೇ ಕಾರಣದಿಂದ ಮನನೊಂದು ಮಾ. 3ರಂದು ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಚಿಕಿತ್ಸೆ ಫಲಕಾರಿಯಾಗದೆ ಜು. 24 ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top