ಬೋಳ ಗ್ರಾ.ಪಂ. ಪ್ರತಿಭಟನೆ : ಇಬ್ಬರ ಜಗಳ – ದೂರು – ಪ್ರತಿದೂರು ದಾಖಲು

ಕಾರ್ಕಳ : ಬೋಳ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆ ಸಂಬಂಧಿಸಿದಂತೆ ಗ್ರಾಮಸ್ಥರಿಬ್ಬರ ನಡುವೆ ಜಗಳ ನಡೆದಿದ್ದು ಈ ಬಗ್ಗೆ ಇಬ್ಬರಿಂದಲೂ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೋಳ ಗ್ರಾಮದ ರೊನಾಲ್ಡ್‌ ಅಲ್ಪೋನ್ಸ್‌ ನೀಡಿದ ದೂರಿನಲ್ಲಿ, ಅವರು ಜು. 25ರಂದು ಬೋಳ ಬೋಪಾಡಿ 5 ಸೆಂಟ್ಸ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೋಳ ಪಂಚಾಯತ್‌ ಸದಸ್ಯ ಕಿರಣ್ ಅಡ್ಡಕಟ್ಟಿ ಜು. 22ರಂದು ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿಚಾರವಾಗಿ ರೊನಾಲ್ಡ್‌ ಅಲ್ಪೋನ್ಸ್‌ ಅವರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು, ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ಕಿರಣ್‌ ನೀಡಿದ ದೂರಿನಲ್ಲಿ, ಜು. 25ರಂದು ಕಿರಣ್‌ ಬೋಳ ಗ್ರಾಮದ ಪಿಲಿಯೂರಿನಲ್ಲಿರುವ ದತ್ತಗುರು ಜನರಲ್‌ ಸ್ಟೋರ್‌ನಲ್ಲಿ ಟೀ ಕುಡಿದು ಅಲ್ಲಿಂದ ನಡೆದುಕೊಂಡು ಹಿಂದೆ ಬರುತ್ತಿರುವಾಗ ರೋನಿ ಅಲ್ಫೋನ್ಸಾ ಬೈಕ್‌ನಲ್ಲಿ ಬಂದು ಕಿರಣ್‌ನನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.





























































































































error: Content is protected !!
Scroll to Top