ಪರಶುರಾಮ ಥೀಮ್‌ ಪಾರ್ಕ್ ಕಾಮಗಾರಿ ಯಾವಾಗ ಆರಂಭಿಸುತ್ತೀರಿ – ಸುಮಿತ್‌ ಶೆಟ್ಟಿ ಕೌಡೂರು ಪ್ರಶ್ನೆ

ಕಾರ್ಕಳ : ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಪ್ರವಾಸೋದ್ಯಮ ಕೇಂದ್ರವಾಗಿ ನಿರ್ಮಿಸಿದ್ದ ಐತಿಹಾಸಿಕ ಪರಶುರಾಮ ಥೀಮ್‌ ಪಾರ್ಕ್ ಅನ್ನು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಆ್ಯಂಡ್ ಗ್ಯಾಂಗ್ ನಾನಾ ಸುಳ್ಳು ಸುದ್ದಿ ಸೃಷ್ಟಿಸಿ, ವಿವಾದಗೊಳಿಸಿ ಹಾಳುಗೆಡವಿತ್ತು. ಆದರೀಗ ಅವರ ಆರೋಪಗಳು ಸುಳ್ಳಾಗಿವೆ. ಆದ್ದರಿಂದ ಪ್ರವಾಸೋದ್ಯಮ ದೃಷ್ಟಿಯಿಂದ ಥೀಮ್‌ ಪಾರ್ಕ್‌ನ ಕಾಮಗಾರಿ ಯಾವಾಗ ಆರಂಭ ಮಾಡುತ್ತೀರಿ ಎಂದು ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಜಿಲ್ಲಾಧಿಕಾರಿಗೆ ಪ್ರಶ್ನಿಸಿದ್ದಾರೆ.

ಜನರಲ್ಲಿ ಕ್ಷಮೆ ಕೇಳಲಿ
ಕಾರ್ಕಳದ ಕಾಂಗ್ರೆಸ್‌ನವರು ಥೀಮ್‌ ಪಾರ್ಕ್ ಕುರಿತು ಸುಳ್ಳು ಸುದ್ದಿ, ಅಪಪ್ರಚಾರ ನಡೆಸಿ ವಿವಾದ ಸೃಷ್ಟಿಸಿದ್ದರು. ನಮ್ಮದೇ ಸರಕಾರ ಇದೆ ಎನ್ನುವ ಕಾರಣಕ್ಕೆ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡು, ಒಂದೊಳ್ಳೆ ದೂರದೃಷ್ಟಿಯ ಯೋಜನೆಯ ಕಾಮಗಾರಿ ಮುಂದುವರೆಯಲು ತಡೆಯೊಡ್ಡಿ ಯೋಜನೆಗೆ ಅಡ್ಡಿಪಡಿಸಿದ್ದರು. ಖಾಸಗಿ ದೂರಿನ ಅನ್ವಯ ಒಂದು ಸರಕಾರಿ ಕಾಮಗಾರಿ ನಿಲ್ಲಿಸಿದ ಕೀರ್ತಿ ಉದಯ ಶೆಟ್ಟಿ ಆ್ಯಂಡ್ ಗ್ಯಾಂಗ್‌ಗೆ ಸಲ್ಲುತ್ತದೆ. ಕಾಂಗ್ರೆಸ್‌ಗೆ ಥೀಮ್‌ ಪಾರ್ಕ್ ಬೇಡವಾದರೆ, ಬೈಲೂರಿನ ಜನತೆಗೆ, ಕ್ಷೇತ್ರದ ಜನತೆಗೆ ಬೇಕು. ಪ್ರತಿಮೆ ಪೈಬರ್ ಅಂತ ಅಪಪ್ರಚಾರ ನಡೆಸಿ ಕಾರ್ಕಳದ ಮಾನವನ್ನು ವಿಶ್ವ ಮಟ್ಟದಲ್ಲಿ ಹರಾಜು ಹಾಕಿದ ಕಾಂಗ್ರೆಸ್ಸಿಗರು ಪೈಬರ್ ಅಲ್ಲ ಅಂತಾದ ಮೇಲೆ ಕ್ಷಮೆ ಕೇಳಬೇಕಿತ್ತು ಎಂದು ಸುಮಿತ್‌ ಶೆಟ್ಟಿ ಸರಕಾರ ಇದೆ ಅಂತ ಅಧಿಕಾರವನ್ನು ಸ್ವಾರ್ಥ ಸಾಧನೆಗೆ ಬಳಸಿಕೊಂಡ ಕಾಂಗ್ರೆಸ್ಸಿಗರು ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಯೋಜನೆಯು ಮೂಲ ಒಪ್ಪಂದಂತೆ ಕಾಮಗಾರಿ ಪೂರ್ಣಗೊಂಡು ಇಲಾಖೆಗೆ ಹಸ್ತಾಂತರವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳದೆ ಕಾಂಗ್ರೆಸ್ಸಿಗರು ವಿವಾದ ಸೃಷ್ಟಿಸಿದ್ದರು. ಆದರೀಗ ಕಾಂಗ್ರೆಸ್ಸಿನ ಅಪಪ್ರಚಾರ ಸುಳ್ಳೆಂದು ಸಾಬೀತುಗೊಂಡಿದೆ. ತನಿಖೆ ಮುಂದುವರೆಯಲಿ. ನಮ್ಮದೇನು ಆಕ್ಷೇಪವಿಲ್ಲ. ಕಾಮಗಾರಿ ಯಾವಾಗ ಆರಂಭಿಸುತ್ತೀರಿ ? ಯಾವಾಗ ಪಾರ್ಕ್‌ ಅನ್ನು ಸಾರ್ವಜನಿಕ ವೀಕ್ಷಣೆಗೆ ಬಿಟ್ಟು ಕೊಡ್ತಿರಿ ಅಂತ ಜಿಲ್ಲಾಧಿಕಾರಿಗಳು ಹೇಳಬೇಕು ಎಂದು ಸುಮಿತ್‌ ಶೆಟ್ಟಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.



































































































error: Content is protected !!
Scroll to Top