‌ಕಾರ್ಕಳ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ‌ ದಿಢೀರ್ ಭೇಟಿ

ಕಚೇರಿ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದಲೇ ಅಹವಾಲು ಆಲಿಸಿದ ಡಿಸಿ

ಕಾರ್ಕಳ : ಉಡುಪಿಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಜು. 11ರಂದು ಕಾರ್ಕಳ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಾರ್ಯನಿಮಿತ್ತ ಆಗಮಿಸಿದ ಸಾರ್ವಜನಿಕರ ಅಹವಾಲು ಆಲಿಸಿದರು.
ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ತಾಲೂಕು ಕಚೇರಿಗೆ ಭೇಟಿ ನೀಡಿದ ಅವರು ಇ-ಆಫೀಸ್‌, ಉಪ ನೋಂದಣಾಧಿಕಾರಿ ಕಚೇರಿ, ಆಧಾರ್‌ ಕೇಂದ್ರ, ಭೂಮಿ ಕೇಂದ್ರ, ಕಂದಾಯ ಶಾಖೆಗೆ ತೆರಳಿ ಅಲ್ಲಿನ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದರು.

ಊಟಕ್ಕೆ ತೆರಳಿದ ಖಜಾನಾಧಿಕಾರಿ
ಉಪ ಖಜಾನಾಧಿಕಾರಿ ಕಚೇರಿಗೆ ತೆರಳಿದ ವೇಳೆ ಅಲ್ಲಿ ಖಜಾನಾಧಿಕಾರಿ ಇಲ್ಲದಿರುವ ಬಗ್ಗೆ ಸಿಬ್ಬಂದಿ ಅವರಲ್ಲಿ ಕೇಳಿದಾಗ ಖಜಾನಾಧಿಕಾರಿ ಊಟಕ್ಕೆ ಹೋಗಿರುವ ಬಗ್ಗೆ ಮಾಹಿತಿ ನೀಡಿದರು. ನಾನು ಬಂದಿದ್ದೇನೆ ಎಂದು ಊಟಕ್ಕೆ ತೆರಳಿದ್ದಾರೆಯೇ ಎಂದು ಡಿಸಿ ಪ್ರಶ್ನಿಸಿದರು.

ಕಡತ ವಿಲೇವಾರಿಗೊಳಿಸಿ
ವಿಷಯ ನಿರ್ವಾಹಕರ ಬಳಿಯಿರುವ ಬಾಕಿ ಕಡತಗಳು ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಡಿಸಿಯವರು ತಾಕೀತು ಮಾಡಿದರು.
ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್., ಉಪ ತಹಶೀಲ್ದಾರರಾದ ಮಂಜುನಾಥ ನಾಯಕ್‌, ಹರಿಪ್ರಸಾದ್‌, ಮಹೇಶ್‌, ಕಂದಾಯ ನಿರೀಕ್ಷಕರಾದ ರಿಯಾಜ್‌, ಪ್ರಭಾರ ಉಪ ನೋಂದಣಾಧಿಕಾರಿ ಅಬ್ದುಲ್‌ ರೆಹಮನ್‌, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







































































error: Content is protected !!
Scroll to Top